Asianet Suvarna News Asianet Suvarna News

ಸ್ಪೇನ್‌ ಚರ್ಚ್ ಪಾದ್ರಿಗಳಿಂದ 2 ಲಕ್ಷ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

ದೇಶದ ಕ್ಯಾಥೋಲಿಕ್‌ ಚರ್ಚ್‌ನ ಪಾದ್ರಿಗಳು ಹಾಗೂ ಇತರ ನೌಕರರು, 1940ರಿಂದ ಇಲ್ಲಿಯವರೆಗೆ ಸುಮಾರು 2 ಲಕ್ಷ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

Spain priests and employees of the country's Catholic Church have sexually abused nearly 2 lakh children since the 1940 akb
Author
First Published Oct 29, 2023, 9:11 AM IST

ಮ್ಯಾಡ್ರಿಡ್‌: ದೇಶದ ಕ್ಯಾಥೋಲಿಕ್‌ ಚರ್ಚ್‌ನ ಪಾದ್ರಿಗಳು ಹಾಗೂ ಇತರ ನೌಕರರು, 1940ರಿಂದ ಇಲ್ಲಿಯವರೆಗೆ ಸುಮಾರು 2 ಲಕ್ಷ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಸ್ಪೇನ್‌ನ ಸಂಸತ್‌ ರಚಿಸಿದ್ದ ಉನ್ನತ ಮಟ್ಟದ ಸಮಿತಿಯೊಂದು ದೇಶಾದ್ಯಂತ 8000 ಜನರನ್ನು ಸಂದರ್ಶಿಸಿ ವರದಿಯೊಂದನ್ನು ಸಿದ್ಧಪಡಿಸಿದೆ. ಆ ವರದಿಯನ್ನು ಇದೀಗ ಸಂಸತ್ತಿನಲ್ಲಿ ಮಂಡಿಸಿದ್ದು, ಅದರಲ್ಲಿ ಕಳೆದ 83 ವರ್ಷಗಳಲ್ಲಿ ಕನಿಷ್ಠ 2 ಲಕ್ಷ ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಪ್ರಸ್ತಾಪಿಸಲಾಗಿದೆ. ಈ ಕುರಿತು ಅಲ್ಲಿನ ಸ್ಥಳೀಯ ಪತ್ರಿಕೆಯೊಂದು ಈ ಪ್ರಕರಣವು ಕ್ಯಾಥೋಲಿಕ್ ಚರ್ಚ್‌ ಮಾಡಿರುವ ಪಾಪಗಳ ಶಿಖರದ ತುತ್ತತುದಿ ಎಂದು ಬಣ್ಣಿಸಿದೆ

ಸಾಧುಗಳ ವೇಷದಲ್ಲಿ ಉಗ್ರ ದಾಳಿ ಮಾಹಿತಿ ಹಿನ್ನೆಲೆಯಲ್ಲಿ ಇಡೀ ರೈಲು ತಪಾಸಣೆ

ಪಾಲ್ಘಾರ್‌: ರಾಜಸ್ಥಾನದ ಜೈಪುರದಿಂದ (Jaipur) ಮುಂಬೈಗೆ ತೆರಳುವ ರೈಲಿನಲ್ಲಿ 4 ಭಯೋತ್ಪಾದಕರು ಸಾಧುಗಳ ವೇಷದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಅನಾಮಿಕ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಇಡೀ ರೈಲು ತಪಾಸಣೆ ನಡೆಸಿದ ಘಟನೆ ಶನಿವಾರ ನಡೆದಿದೆ. ಜಾಲತಾಣದಲ್ಲಿನ (Social Media) ಮಾಹಿತಿ ಹಿನ್ನೆಲೆಯಲ್ಲಿ ಪಾಲ್ಘಾರ್‌ನಲ್ಲಿ ರೈಲು ತಡೆದ ಪೊಲೀಸರು, ಇಡೀ ರೈಲು ತಪಾಸಣೆ ಮಾಡಿದ್ದಾರೆ. ಈ ವೇಳೆ ಅದರಲ್ಲಿ ನಾಲ್ವರು ಸಾಧುಗಳು ಪತ್ತೆಯಾಗಿದ್ದಾರೆ. ಅವರನ್ನು ವಿಚಾರಣೆ ನಡೆಸಿದಾಗ ಅವರೆಲ್ಲಾ ಜೈಪುರದಿಂದ (Jaipur) ಪಾಲ್ಘಾರ್‌ನ ವಡ್ರೈ ಬಳಿಯ ತಮ್ಮ ಆಶ್ರಮಕ್ಕೆ ತೆರಳುತ್ತಿದ್ದರು ಎಂಬು ಕಂಡುಬಂತು. ಬಳಿಕ ರೈಲನ್ನು ಮುಂದಕ್ಕೆ ಚಲಿಸಲು ಅವಕಾಶ ಮಾಡಿಕೊಡಲಾಯಿತು.

