Asianet Suvarna News Asianet Suvarna News

ಚಿಹ್ನೆ ಆಯ್ಕೆಯಲ್ಲೂ ಜೆಡಿಎಸ್‌ಗೆ ಟಕ್ಕರ್ ಕೊಟ್ಟ ಸುಮಲತಾ ಅಂಬರೀಶ್..!

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್‌ಗೆ ಯಾವ ಚಿಹ್ನೆ ಸಿಗುತ್ತೆ ಎನ್ನುವ ಕುತೂಹಲ ಮಂಡ್ಯದಾದ್ಯಂತ ಮಾತ್ರವಲ್ಲದೇ ಇಡೀ ರಾಜ್ಯಾದ್ಯಂತ ಕುತೂಹಲ.  ಆ ಕುತೂಹಲಕ್ಕ  ಇದೀಗ ತೆರೆಬಿದ್ದಿದೆ.  ಸುಮಲತಾ ಹೆಸರಿನ ಮೂವರಿದಂದ ನಾಮಪತ್ರ ಸಲ್ಲಿಸಿ ಸುಮಲತಾ ಅಂಬರೀಶ್ ವಿರುದ್ಧ ರಣತಂತ್ರ ಹೆಣೆದಿದ್ದ ಜೆಡಿಎಸ್ ಗೆ, ಸುಮಲತಾ ಅಂಬರೀಶ್ ಚಿಹ್ನೆ ಆಯ್ಕೆಯಲ್ಲಿ ದಳಪತಿಗಳಿಗೆ ಶಾಕ್ ಕೊಟ್ಟಿದ್ದಾರೆ.

Mandya independent candidate Sumalatha urges for farmer symbol as Tit for tat to JDS
Author
Bengaluru, First Published Mar 26, 2019, 5:53 PM IST

ಮಂಡ್ಯ, (ಮಾ.26): ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ದಿನ ದಿನಕ್ಕೂ ರಂಗು ಪಡೆಯುತ್ತಿದೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರವಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್‌ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ. 

ಫುಲ್ ಟಕ್ಕರ್ ಕೊಡುತ್ತಿರುವ ಸುಮಲತಾ ಅವರನ್ನು ಶತಾಯಗತಾಯವಾಗಿ ಮಣಿಸಲು ದಳಪತಿಗಳು ನಾನಾ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. 

ಯಾಕಂದ್ರೆ ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಮಾತ್ರವಲ್ಲದೇ ಸಿಎಂ ಪುತ್ರ ಆಗಿರುವುದರಿಂದ ಗೆಲ್ಲಲೇ ಬೇಕಾದ ಅನಿವಾರ್ಯ ಇರುವುದರಿಂದ ಕುಮಾರಸ್ವಾಮಿ ಅವರು ಈ ಕ್ಷೇತ್ರವನ್ನು ಪ್ರತಿಷ್ಠಯಾಗಿ ತೆಗೆದುಕೊಂಡಿದ್ದಾರೆ.

ಇದು ಊಹೆಗೆ ಮೀರಿದ್ದು! ರೆಬೆಲ್ ಸುಮಲತಾಗೆ ಮಂಡ್ಯ ಆಗಿ ಕಣದಲ್ಲಿ ಶಾಕ್

ಸುಮಲತಾ ಹೆಸರಿನ 3 ನಾಮಪತ್ರ
ಮತದಾರರಲ್ಲಿ ಗೊಂದಲ ಸೃಷ್ಟಿಸಲು ದಳಪತಿಗಳು, ಸುಮಲತಾ ಹೆಸರಿನ ಮೂವರಿದಂದ ನಾಮಪತ್ರ ಹಾಕಿಸಿ ಸುಮಲತಾ ಅಂಬರೀಶ್ ಗೆ ಶಾಕ್ ಕೊಟ್ಟಿದ್ದಾರೆ.  

ಕನಕಪುರ ಮೂಲದ ಪಿ.ಸುಮಲತಾ, ಕೆ.ಆರ್. ಪೇಟೆ ತಾಲೂಕಿನ ಸುಮಲತಾ, ಶ್ರೀರಂಗಪಟ್ಟಣದ ಸುಮಲತಾ ಎಂಬುವರಿಂದ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ. ಈ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡುವುದು ಜೆಡಿಎಸ್ ಮಾಸ್ಟರ್ ಪ್ಲಾನ್.

ದಳಪತಿಗಳ ರಣತಂತ್ರಕ್ಕೆ ಸುಮಲತಾ ಪ್ರತಿತಂತ್ರ
ಹೌದು...ಜಿಲ್ಲೆಯಲ್ಲಿ ಪ್ರಬಲವಾಗಿರುವ ಜೆಡಿಎಸ್ ಅನ್ನು ಸಂಯಮದಿಂದಲೇ ಎದುರಿಸುತ್ತಿರುವ ಸುಮಲತಾ ಅಂಬರೀಶ್ ದಳಪತಿಗಳ ರಣತಂತ್ರಕ್ಕೆ ಪ್ರತಿತಂತ್ರ ಹೆಣೆದಿದ್ದಾರೆ.

ಮಂಡ್ಯ ರಣಾಂಗಣ: ಗಮನ ಸೆಳೆದಿದೆ ಸುಮಲತಾ ಪೋಸ್ಟ್!

