ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಹಾಕಿ ತಂಡ ಪ್ರಕಟ; ಹರ್ಮನ್‌ ನಾಯಕ

2020ರಲ್ಲಿ ಐತಿಹಾಸಿಕ ಕಂಚು ಗೆದ್ದಿದ್ದ ಭಾರತ ತಂಡ ಈ ಬಾರಿ ಹಾಲಿ ಚಾಂಪಿಯನ್‌ ಬೆಲ್ಜಿಯಂ, ಆಸ್ಟ್ರೇಲಿಯಾ, ಅರ್ಜೆಂಟೀನಾ, ನ್ಯೂಜಿಲೆಂಡ್‌ ಹಾಗೂ ಐರ್ಲೆಂಡ್‌ ಜೊತೆ ‘ಬಿ’ ಗುಂಪಿನಲ್ಲಿದೆ. ಜು.27ರಂದು ನ್ಯೂಜಿಲೆಂಡ್‌ ವಿರುದ್ಧ ಆಡುವ ಮೂಲಕ ಭಾರತ ಕ್ರೀಡಾಕೂಟದಲ್ಲಿ ಅಭಿಯಾನ ಆರಂಭಿಸಲಿದೆ.

Hockey India announces 16 member Mens squad for Paris Olympics 2024 kvn

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡಕ್ಕೆ 16 ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಹರ್ಮನ್‌ಪ್ರೀತ್‌ ಸಿಂಗ್‌ ನಾಯಕತ್ವ ವಹಿಸಲಿದ್ದಾರೆ. ಗೋಲ್‌ಕೀಪರ್‌ ಶ್ರೀಜೇಶ್‌ ಹಾಗೂ ಮಿಡ್‌ಫೀಲ್ಡರ್‌ ಮನ್‌ಪ್ರೀತ್‌ ಸಿಂಗ್‌ 4ನೇ ಬಾರಿ ಒಲಿಂಪಿಕ್ಸ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. 

ಹಾರ್ದಿಕ್‌ ಸಿಂಗ್‌, ವಿವೇಕ್‌ ಸಾಗರ್‌, ಮಂದೀಪ್‌ ಸಿಂಗ್‌, ಅಭಿಷೇಕ್‌ ಕೂಡಾ ತಂಡದಲ್ಲಿದ್ದಾರೆ. 2020ರಲ್ಲಿ ಐತಿಹಾಸಿಕ ಕಂಚು ಗೆದ್ದಿದ್ದ ಭಾರತ ತಂಡ ಈ ಬಾರಿ ಹಾಲಿ ಚಾಂಪಿಯನ್‌ ಬೆಲ್ಜಿಯಂ, ಆಸ್ಟ್ರೇಲಿಯಾ, ಅರ್ಜೆಂಟೀನಾ, ನ್ಯೂಜಿಲೆಂಡ್‌ ಹಾಗೂ ಐರ್ಲೆಂಡ್‌ ಜೊತೆ ‘ಬಿ’ ಗುಂಪಿನಲ್ಲಿದೆ. ಜು.27ರಂದು ನ್ಯೂಜಿಲೆಂಡ್‌ ವಿರುದ್ಧ ಆಡುವ ಮೂಲಕ ಭಾರತ ಕ್ರೀಡಾಕೂಟದಲ್ಲಿ ಅಭಿಯಾನ ಆರಂಭಿಸಲಿದೆ.

ಹರಿಣಗಳ ದಾಳಿಗೆ ತತ್ತರಿಸಿದ ಆಫ್ಘನ್ನರು; ಮೊದಲ ಬಾರಿಗೆ ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟ ದಕ್ಷಿಣ ಆಫ್ರಿಕಾ..!

ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡ ಹೀಗಿದೆ ನೋಡಿ:

ಡಿಫೆಂಡರ್ಸ್‌: ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್ , ಸಂಜಯ್‌.

ಮಿಡ್‌ಫೀಲ್ಡರ್ಸ್‌: ರಾಜ್‌ಕುಮಾರ್ ಪಾಲ್, ಸಂಶೀರ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್.

ಫಾರ್ವಡ್ಸ್‌: ಅಭಿಷೇಕ್, ಸುಖ್‌ಜೀತ್ ಸಿಂಗ್, ಲಲಿತ್ ಕುಮಾರ್ ಉಪಧ್ಯಾಯ್, ಮನ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್.

