ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ
ಸದ್ಯ ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಎಲ್ಲ ಏಳು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲು ನಿರ್ದೇಶಿಸಿದ್ದು, ನೋಟಿಸ್ ಜಾರಿ ಆದ ಬಳಿಕ ಮುಂದಿನ ವಿಚಾರಣೆ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಸೂಚನೆ ನೀಡಿದೆ.
ಸದ್ಯ ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಎಲ್ಲ ಏಳು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲು ನಿರ್ದೇಶಿಸಿದ್ದು, ನೋಟಿಸ್ ಜಾರಿ ಆದ ಬಳಿಕ ಮುಂದಿನ ವಿಚಾರಣೆ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಸೂಚನೆ ನೀಡಿದೆ.
ಕನ್ನಡದ ನಟ ದರ್ಶನ್ ಬೇಲ್ ವಿರುದ್ಧ ಅರ್ಜಿ ಸಲ್ಲಿಕೆಯಾಗಿದ್ದು ಗೊತ್ತೇ ಇದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Murder Case) ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ್ ಹಾಗೂ ಸ್ನೇಹಿತೆ ಪವಿತ್ರಾಗೌಡ ಸೇರಿದಂತೆ 7 ಮಂದಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ನೀಡಿತ್ತು. ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ಆದೇಶವನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿತ್ತು.
ಇದರ ವಿಚಾರಣೆ ಇಂದು ನಡೆಯಿತು. ಸರ್ಕಾರದ ಪರವಾಗಿ ಹಿರಿಯ ವಕೀಲರಾದ ಸಿದ್ಧಾರ್ಥ್ ಲೋತ್ರಾ ವಾದ ಮಂಡಿಸಿದರು. ಎ1 ಪವಿತ್ರಾಗೌಡ, ಎ2 ದರ್ಶನ್ ಸೇರಿ ದರ್ಶನ್ ಮ್ಯಾನೇಜರ್ ನಾಗರಾಜ್, ಸ್ನೇಹಿತರಾದ ಪ್ರದೋಶ್, ಅನುಕುಮಾರ್, ಲಕ್ಷ್ಮಣ, ಜಗದೀಶ್ ಸೇರಿ 7 ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ.
ಸದ್ಯಕ್ಕೆ ನಟ ದರ್ಶನ್ 'ಡೆವಿಲ್' ಸಿನಿಮಾ ಶೂಟಿಂಗ್ ಮಾಡೋಕೆ ಸಾಧ್ಯವೇ ಇಲ್ವಾ?
ಇನ್ನು, ಸರ್ಕಾರದ ಪರ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್(Supreme Court) ನಿರಾಕರಣೆ ಮಾಡಿದೆ. ಹೀಗಾಗಿ ಆರೋಪಿಗಳಿಗೆ ಮರಳಿ ಜೀವ ಬಂದಂತಾಗಿದೆ. ಆದರೆ, ಕರ್ನಾಟಕ ಸರ್ಕಾರ ಸಲ್ಲಿಸಿದ ಅರ್ಜಿಯ ಸವಾಲನ್ನು ಪರಿಶೀಲನೆ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ, ಆರ್.ಮಹದೇವನ್ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದೆ.
ನಮ್ಮ ಮುಂದೆ ಸಲ್ಲಿಸಿದ ಜಾಮೀನಿನ ಅರ್ಜಿ ಸ್ವಂತ ಬಲದ ಮೇಲೆ ನಿಂತಿರುತ್ತದೆ. ಜಾಮೀನಿಗಾಗಿ(Bail) ಆರೋಪಿಗಳು ಪ್ರಾರ್ಥಿಸುತ್ತಿರುತ್ತಾರೆ. ಅದೆಲ್ಲವನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಲಾಗಿರುತ್ತೆ ಎಂದು ಪೀಠ ಹೇಳಿದೆ. ನಟ ದರ್ಶನ್ ಸೇರಿ 7 ಆರೋಪಿಗಳಿಗೆ ನಿಯಮಿತ ಜಾಮೀನು ನೀಡಿ 13 ಡಿಸೆಂಬರ್ 2024ರಂದು ಆದೇಶ ನೀಡಿದೆ.
ಒಂದೇ ದಿನ ಶುಭ ಸುದ್ದಿ ಕೊಟ್ಟ ದರ್ಶನ್-ಪವಿತ್ರಾ ಗೌಡ, ಏನಿದು ಹೊಸ ಲೋಕ!
ಸದ್ಯಕ್ಕೆ ಬೇಲ್ ಮೇಲೆ ಆಚೆ ಜೈಲಿನಿಂದ ಹೊರಗೆ ಇರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ, ಜಾಮೀನಿನ ಮೇಲೆ ಹೊರಗೆ ಬಂದಿರುವ ಎಲ್ಲರೂ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಮೊನ್ನೆ ನಟ ದರ್ಶನ್ ತಮ್ಮ ಸಹೋದರ ದಿನಕರ್ ತೂಗುದೀಪ ನಿರ್ದೇಶನದ 'ರಾಯಲ್' ಸಿನಿಮಾವನ್ನು ತಾಯಿ, ಪತ್ನಿ, ಮಗ ಹಾಗೂ ಸಹೋದರನ ಜೊತೆಗೂಡಿ ವೀಕ್ಷಿಸಿದ್ದಾರೆ. ಇತ್ತ ಪವಿತ್ರಾ ಗೌಡ ಅವರು ತಾವು ನಡೆಸುತ್ತಿದ್ದ 'ರೆಡ್ ಕಾರ್ಪೆಟ್' ಶಾಪ್ ರೀಓಪನ್ ಮಾಡಿದ್ದಾರೆ. ಒಟ್ಟಿನಲ್ಲಿ, ನಟ ದರ್ಶನ್ ಹಾಗು ಸಹಚರರ ಮೇಲೆ ಬಂದಿರುವ ಕೊಲೆ ಆರೋಪದ ತನಿಖೆ ಮುಂದುವರೆಯುತ್ತಿದೆ.