Asianet Suvarna News Asianet Suvarna News

ಬೆಂಗಳೂರು ಕಬ್ಬನ್‌ ಪಾರ್ಕಲ್ಲಿ ಇವ್ರು ಫಾರೆಸ್ಟ್‌ ಬಾತಿಂಗ್‌ ಮಾಡಿಸ್ತಾರಂತೆ; ದುಡ್ಡೇನೂ ಕಡಿಮೆ ಇಲ್ಲ ಬಿಡಿ!

ಎಲ್ಲರಿಗೂ ಸುಲಭವಾಗಿ, ಸಹಜವಾಗಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಬ್ಬನ್‌ ಪಾರ್ಕ್‌ ಪ್ರವೇಶಿಸಬಹುದು. ವಾಕ್‌ ಮಾಡಬಹುದು, ಮರಗಳ ಅಡಿಯಲ್ಲಿ, ನೆರಳಲ್ಲಿ ವಿಶ್ರಾಂತಿ ಮಾಡಬಹುದು. ಆದರೆ, ಇಂತಹ ಸ್ಥಳದಲ್ಲಿ ಫಾರೆಸ್ಟ್‌ ಬಾತಿಂಗ್‌ ಮಾಡಿಸುತ್ತೇವೆ ಎಂದು ಹಣ ಪಡೆಯುವ ಕೆಲಸವೂ ಈಗ ಆರಂಭವಾಗಿದೆ. 
 

Forest bathing in Cubbon Park costs 1500 RS in Bengaluru sum
Author
First Published Apr 19, 2024, 6:40 PM IST

ನಿಸರ್ಗದಲ್ಲಿ ಇರುವುದು, ಪರಿಸರದಲ್ಲಿ ಸ್ವಲ್ಪ ಸಮಯ ಎಲ್ಲ ಚಿಂತೆಗಳನ್ನೂ ದೂರ ಮಾಡಿ ನಲಿಯುವುದು ಎಲ್ಲವೂ ಮನಸ್ಸಿಗೆ ಹಿತ ನೀಡುವ ಸಂಗತಿ. ಇಂದಿನ ಒತ್ತಡದ ಜೀವನದಲ್ಲಂತೂ  ಪರಿಸರದೊಂದಿಗೆ ಒಡನಾಡುವ ಸನ್ನಿವೇಶವನ್ನು ಯಾರೂ ಮಿಸ್‌ ಮಾಡಿಕೊಳ್ಳುವುದಿಲ್ಲ. ನಿಸರ್ಗದಲ್ಲಿ ಸ್ವಲ್ಪ ಸಮಯ ಇರುವುದಕ್ಕಾಗಿಯೇ ಪ್ರವಾಸ ಮಾಡುತ್ತಾರೆ. ಕಾಡು, ಬೆಟ್ಟ, ನದಿ ಬಯಲು, ನದಿ ತೀರ, ಗುಡ್ಡಗಳಲ್ಲಿ ಅಲೆಯುತ್ತಾರೆ. ಟ್ರೆಕ್ಕಿಂಗ್‌ ಯುವಜನರ ಜನಪ್ರಿಯ ಹವ್ಯಾಸವಾಗಿದೆ. ವಯಸ್ಸಾದವರು ಸಹ ನೇಚರ್‌ ಟೂರ್‌ ಹೋಗುತ್ತಾರೆ. ಬೃಹತ್‌ ನಗರದಲ್ಲಿದ್ದುಕೊಂಡು ಪ್ರಕೃತಿಯ ಸನಿಹ ಬೇಕೆಂದರೆ ಅಲ್ಲಿಗೇ ಹೋಗಬೇಕು. ಆದರೂ,  ನಗರದಲ್ಲಿ ಉಸಿರಾಡಿಸಲು ಅವಕಾಶ ಬೇಕೆಂದು ಅಲ್ಲಲ್ಲಿ ದೊಡ್ಡ ದೊಡ್ಡ ಪಾರ್ಕುಗಳನ್ನು ಸೃಷ್ಟಿಸಲಾಗುತ್ತದೆ. ನಮ್ಮ ಬೆಂಗಳೂರಿನಲ್ಲೇ ಕಬ್ಬನ್‌ ಪಾರ್ಕ್‌, ಲಾಲ್‌ ಬಾಗ್‌ ವಿಸ್ತಾರವಾದ ನೈಸರ್ಗಿಕ ಸ್ಥಳಗಳಾಗಿವೆ. ನಗರದಲ್ಲಿರುವ ಮಂದಿ ಇಂತಹ ಸ್ಥಳಗಳಿಗೆ ಆಗಾಗ ಭೇಟಿ ನೀಡುವುದು ಸಹಜ. ಎಷ್ಟೋ ಜನ ಪ್ರತಿದಿನ ಇಲ್ಲಿಗೆ ವಾಕ್‌ ಹೋಗುತ್ತಾರೆ. ಆದರೆ, ಇಲ್ಲಿರುವ ನಿಸರ್ಗವನ್ನೇ ತಮ್ಮ ದುಡಿಮೆಯ ಬಂಡವಾಳವನ್ನಾಗಿ ಮಾಡಿಕೊಳ್ಳುವ ಜನರೂ ಇದ್ದಾರೆ ಎನ್ನುವ ಅಚ್ಚರಿಯ ವಿದ್ಯಮಾನವೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ. 