ಕರ್ನಾಟಕದ ಶ್ರೀಹರಿ, 14ರ ಧಿನಿಧಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ ಈಜುಪಟುಗಳಾದ ಶ್ರೀಹರಿ ನಟರಾಜ್ ಹಾಗೂ 14 ವರ್ಷದ ಧಿನಿಧಿ ದೇಸಿಂಘು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಇಬ್ಬರಿಗೂ ಅರ್ಹತೆ ಸಿಕ್ಕಿರುವುದಾಗಿ ಭಾರತೀಯ ಈಜು ಫೆಡರೇಶನ್ (ಎಸ್ ಎಫ್‌ಐ) ಖಚಿತಪಡಿಸಿದೆ. 

ಅರ್ಹತಾ ಪ್ರಕ್ರಿಯೆಯಲ್ಲಿ ಆಯ್ಕೆಯಾಗದೆ ಇದ್ದ ಕಾರಣ, ಎಸ್‌ಎಫ್‌ಐ ದೇಶದ ಇಬ್ಬರು ಅಗ್ರ ಈಜುಪಟುಗಳನ್ನು ಶಿಫಾರಸು ಮಾಡಲು ಅವಕಾಶವಿರುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಎಸ್ ಎಫ್‌ಐ ಶ್ರೀಹರಿ ಹಾಗೂ  ಧಿನಿಧಿಯನ್ನು ಯಾರೊಬ್ಬರೂ ಒಲಿಂಪಿಕ್ ಗೆ ಕಳುಹಿಸಲಿದೆ. 

ಪ್ಯಾರಾ ಬ್ಯಾಡ್ಮಿಂಟನ್‌: ವಿಶ್ವ ನಂ.1 ಆದ ಕನ್ನಡಿಗ IAS ಅಧಿಕಾರಿ ಸುಹಾಸ್‌ ಯತಿರಾಜ್

ಶ್ರೀಹರಿ 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಪಾಲ್ಗೊಂಡಿದ್ದರು. ಪ್ಯಾರಿಸ್‌ನಲ್ಲಿ ಅವರು 100 ಮೀ, ಬ್ಯಾಕ್‌ಸ್ಟೋಕ್ ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಧಿನಿಧಿ 200 ಮೀ. ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಏಷ್ಯಾಡ್‌ಗೆ ಯೋಗ ಸೇರಿಸಿ: ಏಷ್ಯಾ ಒಲಿಂಪಿಕ್‌ ಸಮಿತಿಗೆ ಪತ್ರ ಬರೆದ ಪಿ.ಟಿ.ಉಷಾ

ನವದೆಹಲಿ: ಏಷ್ಯನ್‌ ಗೇಮ್ಸ್‌ನಲ್ಲಿ ಯೋಗ ಸೇರ್ಪಡೆಗೊಳಿಸುವಂತೆ ಏಷ್ಯಾ ಒಲಿಂಪಿಕ್‌ ಸಮಿತಿ ಅಧ್ಯಕ್ಷ ರಾಜಾ ರಣ್‌ಧೀರ್‌ ಸಿಂಗ್‌ ಭಾರತೀಯ ಒಲಿಂಪಿಕ್ ಸಂಸ್ಥೆ ಮುಖ್ಯಸ್ಥೆ ಪಿ.ಟಿ.ಉಷಾ ಪತ್ರ ಬರೆದಿದ್ದಾರೆ. 

‘ಜೂ.21ರ ಯೋಗ ದಿನವನ್ನು ವಿಶ್ವವೇ ಆಚರಿಸಿದೆ. ಯೋಗಕ್ಕೆ ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯೋಗದ ಆಧ್ಯಾತ್ಮಿಕ ನೆಲೆ ಮತ್ತು ವಿಶ್ವಗುರುವಾಗಿ, ಭಾರತವು ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ ಕ್ರೀಡಾಕೂಟದಲ್ಲಿ ಯೋಗವನ್ನು ಸೇರ್ಪಡೆಗೊಳಿಸಲು ಪ್ರಯತ್ನಿಸಲಿದೆ. ಒಲಿಂಪಿಕ್ಸ್‌ಗೆ ವೇದಿಕೆಯಾಗಿ ಏಷ್ಯಾಡ್‌ನಲ್ಲಿ ಮೊದಲು ಯೋಗವನ್ನು ಸೇರ್ಪಡೆಗೊಳಿಸಿ’ ಎಂದು ಅವರು ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios