ಎದುರಾಳಿಯ ಜನನಾಂಗಕ್ಕೆ ಕಚ್ಚಿದ ಫುಟ್ಬಾಲ್ ಪಟು; ಹಾಕಬೇಕಾಯ್ತು 10 ಹೊಲಿಗೆ !
ಫುಟ್ಬಾಲ್ ಪಂದ್ಯದಲ್ಲಿ ಸಾಕಷ್ಟು ಗುದ್ದಾಟ ತಳ್ಳಾಟಗಳಾಗಿವೆ. ಹೊಡೆದಾಟದ ಊದಾಹರಣೆಗಳು ನಮ್ಮ ಮುಂದಿದೆ. ಇದೀಗ ಹೊಡೆದಾಟ ಮತ್ತೊಂದು ಹಂತಕ್ಕೆ ಹೋಗಿ ಎದುರಾಳಿಯ ಜನನಾಂಗವನ್ನೇ ಕಚ್ಚಿದ ಘಟನೆ ನಡೆದಿದೆ. ಪ್ರಕರಣದ ವಿವರ ಇಲ್ಲಿದೆ.
ಫ್ರಾನ್ಸ್(ಫೆ.20): ಫುಟ್ಬಾಲ್ ಪಂದ್ಯದಲ್ಲಿನ ಕೆಲ ಘಟನೆಗಳು ಜಗತ್ತನ್ನೇ ಬೆಚ್ಚಿ ಬೀಳಿಸುತ್ತದೆ. ಫುಟ್ಬಾಲಿಗರು ಹೊಡೆದಾಟ ಮಾತ್ರವಲ್ಲ ಅಂಪೈರ್ ಮೇಲೆ ಹಲ್ಲೆ ಮಾಡಿದ ಉದಾಹರಣೆಗಳಿವೆ. ಇದೀಗ ಫ್ರಾನ್ಸ್‌ನಲ್ಲಿ ಎದುರಾಳಿಯ ಜನನಾಂಗಕ್ಕೆ ಕಚ್ಚಿದ ಘಟನೆ ನಡೆದಿದೆ.
ಇದನ್ನೂ ಓದಿ: ಕಾರ್ನರ್ ಕಿಕ್ ಗೋಲ್, 10ರ ಪೋರನ ಫುಟ್ಬಾಲ್ ಆಟಕ್ಕೆ ದಿಗ್ಗಜರೇ ದಂಗು!
ಟರ್ವಿಲೆ ಹಾಗೂ ಸೋಯೆಟ್ರಿಚ್ ನಡುವಿನ ರೋಚಕ ಪಂದ್ಯ 1-1 ಅಂತರದಲ್ಲಿ ಡ್ರಾಗೊಂಡಿತು. ಪಂದ್ಯದಲ್ಲಿ ಸಾಕಷ್ಟು ವಾದ-ವಿವಾದಗಳು ನಡೆದಿತ್ತು. ಆದರೆ ಪಂದ್ಯ ಮುಗಿದ ಬಳಿಕ ಕಾರು ಪಾರ್ಕಿಂಗ್‌ನಲ್ಲಿ ಆಟಗಾರರಿಬ್ಬರ ನಡುವೆ ಜಗಳ ಶುರುವಾಗಿದೆ.
ಇದನ್ನೂ ಓದಿ: ದುಬಾರಿ ಕಾರಿಲ್ಲ, ಫೋನಿಲ್ಲ; ಕೋಟಿ ಆದಾಯದ ಮಾನೆ ಹೃದಯ ಶ್ರೀಮಂತಿಕೆಗೆ ಸರಿಸಾಟಿ ಯಾರೂ ಇಲ್ಲ!
ಟರ್ವಿಲೆ ಆಟಗಾರ ಫುಟ್ಬಾಲ್ ಪಟುಗಳ ಜಗಳ ಬಿಡಿಸಲು ಮುಂದಾಗಿದ್ದಾನೆ. ಆದರೆ ರೊಚ್ಚಿಗೆದ್ದ ಸೋಯೆಟ್ರಿಚ್ ಆಟಗಾರ ಎದುರಾಳಿಯ ಜನನಾಂಗಕ್ಕೆ ಕಚ್ಚಿದ್ದಾನೆ. ಯಾವ ಪರಿ ಕಚ್ಚಿದ್ದಾನೆ ಎಂದರೆ ಎದುರಾಳಿಯ ಜನನಾಂಗಕ್ಕೆ 10 ಹೊಲಿಗೆ ಹಾಕಲಾಗಿದೆ. ಇತ್ತ ಜನನಾಂಗ ಕಚ್ಚಿದ ಫುಟ್ಬಾಲ್ ಪಟುವಿಗೆ 5 ವರ್ಷ ನಿಷೇಧ ಹೇರಲಾಗಿದೆ.