ಇತ್ತೀಚಿನ ದಿನಗಳಲ್ಲಿ ಫಾರೆಸ್ಟ್‌ ಬಾತಿಂಗ್‌ (Forest Bathing) ಎನ್ನುವ ಕಲ್ಪನೆ ಬೆಳೆದಿದೆ. ಮರಗಿಡಗಳನ್ನು ಅಪ್ಪಿಕೊಂಡು ಸ್ವಲ್ಪ ಸಮಯ ನಿಲ್ಲುವುದು, ಬೃಹತ್‌ ಮರದಿಂದ, ನಿಸರ್ಗದಿಂದ (Nature) ಎನರ್ಜಿಯನ್ನು (Energy) ಪಡೆದುಕೊಳ್ಳುವ ಪದ್ಧತಿ ಇದು. ಅಸಲಿಗೆ ಇದೊಂದು ರೀತಿಯ ಥೆರಪಿ. ಔಷಧ ರಹಿತ ಚಿಕಿತ್ಸಾ ಪದ್ಧತಿಯಾದ ಪ್ರಾಣಿಕ್‌ ಹೀಲಿಂಗ್‌ (Pranic Healing) ನಲ್ಲಿ ಪರಿಣಾಮಕಾರಿಯಾಗಿ ಈ ಕ್ರಿಯೆಯನ್ನು ಮಾಡುವ ಬಗ್ಗೆ ಹೇಳಲಾಗುತ್ತದೆ. ಅದಿರಲಿ, ವಿಷಯ ಬೇರೆಯೇ ಇದೆ. ಈಗ ಬೆಂಗಳೂರಿನಲ್ಲಿ (Bengaluru) ಇರುವ ಕಾಡುಪ್ರದೇಶ, ಮರಗಿಡಗಳು ಕಡಿಮೆಯೇ. ಆದರೂ, ಇಲ್ಲಿ “ಫಾರೆಸ್ಟ್‌ ಬಾತಿಂಗ್‌ ಮಾಡಿಸುತ್ತೇವೆʼ ಎಂದು ಎಕ್ಸ್‌ ಖಾತೆಯಲ್ಲಿ ಬಳಕೆದಾರರೊಬ್ಬರು ಹಾಕಿರುವ ಪೋಸ್ಟ್‌ (Post) ಇದೀಗ ವೈರಲ್‌ (Viral) ಆಗಿದೆ ಹಾಗೂ ಜನರನ್ನು ಎಚ್ಚೆತ್ತುಕೊಳ್ಳುವಂತೆಯೂ ಮಾಡಿದೆ.

