ಚೆಪಾಕ್ ಕದನಕ್ಕೆ ಭಾರತ ರೆಡಿ; ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಸೂರ್ಯ ಪಡೆ

ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಚೆನ್ನೈನ ಚೆಪಾಕ್‌ನಲ್ಲಿ ನಡೆಯಲಿದೆ. ಚೆನ್ನೈನಲ್ಲಿ ಬೆಳೆದ ವರುಣ್ ಚಕ್ರವರ್ತಿ ತವರಿನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ. ಶಮಿ ಆಡುವ ಬಗ್ಗೆ ಇನ್ನೂ ಅನುಮಾನ.

India vs England 2nd T20I Suryakumar Yadav Led Team India eyes on winning momentum in Chennai kvn

ಚೆನ್ನೈ: ಇಂಗ್ಲೆಂಡ್ ವಿರುದ್ದ ಮೊದಲ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರಿ ಜಯಭೇರಿ ಬಾರಿಸಿದ್ದ ಭಾರತ, ತನ್ನ ಜಯದ ಓಟವನ್ನು ಚೆನ್ನೈನಲ್ಲೂ ಮು೦ದುವರಿಸಲು ಕಾತರಿಸುತ್ತಿದೆ. ಚೆಪಾಕ್ ಕ್ರೀಡಾಂಗಣದಲ್ಲಿ ಶನಿವಾರ 2ನೇ ಟಿ20 ಪಂದ್ಯ ನಡೆಯಲಿದ್ದು 5 ಪಂದ್ಯಗಳ ಸರಣಿಯಲ್ಲಿ ಭಾರತ ತನ್ನ ಮುನ್ನಡೆಯನ್ನು 2-0ಗೆ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

ತಮ್ಮ ಐಪಿಎಲ್ ತವರು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಾಡಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ, ತಾವು ಕ್ರಿಕೆಟ್ ಆಡಿ ಬೆಳೆದ ಚೆನ್ನೈನ ಚೆಪಾಕ್‌ನಲ್ಲಿ ಮೊದಲ ಬಾರಿಗೆ ಅಂ.ರಾ. ಪಂದ್ಯವನ್ನು ಆಡಲು ಉತ್ಸುಕಗೊಂಡಿದ್ದು, ಈ ಪಂದ್ಯದಲ್ಲೂ ಅವರೇ ಭಾರತದ ಟ್ರಂಪ್ ಕಾರ್ಡ್ ಎನಿಸಲಿದ್ದಾರೆ.

ಇನ್ನು ವೇಗಿ ಮೊಹಮದ್ ಶಮಿ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೋ ಇಲ್ಲವೋ ಎನ್ನುವು ದನ್ನು ಬಿಸಿಸಿಐ ಸ್ಪಷ್ಟಪಡಿಸುತ್ತಿಲ್ಲ. ಶುಕ್ರವಾರ ಶಮಿ ಮೈದಾನಕ್ಕಿಳಿದು ಯಾವುದೇ ತೊಂದರೆಯಿಲ್ಲದೆ ಬೌಲಿಂಗ್ ಅಭ್ಯಾಸ ನಡೆಸಿದರು. ಒಂದು ವೇಳೆ ಶನಿವಾರ ಅವರು ಆಯ್ಕೆಗೆ ಲಭ್ಯರಿದ್ದರೆ, ನಿತೀಶ್ ಅಥವಾ ಬಿಷ್ಟೋಯ್‌ರನ್ನು ಹೊರಗಿಡುವ ಸಾಧ್ಯತೆ ಇದೆ. 