ಮುಂಬೈನಲ್ಲಿ 'ಪ್ರೀಮಿಯರ್‌ ಪದ್ಮಿನಿ' ಯುಗಾಂತ್ಯ: ಮನೆ ಖರೀದಿಗೆ ರಾತ್ರಿ 8 ತಾಸು ಕ್ಯೂ ನಿಂತ ಜನ

ಪಂಜಾಬ್‌ನಲ್ಲಿ 4 ಖಲಿಸ್ತಾನಿ ಉಗ್ರರ ಸೆರೆ: ಟಾರ್ಗೆಟ್‌ ಕಿಲ್ಲಿಂಗ್‌ ಸಂಚು ಬಯಲು

ಚಂಡೀಗಢ: ಪಂಜಾಬ್‌ ಪೊಲೀಸರು ಖಲಿಸ್ತಾನಿ (Khalistan Terrorist) ಉಗ್ರ ಜಾಲವನ್ನು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 6 ಪಿಸ್ತೂಲ್‌ ಹಾಗೂ 275 ಕಾರ್ಟ್ರೇಜ್‌ ವಶಪಡಿಸಿಕೊಂಡಿದ್ದಾರೆ. ಬಂಧಿತರು ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್‌ ಖಾಲ್ಸಾ ಇಂಟರ್‌ನ್ಯಾಷನಲ್‌ (BKI) ಸಂಘಟನೆ ಜೊತೆ ಸೇರಿ ಭಾರತದಲ್ಲಿ ಟಾರ್ಗೆಟ್‌ ಕಿಲ್ಲಿಂಗ್‌ ( ಗುರಿಯಾಗಿಸಿಕೊಂಡು ಹತ್ಯೆ) ಮಾಡುಲು ಸಂಚು ರೂಪಿಸುತ್ತಿದ್ದರು. ಇವರಿಗೆ ಪಾಕಿಸ್ತಾನದಲ್ಲಿರುವ ಖಲಿಸ್ತಾನಿ ಉಗ್ರ ಹರ್ವಿಂದರ್‌ ರಿಂದಾ ಪಾಕಿಸ್ತಾನದ ಐಎಸ್‌ಐನಿಂದ ಹಣ ಹಾಗೂ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದ. ಡ್ರೋನ್‌ಗಳ (Drone) ಮೂಲಕ ಅವುಗಳನ್ನು ಭಾರತಕ್ಕೆ ಕಳಿಸುತ್ತಿದ್ದ ಎಂದು ಪಂಜಾಬ್‌ ಪೊಲೀಸ್‌ ಡಿಜಿಪಿ ಗೌರವ್‌ ಯಾದವ್‌ ಹೇಳಿದ್ದಾರೆ.

ಹಮಾಸ್‌ ಉಗ್ರರ ಸುರಂಗ ಧ್ವಂಸಕ್ಕೆ 'ಸ್ಪಾಂಜ್ ಬಾಂಬ್' ಬಳಕೆಗೆ ಇಸ್ರೇಲ್ ಸಿದ್ಧತೆ: ಏನಿದು ಸ್ಪಾಂಜ್ ಬಾಂಬ್?

Follow Us:
Download App:
  • android
  • ios