Asianet Suvarna News Asianet Suvarna News

ಬ್ರಿಟನ್‌ನಲ್ಲಿ ವಲಸಿಗ ಮುಸ್ಲಿಂ ವರ್ಸಸ್‌ ಬ್ರಿಟಿಷರ ಮಧ್ಯೆ ಭಾರಿ ಸಂಘರ್ಷ : 3 ಹೆಣ್ಮಕ್ಕಳ ಹತ್ಯೆ ಬಳಿಕ ಹರಡಿದ ಹಿಂಸೆ

ಮೂವರು ಬಾಲಕಿಯರ ಹತ್ಯೆ ಪ್ರಕರಣ ಸಂಬಂಧ ಹಬ್ಬಿದ ವದಂತಿಯೊಂದು ಬ್ರಿಟನ್‌ನಲ್ಲಿ ಸ್ಥಳೀಯರು ಮತ್ತು ವಲಸಿಗ ಮುಸ್ಲಿಂ ಸಮುದಾಯದ ನಡುವೆ ಸಂಘರ್ಷ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದೆ.

UK riots live update uk cities see riots following murder of three girls misinformation fuels anti-immigration protests ravrav
Author
First Published Aug 5, 2024, 4:40 AM IST | Last Updated Aug 5, 2024, 8:45 AM IST

ಲಂಡನ್‌ (ಆ.5)  :  ಮೂವರು ಬಾಲಕಿಯರ ಹತ್ಯೆ ಪ್ರಕರಣ ಸಂಬಂಧ ಹಬ್ಬಿದ ವದಂತಿಯೊಂದು ಬ್ರಿಟನ್‌ನಲ್ಲಿ ಸ್ಥಳೀಯರು ಮತ್ತು ವಲಸಿಗ ಮುಸ್ಲಿಂ ಸಮುದಾಯದ ನಡುವೆ ಸಂಘರ್ಷ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದೆ. ಕಳೆದ 4-5 ದಿನಗಳ ಹಿಂದೆ ಸಣ್ಣದಾಗಿ ಆರಂಭವಾಗಿದ್ದ ಪ್ರತಿಭಟನೆ ಇದೀಗ ದೇಶವ್ಯಾಪಿಯಾಗಿದ್ದು, ಪೊಲೀಸ್ ಪಡೆಗಳು ಕನಿಷ್ಠ 100 ಮಂದಿಯನ್ನು ಬಂಧಿಸಿವೆ.

ಈ ನಡುವೆ ಇತ್ತೀಚೆಗೆ ನಡೆದ ಸಂಸತ್‌ ಚುನಾವಣೆ ವೇಳೆ ಮುಸ್ಲಿಮರಿಗೆ ಹಲವು ಭರವಸೆ ನೀಡಿ ಆಯ್ಕೆಯಾಗಿದ್ದ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಹಿಂಸಾಕೋರರ ಮೇಲೆ ಕ್ರಮಕ್ಕೆ ಆದೇಶಿಸಿದ್ದಾರೆ.

ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಬ್ರಿಟನ್ ಸಂಸದೆ

ಪ್ರಕರಣದ ಹಿನ್ನೆಲೆ:

