Asianet Suvarna News Asianet Suvarna News

ಭಾರತದ ದಕ್ಷ, ಪಾರದರ್ಶಕ ಚುನಾವಣಾ ಪ್ರಕ್ರಿಯೆಯನ್ನು ಹೊಗಳಿದ ಪಾಕಿಸ್ತಾನದ ನಾಯಕ

ಇವಿಎಂ ಮೂಲಕ ಮತದಾನ ಪ್ರಕ್ರಿಯೆ ನಡೆದಿದ್ದು, ಚುನಾವಣೆ ಬಗ್ಗೆ ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ. ನಾವು ಸಹ ಇದೇ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಿದೆ ಎಂದು ಶಿಬ್ಲಿ ಫರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. 

Pakistan opposition leader Shibli Faraz praises India s efficient transparent electoral process mrq
Author
First Published Jun 13, 2024, 3:32 PM IST

ಇಸ್ಲಾಮಾಬಾದ್: ವೈರಿ ರಾಷ್ಟ್ರ ಪಾಕಿಸ್ತಾನದ ರಾಜಕೀಯ ಮುಖಂಡ (Pakistan Political Leader), ಪಾಕ್ ಲೋಕಸಭೆಯ ವಿರೋಧ ಪಕ್ಷದ ನಾಯಕ ಶಿಬ್ಲಿ ಫರಾಜ್ (Pakistani opposition leader Shibli Faraz) ಭಾರತವನ್ನು ಸದನದಲ್ಲಿ ಹಾಡಿ ಹೊಗಳಿದ್ದಾರೆ. ಭಾರತದ ಚುನಾವಣಾ ಆಯೋಗ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲೋಕಸಭಾ ಏಲೆಕ್ಷನ್ (Loksabha Elections 2024) ನಡೆಸಿದ ರೀತಿಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಬ್ಲಿ ಫರಾಜ್ ಮಾತುಗಳ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral video) ಆಗುತ್ತಿದೆ. 

ನಮ್ಮ ನೆರೆಯ ರಾಷ್ಟ್ರ ಭಾರತದಲ್ಲಿ ಇತ್ತೀಚೆಗಷ್ಟೇ ಚುನಾವಣೆ ಮುಕ್ತಾಯವಾಗಿದೆ. ಅಲ್ಲಿ 80 ಕೋಟಿಗೂ ಅಧಿಕ ಮತದಾರರು ಮತದಾನ ಮಾಡಿದ್ದಾರೆ. ಓರ್ವ ಮತದಾರ ಇದ್ರೂ ಅಲ್ಲಿಯ ಚುನಾವಣಾ ಆಯೋಗ ಮತಗಟ್ಟೆ ನಿರ್ಮಿಸಿ ಪೊಲೀಸರನ್ನು ನಿಯೋಜನೆ ಮಾಡಿತ್ತು. ಇವಿಎಂ ಮೂಲಕ ಮತದಾನ ಪ್ರಕ್ರಿಯೆ ನಡೆದಿದ್ದು, ಚುನಾವಣೆ ಬಗ್ಗೆ ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ. ನಾವು ಸಹ ಇದೇ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಿದೆ ಎಂದು ಶಿಬ್ಲಿ ಫರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. 

Aamir Liaquat : 18 ವರ್ಷದ ಹುಡುಗಿಯ ಜೊತೆ ಪಾಕ್ ಸಚಿವನ ಮೂರನೇ ಮದುವೆ, Memes ಹೇಗಿತ್ತು ನೋಡಿದ್ರಾ?