ಇಂಡಿಗೋ ವಿಮಾನದಲ್ಲಿ ನೀಡೋ ಉಪ್ಪಿಟ್ಟಲ್ಲಿ ಮ್ಯಾಗಿಗಿಂತ ಹೆಚ್ಚು ಸೋಡಿಯಂ ಇದೆಯೆಂಂದ ಹೆಲ್ತ್ ಇನ್‌ಫ್ಲುಯೆನ್ಸರ್!

ಪುಕ್ಕಟೆಯಾಗಿ ಎಲ್ಲರಿಗೂ ಸಿಗುವ ಕಬ್ಬನ್‌ ಪಾರ್ಕಿನಲ್ಲಿರುವ (Cubbon Park) ನಿಸರ್ಗದಲ್ಲಿ ಫಾರೆಸ್ಟ್‌ ಬಾತಿಂಗ್‌ ನಡೆಸುವ ಬಗ್ಗೆ ಹಾಕಿರುವ ಜಾಹೀರಾತು ಸೋಷಿಯಲ್‌ ಮೀಡಿಯಾದಲ್ಲಿ (Social Media) ವೈರಲ್‌ ಆಗಿದೆ. ಟ್ರೋವ್‌ ಎಕ್ಸ್‌ ಪೀರಿಯೆನ್ಸ್‌ ಎಂದು ಹೇಳಿಕೊಂಡಿರುವ ಸಂಸ್ಥೆ ಇದಾಗಿದ್ದು, ಫಾರೆಸ್ಟ್‌ ಬಾತಿಂಗ್‌ ಗಾಗಿ ಒಬ್ಬರಿಗೆ 1500 ರೂಪಾಯಿ ದರ ನಿಗದಿಪಡಿಸಿದೆ! “ದ ಹೀಲಿಂಗ್‌ ಪವರ್‌ ಆಫ್‌ ಫಾರೆಸ್ಟ್‌ʼ ಸೆಷನ್‌ ಅನ್ನು ಹಮ್ಮಿಕೊಳ್ಳುತ್ತಿರುವುದಾಗಿ ಹೇಳಿದೆ. ಈ ಬಗ್ಗೆ ಎಕ್ಸ್‌ ಬಳಕೆದಾರರೊಬ್ಬರು “ಎಚ್ಚೆತ್ತುಕೊಳ್ಳಿ, ಹೊಸದೊಂದು ಮೋಸದ ಕೂಟ ಮಾರುಕಟ್ಟೆಗೆ ಬಂದಿದೆʼ ಎಂದು ಹೇಳಿ ಇದನ್ನು ಶೇರ್‌ ಮಾಡಿದ್ದಾರೆ. ಟ್ರೋವ್‌ ಎಕ್ಸ್‌ ಪೀರಿಯೆನ್ಸ್‌ ಸಂಸ್ಥೆ ನೀಡಿರುವ ಜಾಹೀರಾತಿನ ಸ್ಕ್ರೀನ್‌ ಶಾಟ್‌ ಅನ್ನು ಅವರು ಶೇರ್‌ ಮಾಡಿದ್ದಾರೆ. 