ಇತ್ತೀಚೆಗೆ ಮೂವರು ಬ್ರಿಟಿಷ್‌ ಬಾಲಕಿಯರನ್ನು ಹತ್ಯೆ ಮಾಡಿದ ಘಟನೆ ನಡೆದಿತ್ತು. ಬಳಿಕ ಕೃತ್ಯ ಎಸಗಿದ ಆಕ್ಸೆಲ್ ರುಡಕುಬಾನಾ ಎಂಬ 17 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆದರೆ ದಾಳಿಕೋರ ಮುಸ್ಲಿಂ ಎಂಬ ವದಂತಿ ಹರಡಿದ್ದರಿಂದ ಸ್ಥಳೀಯರು ಮತ್ತು ಬಲಪಂಥೀಯ ಸಂಘಟನೆಗಳು ಈಗ ಬೀದಿಗಿಳಿದಿವೆ.ಲಿವರ್‌ಪೂಲ್, ಹಲ್, ಬ್ರಿಸ್ಟಲ್, ಲೀಡ್ಸ್‌ನಲ್ಲಿ ನಡೆದ ಘರ್ಷಣೆಗಳಲ್ಲಿ ಪ್ರತಿಭಟನಾಕಾರರು ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಗಳ ಮೇಲೆ ಕುರ್ಚಿಗಳು, ಜ್ವಾಲೆಗಳು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ. ಇದೇ ವೇಳೆ ಹತ್ತಿರದ ಮ್ಯಾಂಚೆಸ್ಟರ್‌ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಹೊಡೆದಾಟಗಳು ನಡೆದಿವೆ.ಲೀಡ್ಸ್‌ನಲ್ಲಿ, ಸರಿಸುಮಾರು 150 ಜನರು ಇಂಗ್ಲಿಷ್ ಧ್ವಜಗಳನ್ನು ಹಿಡಿದುಕೊಂಡು, ‘ನೀವು ಇನ್ನು ಮುಂದೆ ಇಂಗ್ಲಿಷ್ ಅಲ್ಲ’ ಎಂದು ವಲಸಿಗರ ವಿರುದ್ಧ ಘೋಷಣೆ ಕೂಗಿದರು. ಅನೇಕ ಮುಸ್ಲಿಮರ ಆಸ್ತಿ ಪಾಸ್ತಿಗಳು ಹಾನಿಗೀಡಾಗಿವೆ.

ಮತ್ತೊಂದೆಡೆ ಹಲವು ನಗರಗಳಲ್ಲಿ ವಲಸಿಗ ಮುಸ್ಲಿಂ ಸಮುದಾಯ ಅಲ್ಲಾಹು ಅಕ್ಬರ್‌ ಘೋಷಣೆ ಕೂಗಿ, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಪೊಲೀಸರ ಮೇಲೆ ದಾಳಿ ನಡೆಸಿದ ಘಟನೆಗಳೂ ನಡೆದಿವೆ.

ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರಏಕೆ ಸಂಘರ್ಷ?

ಇತ್ತೀಚೆಗೆ ಮೂವರು ಬ್ರಿಟಿಷ್‌ ಬಾಲಕಿಯರು ಹತ್ಯೆಯಾಗಿದ್ದರು. ಕೃತ್ಯ ಎಸಗಿದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಆತ ಮುಸ್ಲಿಂ ಎಂಬ ವದಂತಿ ಹರಡಿದ್ದರಿಂದ ಸ್ಥಳೀಯರು ಮತ್ತು ಬಲಪಂಥೀಯ ಸಂಘಟನೆಗಳು ಮುಸ್ಲಿಮರ ವಿರುದ್ಧ ಬೀದಿಗಿಳಿದಿವೆ. ಆದರೆ ಹಂತಕ ಕ್ರಿಶ್ಚಿಯನ್‌ ಆಗಿದ್ದಾನೆ.

'ಬ್ರಿಟನ್‌ನಲ್ಲಿ ಹಿಂದುಫೋಬಿಯಾಗೆ ಜಾಗವಿಲ್ಲ..' ಬ್ರಿಟಿಷ್‌ ಹಿಂದುಗಳಿಗೆ ವಿಶ್ವಾಸ ನೀಡಿದ ಯುಕೆ ಹೊಸ ಪಿಎಂ!

ಆಗಿದ್ದು ಏನು?ಲಿವರ್‌ಪೂಲ್, ಹಲ್, ಬ್ರಿಸ್ಟಲ್, ಲೀಡ್ಸ್‌ನಲ್ಲಿ ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಗಳ ಮೇಲೆ ಕುರ್ಚಿಗಳು, ಜ್ವಾಲೆಗಳು ಮತ್ತು ಇಟ್ಟಿಗೆಗಳನ್ನು ಎಸೆಯಲಾಗಿದೆ. ಮ್ಯಾಂಚೆಸ್ಟರ್‌ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಹೊಡೆದಾಟ ನಡೆದಿವೆ. ಮುಸ್ಲಿಮರು ಅಲ್ಲಾ ಹು ಅಕ್ಬರ್‌ ಕೂಗುತ್ತಾ ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios