ಬಾಯಿಯೊಳಗೆ ನೊಣ ಹೋದ್ರೂ ನ್ಯೂಸ್ ಓದೋದನ್ನ ನಿಲ್ಲಿಸದ ಆಂಕರ್; ನೆಟ್ಟಿಗರಿಂದ ಶ್ಲಾಘನೆ, ವಿಡಿಯೋ ನೋಡಿ
ಲೈವ್ ನ್ಯೂಸ್ ಓದುತ್ತಿರುವ ಸಂದರ್ಭದಲ್ಲಿಯೇ ವೈನೆಸಾ ವೆಲ್ಚ್ ಅವರ ಕಣ್ಣಿನ ಮೇಲೆ ನೊಣ ಕುಳಿತಿದೆ. ವೈನೆಸಾ ವೆಲ್ಚ್ ಪಟಪಟನೇ ಅಂತ ಕಣ್ಣರಪ್ಪೆ ಮಿಟುಕಿಸಿದ್ದಾರೆ. ಕಣ್ಣರಪ್ಪೆಗೆ ಬಿದ್ದ ನೊಣ ನೇರವಾಗಿ ವೈನೆಸಾ ವೆಲ್ಚ್ ಬಾಯಿಯೊಳಗೆ ಹೋಗಿದೆ.
ಕೆಲವೊಮ್ಮೆ ಲೈವ್ ಶೋ ಅಥವಾ ಲೈವ್ ನ್ಯೂಸ್ (Live News) ಪ್ರಸಾರವಾಗುವ ಸಂದರ್ಭದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ. ನೇರಪ್ರಸಾರ ಆಗಿರೋ ಕಾರಣ ಇಂತಹ ವಿಚಿತ್ರ ಸನ್ನಿವೇಶವನ್ನು ಬದಲಿಸಲು ಸಾಧ್ಯವಾಗಲ್ಲ. ಇದೀಗ ಇಂತಹವುದೇ ಒಂದು ಘಟನೆಯ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. Boston 25 News ವಾಹಿನಿಯ ವಿಡಿಯೋ ತುಣುಕು ವೈರಲ್ ಆಗುತ್ತಿದ್ದು, ಆಂಕರ್ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೊಸ್ಟೊನ್ 25 ನ್ಯೂಸ್ ಆಂಕರ್ (News Anchor) ಲೈವ್ ನಡೆಸುತ್ತಿರುವ ವೇಳೆ ನಿರೂಪಕಿಗೆ (Female Anchor) ವಿಚಿತ್ರ ಸನ್ನಿವೇಶವೊಂದು ಎದುರಾಗಿದೆ.
Boston 25 News ವಾಹಿನಿಯ ನ್ಯೂಸ್ ಆಂಕರ್ ವೈನೆಸಾ ವೆಲ್ಚ್ ಕಳೆದ ವಾರ ಲೈವ್ ವಾರ್ತೆ ಓದುತ್ತಿದ್ದರು. ಈ ವೇಳೆ ಸ್ಟುಡಿಯೋಳಗೆ ನೊಣ ಎಂಟ್ರಿ ಕೊಟ್ಟಿದೆ. ಲೈವ್ ನ್ಯೂಸ್ ಓದುತ್ತಿರುವ ಸಂದರ್ಭದಲ್ಲಿಯೇ ವೈನೆಸಾ ವೆಲ್ಚ್ ಅವರ ಕಣ್ಣಿನ ಮೇಲೆ ನೊಣ ಕುಳಿತಿದೆ. ವೈನೆಸಾ ವೆಲ್ಚ್ ಪಟಪಟನೇ ಅಂತ ಕಣ್ಣರಪ್ಪೆ ಮಿಟುಕಿಸಿದ್ದಾರೆ. ಕಣ್ಣರಪ್ಪೆಗೆ ಬಿದ್ದ ನೊಣ ನೇರವಾಗಿ ವೈನೆಸಾ ವೆಲ್ಚ್ ಬಾಯಿಯೊಳಗೆ ಹೋಗಿದೆ. ಆದ್ರೂ ವಿಚಲಿತಗೊಳ್ಳದ ವೈನೆಸಾ ವೆಲ್ಚ್ ನ್ಯೂಸ್ ಪೂರ್ಣಗೊಳಿಸಿದ್ದಾರೆ. ಈ ಎಲ್ಲಾ ದೃಶ್ಯಗಳು ಲೈವ್ ಪ್ರಸಾರಗೊಂಡಿದೆ.
