ಹಾರುವ ತಟ್ಟೆ ಅಥವಾ ಗುರುತಿಸಲಾಗದ ಹಾರುವ ವಸ್ತುಗಳು ಭೂಮಿಯ ಮೇಲೆ ಆಗಾಗ ಕಂಡುಬರುತ್ತವೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲದೇ ಹೋದರೂ ಅವು ಕಂಡುಬಂದಿರುವುದು ಸುಳ್ಳಲ್ಲ. 2018ರಲ್ಲಿ ಇರಾಕ್ ನಲ್ಲಿ ಕಂಡುಬಂದಿರುವ ಹಾರುವ ವಸ್ತುವೊಂದರ ವೀಡಿಯೋ ಈಗ ವೈರಲ್ ಆಗಿದೆ. 

ಆಗಾಗ ಹಾರುವ ವಸ್ತು ಅಥವಾ ಹಾರುವ ತಟ್ಟೆಗಳ ಕುರಿತಾದ ಸುದ್ದಿ ಕೇಳುತ್ತೇವೆ. ಬೇರೆ ಆಕಾಶಕಾಯಗಳಿಂದ ಹಾರುವ ತಟ್ಟೆಗಳು ಬರುತ್ತವೆ, ಆಗಾಗ ಭೂಮಂಡಲದ ಮೇಲ್ಪದರದಲ್ಲಿ ಹಾರುತ್ತಿರುತ್ತವೆ ಎಂಬೆಲ್ಲ ಸುದ್ದಿಗಳು ರೋಚಕವಾಗಿರುತ್ತವೆ. ಅವು ನಿಜಕ್ಕೂ ಬರುತ್ತವೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಕೆಲವೊಮ್ಮೆ ವೀಡಿಯೋ ಅಥವಾ ಫೋಟೋಕ್ಕೆ ಕೆಲವು ಅಂತಹ ಹಾರುವ ವಸ್ತುಗಳು ಗೋಚರವಾಗಿದ್ದಿದೆ. ಹಾಗಂತ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳು ಇದುವರೆಗೆ ಲಭ್ಯವಾಗಿಲ್ಲ. ಕಳೆದ ಸೆಪ್ಟೆಂಬರ್ ನಲ್ಲಿ ಅಮೆರಿಕದ ನಾಸಾ ಈ ಬಗ್ಗೆ ಅಧ್ಯಯನ ವರದಿ ಪ್ರಕಟಿಸಿದ್ದು, ಅದರ ಪ್ರಕಾರ ಕೂಡ ಹಾರುವ ತಟ್ಟೆಗಳು ನಿಜಕ್ಕೂ ಇವೆ ಎನ್ನುವ ಬಗ್ಗೆ ವೈಜ್ಞಾನಿಕ ಆಧಾರಗಳಿಲ್ಲ. ಇವುಗಳ ಅಧ್ಯಯನಕ್ಕೆ ಅತ್ಯಾಧುನಿಕ ಉಪಗ್ರಹಗಳು ಹಾಗೂ ವೈಜ್ಞಾನಿಕ ತಂತ್ರಗಳ ಅಗತ್ಯವಿದೆ ಎಂದು ನಾಸಾ ಹೇಳಿದೆ. ಪ್ರಸ್ತುತ, ಮತ್ತೆ ಈಗ ಹಾರುವ ವಸ್ತುವಿನ ಕುರಿತಾದ ವೀಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಹಾರುವ ವಸ್ತುವೊಂದು ಕ್ಯಾಮರಾ ಕಣ್ಣಿಗೆ ದೊರೆತಿದ್ದು, ಅನೇಕ ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಸ್ತುತ ವೈರಲ್ (Viral) ಆಗಿರುವ ವೀಡಿಯೋವನ್ನು (Video) ಕಲಾವಿದ ಹಾಗೂ ಚಿತ್ರನಿರ್ಮಾಪಕ ಜೆರೆಮಿ ಕಾರ್ಬೆಲ್ (Jeremy Corbell) ಹಂಚಿಕೊಂಡಿದ್ದಾರೆ. ಬ್ಲಾಕ್ ಅಂಡ್ ವೈಟ್ ವೀಡಿಯೋ ಇದಾಗಿದ್ದು, ಇದರಲ್ಲಿ ಜೆಲ್ಲಿ ಮೀನಿನಂತಹ (Jelly Fish) ವಸ್ತುವೊಂದು ಹಾರುತ್ತ ಇರಾಕ್ ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಹಾರುವುದು ಕಂಡುಬರುತ್ತದೆ. ಈ ವೀಡಿಯೋ ಕಂಡು ನೆಟ್ಟಿಗರು ಬೆರಗಾಗಿದ್ದಾರೆ. 

ಬಾಲಕನ ಹೊಟ್ಟೆಯೊಳಗಿದೆ ಟ್ರಾಕ್ಟರ್, ಮಿಮಿಕ್ರಿಗೆ ಮನಸೋತ ಆನಂದ್ ಮಹೀಂದ್ರ!