ಸ್ಮರಣ್ ದ್ವಿಶತಕ: ಕರ್ನಾಟಕಕ್ಕೆ ಇನ್ನಿಂಗ್ಸ್ ಗೆಲುವಿನ ನಿರೀಕ್ಷೆ

ಒತ್ತಡದಲ್ಲಿ ಇಂಗ್ಲೆಂಡ್: ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಇಂಗ್ಲೆಂಡ್, ಬೌಲಿಂಗ್‌ನಲ್ಲೂ ದುಬಾರಿಯಾಗಿತ್ತು. ಬೆಥ್‌ಹೆಲ್, ಬ್ರೂಕ್‌ರಂಥ ತಜ್ಞ ಬ್ಯಾಟರ್‌ಗಳಿಂದ ಬಟ್ಲರ್‌ಗೆ ಸೂಕ್ತ ಬೆಂಬಲದ ಅಗತ್ಯವಿದೆ. ಆದರೆ ಬೆಡ್‌ಹೆಲ್ ಅನಾರೋಗ್ಯದ ಬಳಲುತ್ತಿದ್ದು, ಶುಕ್ರವಾರ ಅಭ್ಯಾಸ ನಡೆಸಿಲ್ಲ. ಅವರು ಚೇತರಿಸಿಕೊಳ್ಳದೆ ಇದ್ದರೆ, ಆಗ ವಿಕೆಟ್ ಕೀಪರ್ ಜೇಮಿ ಸ್ಮಿತ್ ಕಣಕ್ಕಿಳಿಯಬಹುದು. ಇನ್ನು ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ವೇಗಿ ಗಸ್ ಆಟಿನ್ಸನ್ ಬದಲು ಬ್ರೆಡನ್ ಕಾರ್ಸ್ ಆಡಲಿದ್ದಾರೆ.

ಅಭಿಷೇಕ್‌ಗೆ ಗಾಯ
ಶುಕ್ರವಾರ ಕ್ಯಾಚಿಂಗ್ ಅಭ್ಯಾಸದ ವೇಳೆ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಮೊಣಕಾಲು ಉಳುಕಿಸಿಕೊಂಡು ಕುಂಟುತ್ತಲೇ ಮೈದಾನದಿಂದ ಹೊರನಡೆದರು. ಒಂದು ವೇಳೆ ಅವರು ಪಂದ್ಯಕ್ಕೆ ಅಲಭ್ಯರಾದರೆ, ಆಗ ವಾಷಿಂಗ್ಟನ್ ಅಥವಾ ಧೃವ್ ಜುರೆಲ್ ಆಡಬಹುದು. ಆಗ ತಿಲಕ್ ವರ್ಮಾಗೆ ಆರಂಭಿಕನಾಗಿ ಬಡ್ತಿ ಸಿಗಬಹುದು.

ವಿರೇಂದ್ರ ಸೆಹ್ವಾಗ್ ಬಾಳಲ್ಲಿ ಬಿರುಗಾಳಿ ಬೀಸಿದ್ದೇಕೆ? 20 ವರ್ಷ ಬಳಿಕ ಸೆಹ್ವಾಗ್-ಆರತಿ ದೂರ ದೂರ!

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಅಭಿಷೇಕ್, ಸ್ಯಾಮನ್, ಸೂರ್ಯ (ನಾಯಕ), ತಿಲಕ್, ಹಾರ್ದಿಕ್, ರಿಂಕು, ನಿತೀಶ್, ಅಕ್ಷರ್, ಬಿಷ್ಟೋಮ್/ಶಮಿ, ಅರ್ಶ್‌ದೀಪ್, ವರುಣ್.

ಸಾಲ್ಟ್, ಡಕೆಟ್, ಬಟ್ಲರ್ (ನಾಯಕ), ಬ್ರೂಕ್, ಲಿವಿಂಗ್ ಸ್ಟೋನ್, ಬೆಥ್ ಹೆಲ್ /ಸ್ಮಿತ್, ಓವರ್ಟನ್, ಕಾರ್ಸ್, ಆರ್ಚರ್, ರಶೀದ್, ವುಡ್.

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾ‌ರ್
 
 

Latest Videos
Follow Us:
Download App:
  • android
  • ios