ಜೆಡಿಎಸ್ ನಾಯಕರ ತಂತ್ರಕ್ಕೆ ಪ್ರತಿಯಾಗಿ ನಯವಾಗಿಯೇ  ಟಾಂಗ್ ಕೊಡುತ್ತಿರುವ ಸುಮಲತಾ ಅಂಬರೀಶ್, ಇದೀಗ ತಮ್ಮ ಚಿಹ್ನೆ ಕೂಡ ರೈತ ಪರವಾಗಿರಬೇಕು ಎಂಬ ಕಾರಣಕ್ಕೆ 3 ಚಿಹ್ನೆಗಳನ್ನ ಸೆಲೆಕ್ಟ್ ಮಾಡಿದ್ದಾರೆ. 

1.ಕಬ್ಬಿನ ಗದ್ದೆ ಮುಂದೆ ರೈತ, 2.ತೆಂಗಿನ ತೋಟ, 3.ಕಹಳೆ ಊದುತ್ತಿರುವ ರೈತ ಈ ಮೂರು ಚಿಹ್ನೆಗಳನ್ನ ಸುಮಲತಾ ಅಂಬರೀಶ್ ಸೆಲೆಕ್ಟ್ ಮಾಡಿದ್ದು, ಇವುಗಳ ಪೈಕಿ ಒಂದು ಚಿಹ್ನೆ ನೀಡಬೇಕೆಂದು ಚುನಾವಣಾಧಿಕಾರಿಗೆ ತಿಳಿಸಿದ್ದಾರೆ. ಈ ಮೂಲಕ ತೆನೆ ಹೊತ್ತ ರೈತ ಮಹಿಳೆಗೆ (ಜೆಡಿಎಸ್) ಟಕ್ಕರ್ ಕೊಟ್ಟಿದ್ದಾರೆ.

ಮಂಡ್ಯದಲ್ಲಿ ತಾರಕ್ಕಕ್ಕೇರಿದ ಆಡಿಯೋ ವಾರ್: ಮತ್ತೊಂದು ಕ್ಲಿಪ್ ಬಹಿರಂಗ!

ಕಬ್ಬು ಮಂಡ್ಯ ಜಿಲ್ಲೆಯ ಪ್ರಧಾನ ಬೆಳೆ, ಕಬ್ಬಿನ ಗದ್ದೆಯಲ್ಲೇ ರೈತರು ದಿನ ಕಳೆಯುತ್ತಾರೆ. ಇನ್ನು ತೆಂಗಿನ ತೋಟ ಕಲ್ಪವೃಕ್ಷವಿದ್ದಂತೆ. ಮಂಡ್ಯದ ಬಹುತೇಕ ಕಡೆ ತೆಂಗಿನ ಬೆಳೆಯನ್ನ ಬೆಳೆಯಲಾಗುತ್ತೆ. 

ಮಾತ್ರವಲ್ಲ ಇಡೀ ರಾಷ್ಟ್ರದಲ್ಲೇ ಅತಿದೊಡ್ಡ ಎಳನೀರು ಮಾರ್ಕೆಟ್ ಮಂಡ್ಯ ಜಿಲ್ಲೆಯಲ್ಲಿದೆ. ಇನ್ನು ಕಹಳೆ ಸ್ವಾಭಿಮಾನದ ಸಂಕೇತವಾಗಿದೆ.  ಹೀಗಾಗಿ ಈ ಮೂರು ಚಿಹ್ನೆಗಳನ್ನ ಸೆಲೆಕ್ಟ್ ಮಾಡುವ ಮೂಲಕ ಮಂಡ್ಯ ಜನರನ್ನ ಸೆಳೆಯಲು ಸುಮಲತಾ ಅಂಬರೀಶ್ ಮುಂದಾಗಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ನಾಯಕರಿಗೆ ಸುಮಲತಾ ನೇರ ಸವಾಲ್!

ಸ್ಥಳೀಯರಿಗೆ ಟಿಕೆಟ್ ನೀಡದೆ ತಮ್ಮ ಕುಟುಂಬದ ಕುಡಿಯನ್ನ ಕಣಕ್ಕಿಳಿಸಿರುವ ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಮಂಡ್ಯ ವರ್ಸಸ್ ಹಾಸನ ನಡುವಿನ ಸ್ಪರ್ಧೆ ಅಂತಲೇ ವಿಶ್ಲೇಷಿಸಲಾಗುತ್ತಿದೆ. 

ಒಟ್ಟಿನಲ್ಲಿ ಸುಮಲತಾ ಎನ್ನುವರನ್ನು ಮೂವರಿಂದ ನಾಮಪತ್ರ ಸಲ್ಲಿಸಿ ಗೊಂದಲ ಸೃಷ್ಟಿಸಲು ಹೊರಟಿರೋ ಜೆಡಿಎಸ್‌ಗೆ, ಅದೇ ರೀತಿ ಸುಮಲತಾ ಅಂಬರೀಶ್ ಕೂಡ ಜೆಡಿಎಸ್ ಪಕ್ಷದ ಚಿಹ್ನೆಗೆ ಹೋಲು ಚಿಹ್ನೆ ತೆಗೆದುಕೊಂಡು ಟಕ್ಕರ್ ಕೊಡಲು ಮುಂದಾಗಿದ್ದಾರೆ.

ಆದ್ರೆ ಸುಮಲತಾ ಅವರು ಬೇಡಿಕೆ ಇಟ್ಟ ಚಿಹ್ನೆಗಳನ್ನು ಚುನಾವಣಾಧಿಕಾರಿಗಳು ನೀಡುತ್ತಾರೋ ಇಲ್ಲವೋ ಎನ್ನವುದನ್ನು ಕಾದುನೋಡಬೇಕಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು,  ಮೇ 23ಕ್ಕೆ ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios