Asianet Suvarna News Asianet Suvarna News

ಬೈ ಎಲೆಕ್ಷನ್ ಮುಂದೂಡಿಕೆ: ಹಾಲಿ ಸಚಿವರಿಗೆ ಮತ್ತಷ್ಟು ಹೆಚ್ಚುವರಿ ಖಾತೆ ಹಂಚಿಕೆ

ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆ ಮುಂದೂಡಿಕೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಬಳಿಯೇ ಬಾಕಿ ಉಳಿದಿದ್ದ ಖಾತೆಗಳನ್ನು ಹಾಲಿ ಸಚಿವರಿಗೆ ವರ್ಗಾಯಿಸುವ ಮೂಲಕ ಹೆಚ್ಚುವರಿ ಹೊಣೆಗಾರಿಕೆ ನೀಡಿದ್ದಾರೆ. ಯಾರಿಗೆ ಯಾವ ಖಾತೆ? ಈ ಕೆಳಗಿನಂತಿದೆ.

Karnataka CM bs yediyurappa allocates additional portfolios to ministers
Author
Bengaluru, First Published Sep 27, 2019, 9:44 PM IST

ಬೆಂಗಳೂರು, [ಸೆ.27]: ರಾಜ್ಯದ 15 ಕ್ಷೇತ್ರಗಳ ಬೈ ಎಲೆಕ್ಷನ್ ಮುಂದೂಡಿರುವ ಹಿನ್ನೆಯಲ್ಲಿ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ  ಸಚಿವ ಸಂಪುಟದ ಹಾಲಿ ಸಚಿವರಿಗೆ ಹೆಚ್ಚುವರಿ ಖಾತೆಗಳನ್ನು ನೀಡಿದ್ದಾರೆ.

ಬೈ ಎಲೆಕ್ಷನ್‌ಗೆ ಹೊಸ ಡೇಟ್ ಫಿಕ್ಸ್: ಅನರ್ಹ ಶಾಸಕರಿಗೆ ಮತ್ತೆ ಟೆನ್ಷನ್ ಶುರು

15 ಅನರ್ಹ ಕ್ಷೇತ್ರಗಳಿಗೆ ಉಪ ಚುನಾವಣೆಯ ಬಳಿಕ ಸಂಪುಟ ವಿಸ್ತರಣೆ ಮಾಡಲು ಯಡಿಯೂರಪ್ಪ ಉದ್ದೇಶವಾಗಿತ್ತು. ಅನರ್ಹರು ಬಿಜೆಪಿಗೆ ಸಪೋರ್ಟ್ ಮಡಿದ್ದರಿಂದ ಅವರಿಗೆ ಸ್ಥಾನಮಾನ ನೀಡಲು ಕೆಲ ಖಾತೆಗಳನ್ನು ಬಿಎಸ್ ವೈ ತಮ್ಮ ಹತ್ತಿರ ಉಳಿಸಿಕೊಂಡಿದ್ದರು. ಆದ್ರೆ ಉಪಚುನಾಣೆ ಡಿಸೆಂಬರ್ ಗೆ ಮುಂದೂಡಿರುವುದರಿಂದ ಈಗಿರುವ ಖಾತೆಗಳ ಜತೆಗೆ ಹೆಚ್ಚಯವರಿ ಖಾತೆಗಳನ್ನು ಸಚಿವರಿಗೆ ಹಂಚಿಕೆ ಮಾಡಲಾಗಿದೆ. 

17 ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ

ತೀವ್ರ ಕುತೂಹಲ ಮೂಡಿಸಿರುವ ಬೆಂಗಳೂರು ನಗರಾಭಿವೃದ್ಧಿಯನ್ನು ಬಿಎಸ್ ವೈ ಬಿಟ್ಟುಕೊಟ್ಟಿಲ್ಲ.  ಹಾಗಾದ್ರೆ ಯಾರಿಗೆ ಯಾವ ಹೆಚ್ಚುವರಿ ಖಾತೆ ಸಿಕ್ಕಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
    
