Asianet Suvarna News Asianet Suvarna News

#FactCheck : PF ಸಂಸ್ಥೆಯಿಂದ ಕಾರ್ಮಿಕರಿಗೆ ₹80,000 ಬಂಪರ್ ಕೊಡುಗೆ!

  • 1990-2018ರ ವರೆಗೆ ಕೆಲಸ ಕಾರ್ಮಿಕರಿಗೆ ಬಂಪರ್‌ ಗಿಫ್ಟ್‌ ಎಂಬ ಸಂದೇಶ!
  • ಈ ಅವಧಿಯಲ್ಲಿ ಕೆಲಸ ಮಾಡಿರುವ ಕಾರ್ಮಿಕರಿಗೆ ₹ 80,000!
  • EPFO ಇಂಥದ್ದೊಂದು ಆಫರ್‌ ಘೋಷಿಸಿದೆಯೇ ಎಂದು ಪರಿಶೀಲಿಸಿದಾಗ ಹೊರಬಂದ ಸತ್ಯ ಬೇರೆ!
Fact Check Truth Behind EPFO Offer To Give Rs 80000 For Workers
Author
Bengaluru, First Published Oct 31, 2019, 9:38 AM IST

ಬೆಂಗಳೂರು (ಅ.31): 'ಭಾರತದ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯು 1990-2018ರ ವರೆಗೆ ಕೆಲಸ ಮಾಡಿರುವ ಕಾರ್ಮಿಕರಿಗೆ 80,000 ರು. ನೀಡುತ್ತಿದೆ. ಇಪಿಎಫ್‌ಒ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನಿಮ್ಮ ಹೆಸರೂ ಇರಬಹುದು ಪರಿಶೀಲಿಸಿ ' ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ EPFO ಇಂಥದ್ದೊಂದು ಆಫರ್‌ ಘೋಷಿಸಿದೆಯೇ ಎಂದು ಕ್ವಿಂಟ್‌ ಸುದ್ದಿಸಂಸ್ಥೆಯು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. 

ನಿಮ್ಮ ವಾಟ್ಸಪ್‌ಗೆ ಬರೋ ಎಲ್ಲಾ ಸುದ್ದಿ ನಿಜವಲ್ಲ! ಅದೆಷ್ಟು ಸರಿ ಅಂತ ಇಲ್ಲಿ ಚೆಕ್ ಮಾಡ್ಕೊಳ್ಳಿ! 

EPFO ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಕಟಣೆಯಾಗಿಲ್ಲ. ಅಲ್ಲದೆ ಅಧಿಕೃತ ವೆಬ್‌ಸೈಟ್‌ನಲ್ಲಿ, ‘EPFO ನಕಲಿ ವೆಬ್‌ಸೈಟ್‌ಗಳ ಬಗ್ಗೆ ಜಾಗೃತರಾಗಿರಿ. ಅವು ಸುಳ್ಳು ಸುದ್ದಿ ಹರಡುತ್ತಿವೆ’ ಎಂದು ಹೇಳಲಾಗಿದೆ. 

ಹಾಗೆಯೇ ವೈರಲ್‌ ಆಗಿರುವ ನಕಲಿ ವೆಬ್‌ಸೈಟ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದಾಗ ಅಧಿಕೃತ ವೆಬ್‌ಸೈಟ್‌ನಂತೆ ಟ್ಯಾಬ್‌ಗಳಿಲ್ಲ. ಸ್ಟಿಲ್‌ ಇಮೇಜ್‌ಗಳಿವೆ ಅಷ್ಟೆ. ಅದರ ಪಕ್ಕದಲ್ಲಿ ನೀವು 1990-2018ರಲ್ಲಿ ಕೆಲಸ ಮಾಡಿದ್ದರೆ EPFO 80000 ರು. ನೀಡಲಿದೆ ಎಂದಿದೆ. 

ಇದನ್ನೂ ಓದಿ | #FactCheck : PF ಸಂಸ್ಥೆಯಿಂದ ಕಾರ್ಮಿಕರಿಗೆ ₹80,000 ಬಂಪರ್ ಕೊಡುಗೆ!...

ಅದರ ಕೆಳಗೆ ನೀವು 18 ವರ್ಷ ಮೇಲ್ಪಟ್ಟವರಾ, ಸದ್ಯ ಉದ್ಯೋಗಿಯಾಗಿದ್ದೀರಾ ಎಂಬ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಹೌದು/ಇಲ್ಲ ಎಂಬ ಉತ್ತರ ನೀಡಿದಾಗ, ‘ಅಭಿನಂದನೆಗಳು, ನೀವು ಈ ಪಟ್ಟಿಯಲ್ಲಿದ್ದೀರಿ. ಆದರೆ ಈ ಸಂದೇಶವನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್‌ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ಮೊಬೈಲ್‌ಗೆ ಮಾಹಿತಿ ಕಳುಹಿಸಲಾಗುತ್ತದೆ ಎಂಬ ಸಂದೇಶ ಕಾಣಿಸುತ್ತದೆ. ಅಲ್ಲಿಗೆ ಇದೊಂದು ನಕಲಿ ಎಂಬುದು ಸ್ಪಷ್ಟ.

2018ರಲ್ಲೂ ಇಂಥದ್ದೇ ಸಂದೇಶ ವೈರಲ್‌ ಆಗಿತ್ತು. ಅದರಲ್ಲಿ 1990-2018ರ ವರೆಗೆ ಕೆಲಸ ಮಾಡಿರುವ ಕಾರ್ಮಿಕರು 72,000 ಹಣವನ್ನು EPFOದಿಂದ ಹಿಂಪಡೆಯಬಹುದು ಎಂದು ಹೇಳಲಾಗಿತ್ತು.

EPFO ಹೆಸರಿನಲ್ಲಿ ಬರೋ ಟೆಲಿಕಾಲ್‌ಗಳಿಗೆ, ಇ-ಮೇಲ್‌ಗಳಿಗೆ, ಸೋಶಿಯಲ್ ಮೀಡಿಯಾ ಸಂದೇಶಗಳಿಗೆ, ಮರುಳಾಗಬೇಡಿ ಎಂದು ಸಂಸ್ಥೆಯು ಸುಳ್ಳು ಆಫರ್‌, ವೆಬ್‌ಸೈಟ್‌ಗಳ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸಿದೆ. 

 

Follow Us:
Download App:
  • android
  • ios