ಇದೇನಿದು ಫಾರೆಸ್ಟ್‌ ಬಾತಿಂಗ್?
ಎಲ್ಲ ಗದ್ದಲದಿಂದ ದೂರವಾಗಿ, ನಿಸರ್ಗದಲ್ಲಿ ಮೌನವಾಗಿ ಹೆಜ್ಜೆ ಹಾಕುವುದು, ಹಸಿರಿನ ವಾತಾವರಣದಲ್ಲಿ ನಿಮ್ಮ ಒಳಗಿನ ದನಿಗೆ ಕಿವಿಯಾಗುವುದು ಸುಂದರ ಅನುಭವ ನೀಡುವಂಥದ್ದು. ಜಪಾನ್‌ ಭಾಷೆಯಲ್ಲಿ ಇದನ್ನು ಶಿನ್ರಿನ್‌ ಯೊಕು (Shinric Yoku) ಎಂದು ಕರೆಯಲಾಗುತ್ತದೆ. ಇದೊಂಥರ ಸೋಲ್‌ ಫುಲ್‌ (Soulful) ವಾಕ್‌. ಇದನ್ನೇ ಫಾರೆಸ್ಟ್‌ ಬಾತಿಂಗ್‌ ಅಥವಾ ನಿಸರ್ಗ ಸ್ನಾನ ಎನ್ನಲಾಗುತ್ತದೆ. ಇದೀಗ, ನಿಸರ್ಗದೊಂದಿಗೆ ಒಡನಾಡುವ ಇಂತಹ ಫಾರೆಸ್ಟ್‌ ಬಾತಿಂಗ್‌ ಮಾಡಿಸುತ್ತೇವೆ ಎಂದು ಕಂಪೆನಿ ಕ್ಲೇಮ್‌ ಮಾಡಿರುವುದು ಅಚ್ಚರಿದಾಯಕ ಸಂಗತಿ. ಅದೂ ಸಹ ಕಬ್ಬನ್‌ ಪಾರ್ಕಿನಲ್ಲಿ ಉಚಿತವಾಗಿ ಎಲ್ಲರಿಗೂ ಲಭ್ಯವಿರುವ ಸ್ಥಳದಲ್ಲಿ ಮಾಡುವ ಕಾರ್ಯಕ್ಕೆ ದರವನ್ನೂ (Price) ವಿಧಿಸಲಾಗಿರುವುದು ಎಲ್ಲರ ಹುಬ್ಬೇರಿಸಿದೆ. ಕಂಪೆನಿಯ ವೆಬ್‌ ಸೈಟ್‌ “ನಿರ್ದೇಶಿತ ಫಾರೆಸ್ಟ್‌ ವಾಕ್‌ ವಿಶಿಷ್ಟ ಅನುಭೂತಿ ನೀಡುತ್ತದೆ. ಸಂಪೂರ್ಣವಾಗಿ ನಿಸರ್ಗ ಸಂಬಂಧಿ ಚಟುವಟಿಕೆಗಳಿಂದ ಕೂಡಿದೆʼ ಎಂದು ಹೇಳಿಕೊಂಡಿದೆ. 

ಅಯ್ಯೋ ಫುಲ್ ಸೆಖೆ ಗುರು... ನ್ಯಾಚುರಲ್ ಸ್ವಿಮ್ಮಿಂಗ್ ಫುಲ್‌ನಲ್ಲಿ ಚಿಲ್‌ ಮಾಡ್ತಿರುವ ಟೈಗರು.!

ಉಚಿತವಾಗಿರೋವಾಗ ಹಣವೇಕೆ ನೀಡಬೇಕು?
ಈ ಬಗ್ಗೆ ಸೋಷಿಯಲ್‌ ಮೀಡಿಯಾ ಬಳಕೆದಾರರು ಎಚ್ಚೆತ್ತುಕೊಂಡಿದ್ದು, 2 ಲಕ್ಷಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ.

 

ಆದರೆ, ಬಹುಶಃ ಪರಿಸ್ಥಿತಿಯ ಅರಿವಿಲ್ಲದ ಸಾವಿರಾರು ಜನ ಇದನ್ನು ಲೈಕೂ ಸಹ ಮಾಡಿದ್ದಾರೆ. “ಕಬ್ಬನ್‌ ಪಾರ್ಕಿನ ನಿಸರ್ಗ ಎಲ್ಲರಿಗೂ ಉಚಿತವಾಗಿ (Free) ದೊರೆಯುವಾಗ ಇದಕ್ಕೆ ಹಣವನ್ನೇಕೆ ನೀಡಬೇಕು?ʼ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. “ನಾನು ಇಲ್ಲಿನ ಜಾಗ ನೋಡಿದ್ದೇನೆ. ಅಲ್ಲಿ ನಾವು ನಿಸರ್ಗದಲ್ಲೇ ಉಸಿರಾಡಿಸಬಹುದು. ನಿಸರ್ಗದಲ್ಲಿ ಸ್ನಾನ ಮಾಡಬಹುದುʼ ಎಂದು ಹಲವರು ಹೇಳಿದ್ದಾರೆ. 

Follow Us:
Download App:
  • android
  • ios