ಶತ್ರುಗಳ ದಾಳಿ?
ವೀಡಿಯೋದಲ್ಲಿ ಕಂಡುಬರುವ ಹಾರುವ ವಸ್ತುವನ್ನು ಶತ್ರುಗಳ ದಾಳಿ ಎಂದು ಜೆರೆಮಿ ಕರೆದಿದ್ದಾರೆ, ನೆಟ್ಟಿಗರು ಸಹ ಇದನ್ನು ಅನುಮೋದಿಸಿದ್ದಾರೆ. ಅಸಲಿಗೆ ಇದು ಐದು ವರ್ಷಗಳ ಹಿಂದಿನ ವೀಡಿಯೋ ಆಗಿದ್ದು, ಈಗ ಬೆಳಕಿಗೆ ಬಂದಿದೆ. 2018ರಲ್ಲಿ ಯಾರೋ ಮಿಲಿಟರಿ (Military) ಸಿಬ್ಬಂದಿ ಅನುಮತಿ ಇಲ್ಲದೇ ಈ ವಿದ್ಯಮಾನವನ್ನು ಚಿತ್ರೀಕರಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನು ನೋಡಿದ ಬಳಿಕ ಈಗ, ಹಾರುವ ವಸ್ತುಗಳ (Flying Object) ಕುರಿತಾದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. 
ಇತ್ತೀಚೆಗೆ, ಮಿಯಾಮಿ ಪೊಲೀಸರು ಅಚ್ಚರಿಯ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದರು. ಮಾಲ್ ಒಂದರ ಎದುರು 10 ಅಡಿ ಎತ್ತರದ ಜೀವಿಯೊಂದು ಅವರ ವೀಡಿಯೋ ಶೂಟ್ ನಲ್ಲಿ ಕ್ಯಾಮರಾಕ್ಕೆ ಸೆರೆಯಾಗಿತ್ತು. ಇದನ್ನು ಅವರು 10 ಅಡಿ ಎತ್ತರದ ಏಲಿಯನ್ (Alien) ಎಂದು ಹೇಳಿದ್ದರು.

Scroll to load tweet…

ಪ್ರತ್ಯಕ್ಷದರ್ಶಿಗಳ ಭೇಟಿ
ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಕ್ಯಾಮರಾದಲ್ಲಿ ಸೆರೆ ಸಿಕ್ಕಿರುವ ಹಾರುವ ವಸ್ತುವನ್ನು ನೇರವಾಗಿ ನೋಡಿರುವವರನ್ನು ಜೆರೆಮಿ ಕಾರ್ಬೆಲ್ ಭೇಟಿಯಾಗಿದ್ದಾರೆ. ವಿದ್ಯಮಾನದ ಪ್ರತ್ಯಕ್ಷದರ್ಶಿಗಳನ್ನು (Eye Witness) ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ಜೆರೆಮಿ ತಿಳಿಸಿದ್ದಾರೆ. ಮೈನವಿರೇಳಿಸುವ ಸಂಗತಿ ಎಂದರೆ, ಈ ವಸ್ತು ನೀರಿನ (Water) ಮೇಲ್ಮೈ ಮೇಲೆ ಸಾಗಿ, ಒಂದು ಕ್ಷಣ ನಿಲ್ಲುತ್ತದೆ, ಬಳಿಕ ನೀರಿನಲ್ಲಿ ಮುಳುಗಿಬಿಡುತ್ತದೆ. ಏನೂ ಇಲ್ಲದಂತೆ ಮಾಯವಾಗುತ್ತದೆ, ಬರೋಬ್ಬರಿ 17 ನಿಮಿಷಗಳ ಬಳಿಕ ಮತ್ತೆ ಮೇಲೆದ್ದು ಆಕಾಶದತ್ತ 45 ಡಿಗ್ರಿ ಕೋನದಲ್ಲಿ ಜಿಗಿಯುತ್ತದೆ ಎಂದು ಹೇಳಿದ್ದಾರೆ. ಈ ಕ್ರಿಯೆಯ ಬಗ್ಗೆ ಅರಿವಿರುವ ಪ್ರತಿಯೊಬ್ಬರಲ್ಲೂ ಅವರು ಮಾತನಾಡಿದ್ದಾರೆ ಹಾಗೂ ಅವರೆಲ್ಲರೂ ಇದು ನಡೆದಿರುವುದನ್ನು ಅಂಗೀಕರಿಸಿದ್ದಾರೆ. 

ಕ್ಯಾನ್ಸರ್ ಮೂರನೇ ಸ್ಟೇಜಲ್ಲಿದ್ದರೂ ಧೈರ್ಯದಿಂದ ಲೈವಲ್ಲೇ ಎಚ್ಚರಿಕೆ ಕೊಟ್ಟ ಆ್ಯಂಕರ್

ರಾತ್ರಿ (Night) ಸಮಯದಲ್ಲಿ ತೆಗೆದ ವೀಡಿಯೋ ಇದಾಗಿರುವುದರಿಂದ ಸಂಪೂರ್ಣವಾಗಿ ಕಪ್ಪು-ಬಿಳುಪಿನ ಚಿತ್ರಣ ಹೊಂದಿದೆ. ಅಮೆರಿಕದ ಮಿಲಿಟರಿ ವಿಭಾಗ ಇದನ್ನು ಇರಾಕ್ (Iraq) ನಲ್ಲಿ ಪತ್ತೆ ಮಾಡಿದ್ದು, ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಹಾರುತ್ತಿರುವುದನ್ನು ಗುರುತಿಸಿದೆ. ಅಮೆರಿಕದ ಗುಪ್ತಚರ ಇಲಾಖೆ ಇದನ್ನು ಗುರುತಿಸಲಾಗದ ಹಾರುವ ವಸ್ತು (UFO) ಎಂಬುದಾಗಿ ದಾಖಲಿಸಿದೆ.