ಯಾರಿಗೆ ಯಾವ ಹೆಚ್ಚುವರಿ ಖಾತೆ?
 ಡಾ.ಅಶ್ವತ್ಥ್ ನಾರಾಯಣ [ಉಪಮುಖ್ಯಮಂತ್ರಿ]- ಉನ್ನತ ಶಿಕ್ಷಣ ಖಾತೆ ಜತೆ ವೈದ್ಯಕೀಯ ಶಿಕ್ಷಣ ಖಾತೆ
ಡಿಸಿಎಂ ಲಕ್ಷ್ಮಣ್ ಸವದಿ[ಉಪಮುಖ್ಯಮಂತ್ರಿ]-ಸಾರಿಗೆ ಜತೆ ಕೃಷಿ ಖಾತೆ
ಕೆ.ಎಸ್.ಈಶ್ವರಪ್ಪ- ಗ್ರಾಮೀಣ ಮತ್ತು ಪಂಚಯಾತ್ ರಾಜ್ ಖಾತೆ ಜತೆ ಯುವಜನಸೇವೆ ಮತ್ತು ಕ್ರೀಡೆ
ವಿ.ಸೋಮಣ್ಣ- ವಸತಿ ಜತೆಗೆ ಹೆಚ್ಚುವರಿಯಾಗಿ ತೋಟಗಾರಿಕೆ & ರೇಷ್ಮೆ ಖಾತೆ.
ಸಿ.ಟಿ.ರವಿ- ಪ್ರವಾಸೋದ್ಯಮ ಖಾತೆ ಜತೆ ಸಕ್ಕರೆ ಖಾತೆ ಹಂಚಿಕೆ
ಬಸವರಾಜ್ ಬೊಮ್ಮಾಯಿ- ಗೃಹ ಖಾತೆ ಜತೆ ಸಹಕಾರ ಖಾತೆ
ಸಿ.ಸಿ.ಪಾಟೀಲ್ - ಗಣಿ ಮತ್ತು ಭೂವಿಜ್ಞಾನ ಜತೆ ಅರಣ್ಯ, ಪರಿಸರ ಹಾಗೂ ಜೀವವೈವಿಧ್ಯ ಖಾತೆಯೂ ಹೆಚ್ಚುವರಿ
ಎಚ್.ನಾಗೇಶ್ - ಅಬಕಾರಿ ಖಾತೆ ಜತೆ ಕೌಶಲ್ಯಾಭಿವೃದ್ಧಿ ಖಾತೆ
ಪ್ರಭು ಚೌಹಾಣ್ - ಪಶು ಸಂಗೋಪನೆ   ಜತೆ ಅಲ್ಪಸಂಖ್ಯಾತ ಕಲ್ಯಾಣ, ಹಜ್ & ವಕ್ಫ್
ಅಶೋಕ್- ಕಂದಾಯದ ಜತೆ ಪೌರಾಡಳಿತ, ಪಾಲಿಕೆ, ಸ್ಥಳೀಯ ಸಂಸ್ಥೆ ಖಾತೆ
ಜಗದೀಶ್ ಶೆಟ್ಟರ್- ಭಾರಿ ಮತ್ತು ಮಧ್ಯಮ ಕೈಗಾರಿಕೆ ಖಾತೆ ಜತೆ ಸಾರ್ವಜನಿಕ ಉದ್ದಿಮೆಗಳ ಖಾತೆ ಹಂಚಿಕೆ
ಬಿ.ಶ್ರೀರಾಮುಲು-ಆರೋಗ್ಯ ಖಾತೆ ಜತೆ ಸಮಾಜಕಲ್ಯಾಣ
ಸುರೇಶ್ ಕುಮಾರ್ -ಪ್ರಾಥಮಿಕ & ಪ್ರೌಢ ಶಿಕ್ಷಣ ಖಾತೆ ಜತೆ ಕಾರ್ಮಿಕ ಖಾತೆ
ಶಶಿಕಲಾ ಜೊಲ್ಲೆ ಅಣ್ಣಾಸಾಹೇಬ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಜತೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ ನೀಡಲಾಗಿದೆ.

Follow Us:
Download App:
  • android
  • ios