ಪಾಕ್ ಚುನಾವಣೆ ಬಗ್ಗೆ ಫರಾಜ್ ಅಸಮಾಧಾನ

ಪಾಕಿಸ್ತಾನದ ಚುನಾವಣೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ಹೊರ ಹಾಕಿದ ಶಿಬ್ಲಿ ಫರಾಜ್, ಸೋತ ಅಭ್ಯರ್ಥಿಗಳು ಸೋಲನ್ನು ಒಪ್ಪಿಕೊಳ್ಳಲ್ಲ. ಈ ಗದ್ದಲದಲ್ಲಿ ಗೆದ್ದ ಅಂತೆ ಹೇಳಿಕೊಳ್ಳುವ ಕುರ್ಚಿ ಮೇಲೆ ಬಂದು ಕುಳಿತುಕೊಳ್ಳುತ್ತಾನೆ. ಇಂತಹ ಒಂದು ಪದ್ಧತಿ ದೇಶದ ರಾಜಕೀಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದ ಅವರು, ಫೆಬ್ರವರಿಯಲ್ಲಿ ನಡೆಸ ಪಾಕಿಸ್ತಾನದ ಚುನಾವಣೆ ಬಗ್ಗೆ ಅಸಮಾಧಾನ ಹೊರ ಹಾಕಿದರು. ನಮ್ಮಲ್ಲಿಯ ಚುನಾವಣೆಗಳು ಆರೋಪ-ಪ್ರತ್ಯಾರೋಪಗಳಲ್ಲಿಯೇ ಕೊನೆಯಾದವು ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಗರ ವಿರುದ್ಧ ಕಿಡಿಕಾರಿದರು.

ನೆಟ್‌ವರ್ಕ್ ಸ್ಥಗಿತ, ಹಿಂಸಾಚಾರ

ಪಾಕಿಸ್ತಾನದ ಚುನಾವಣೆಯಲ್ಲಿ ನವಾಜ್ ಷರೀಫ್ ಪರವಾಗಿ ಮಿಲಿಟರಿ ಹಸ್ತಕ್ಷೇಪದ ಆರೋಪ ಕೇಳಿ ಬಂದಿತ್ತು. ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅವರ ಬೆಂಬಲಿಗರು ಆಕ್ರೋಶ ಹೊರಹಾಕಿದ್ದರು. ಚುನಾವಣೆ ನ್ಯಾಯಸಮ್ಮತವಾಗಿ ನಡೆದಿಲ್ಲ. ಈ ಸಂಬಂಧ ವಿವರವಾದ ತನಿಖೆ ನಡೆಬೇಕಿದೆ. ಈ ಹಿನ್ನೆಲೆ ಯುಎಸ್‌ ಕಾಂಗ್ರೆಸ್‌ನ 31 ಸದಸ್ಯರು ಪಾಕಿಸ್ತಾನದ ಹೊಸ ಸರ್ಕಾರದ ಮಾನ್ಯತೆಯನ್ನು ತಡೆಹಿಡಿಯುವಂತೆ ಅಧ್ಯಕ್ಷ ಜೋ ಬಿಡನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಪಾಕಿಸ್ತಾನದ ಚುನಾವಣೆ ಸಂದರ್ಭದಲ್ಲಿ ಹಿಂಸಾಚಾರ ನಡೆದಿರುವ ಕುರಿತು ವರದಿ ಪ್ರಕಟವಾಗಿದ್ದವು. ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸಹ ಸ್ಥಗಿತಗೊಳಿಸಲಾಗಿತ್ತು.

'ಪುಲ್ವಾಮಾ ದಾಳಿ ಮಾಡಿದ್ದು ನಾವೇ' ಕೊನೆಗೂ ಸತ್ಯ ಒಪ್ಪಿಕೊಂಡ ಕುತಂತ್ರಿ!

ಭಾರತದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ಸಿಕ್ಕಿದ್ದು, ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೂನ್ 9ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪದಗ್ರಹಣಕ್ಕೆ ಬಾಂಗ್ಲಾದೇಶ, ಮಾರ್ಷಿಯಸ್, ಮಾಲ್ಡೀವ್ಸ್, ಶ್ರೀಲಂಕಾ, ನೇಪಾಳ, ಭೂತಾನ್ ಸೇರಿದಂತೆ ಹಲವು ದೇಶದ ಪ್ರಧಾನಿಗಳು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.
 

Latest Videos
Follow Us:
Download App:
  • android
  • ios