ನೆಟ್ಟಿಗರಿಂದ ನಿರೂಪಕಿಗೆ ಮೆಚ್ಚುಗೆಯ ಮಹಾಪೂರ
ಮೊದಲು ಈ ವಿಡಿಯೋ ಮಾಧ್ಯಮ ಸಿಬ್ಬಂದಿಯ ವಲಯದಲ್ಲಿ ವೈರಲ್ ಆಗಿತ್ತು. ನಂತರ ಈ ವಿಡಿಯೋವನ್ನು ಕೆಲವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ನಡೆದ ಘಟನೆಯ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಿರೂಪಕಿ ವೈನೆಸಾ ವೆಲ್ಚ್ ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಬೆರಣಿಕೆಯಷ್ಟು ಜನರು ಫನ್ನಿ ಕಮೆಂಟ್ ಮಾಡಿದರೆ ಬಹುತೇಕರು ನಿರೂಪಕಿಯನ್ನು ಶ್ಲಾಘಿಸಿದ್ದಾರೆ.
ಕ್ಯಾನ್ಸರ್ ಮೂರನೇ ಸ್ಟೇಜಲ್ಲಿದ್ದರೂ ಧೈರ್ಯದಿಂದ ಲೈವಲ್ಲೇ ಎಚ್ಚರಿಕೆ ಕೊಟ್ಟ ಆ್ಯಂಕರ್
ಲೈವ್‌ನಲ್ಲಿಯೇ ಮಲ ಮಾಡಿದ ನಾಯಿಮರಿ
ಬೊವಿಲಿಯಾದ ನ್ಯೂಸ್ ವಾಹಿನಿಯಲ್ಲಿ ನಾಯಿಮರಿಗಳನ್ನು ದತ್ತು ಪಡೆದುಕೊಳ್ಳುವ ಜಾಗೃತ ಕಾರ್ಯಕ್ರಮವನ್ನು ನೇರಪ್ರಸಾರಗೊಳಿಸಲಾಗುತ್ತಿತ್ತು. ಈ ವೇಳೆ ನ್ಯೂಸ್‌ರೂಮ್‌ನಲ್ಲಿ ಮುದ್ದಾದ ನಾಯಿಮರಿಯೊಂದನ್ನು ಕರೆದುಕೊಂಡು ಬರಲಾಗಿತ್ತು. ಲೈವ್ ವೇಳೆ ನಿರೂಪಕಿ ನಾಯಿಮರಿ ಮುದ್ದಿಸಿದರು. ಇದೇ ಸಮಯದಲ್ಲಿ ನಾಯಿಮರಿ ಮಲ ವಿಸರ್ಜನೆ ಮಾಡಿತ್ತು. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ನ್ಯೂಸ್ ನಿರೂಪಕಿಯ ಸೀರೆ ನೋಡಿ ಸಿಡಿಸಿಡಿಯಾದ ಇಸ್ರೇಲ್ ಅಧಿಕಾರಿ: ವೀಡಿಯೋ
ಕೆಲ ವರ್ಷಗಳ ಹಿಂದೆ ನಿರೂಪಕಿಯೊಬ್ಬರು ಪತಿ ಅಪಘಾತದ ಸುದ್ದಿಯನ್ನು ಲೈವ್‌ನಲ್ಲಿ ಓದುವ ಕಷ್ಟದ ಪರಿಸ್ಥಿತಿ ಎದುರಾಗಿತ್ತು. ನ್ಯೂಸ್ ಓದುವಾಗ ಅಪಘಾತಕ್ಕೊಳಗಾದ ಕಾರ್ ಪತಿಯದ್ದು ಎಂಬ ವಿಷಯ ಗೊತ್ತಿದ್ದರೂ ಕೊಂಚ ವಿಚಲಿತಗೊಳ್ಳದೇ ಬ್ರೇಕ್ ಬರೋವರೆಗೂ ನ್ಯೂಸ್ ಓದಿದ್ದರು. ಬ್ರೇಕ್ ಬರುತ್ತಿದ್ದಂತೆ ಸ್ಟುಡಿಯೋದಿಂದ ಹೊರ ಬಂದು ನಿರೂಪಕಿ ಕಣ್ಣೀರು ಹಾಕಿದ್ದರು ಎಂಬ ವಿಷಯವನ್ನು ವಾಹಿನಿ ಹಂಚಿಕೊಂಡಿತ್ತು.
⚡️🫶 News anchor on Boston25
— 🌕Nikita_X 🫶 (@Mister_Nikita_X) May 29, 2024
Vanessa Welch swallowed a fly that flew into her mouth, but continued to talk as if nothing had happened.👏👏👏👏 pic.twitter.com/BNQJvhX284