Asianet Suvarna News Asianet Suvarna News

ಬಾಂಗ್ಲಾದೇಶ ಪ್ರತಿಭಟನೆ ನಡುವೆ ಕಾಣಿಕೊಂಡ ಡೂಪ್ಲಿಕೇಟ್ ವಿರಾಟ್ ಕೊಹ್ಲಿ, ವಿಡಿಯೋ ವೈರಲ್!

ಬಾಂಗ್ಲಾದೇಶದಲ್ಲೆಲೆಡೆ ಪ್ರತಿಭಟನೆಗಳು, ಹಿಂಸಾಚಾರ ನಡೆಯುತ್ತಿದೆ. ಇದರ ನಡುವೆ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿಯಂತೆ ಕಾಣುವ ಡೂಪ್ಲಿಕೇಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಈತನ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
 

Cricketer Virat kohli lookalike spotted in middle of Bangladesh protest video viral ckm
Author
First Published Aug 8, 2024, 4:19 PM IST | Last Updated Aug 8, 2024, 4:20 PM IST

ಢಾಕ(ಆ.08) ಬಾಂಗ್ಲಾದೇಶದಲ್ಲಿ ಮೀಸಲಾತಿ ಪ್ರತಿಭಟನೆಗೆ ದೇಶವೇ ಅಲ್ಲೋಲ ಕಲ್ಲೋಲವಾಗಿದೆ.ಪ್ರತಿಭಟನೆ, ಹಿಂಸಾಚಾರಕ್ಕೆ ಹಲವು ಜೀವಗಳು ಬಲಿಯಾಗಿದೆ. ಹಲವರ ಮನೆಗಳು ಹೊತ್ತಿ ಉರಿದಿದೆ. ಪ್ರಧಾನಿ ನಿವಾಸಕ್ಕೆ ನುಗ್ಗಿದ ಪ್ರತಿಭಟನಕಾರರು ಶೇಕ್ ಹಸೀನಾ ಅವರ ಸೀರೆ, ರವಿಕೆ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಈಗಲೂ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆ ನಡುವೆ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ರೀತಿಯಂತೆ ಕಾಣುವ ಯುವಕನೊಬ್ಬ ಪ್ರತ್ಯಕ್ಷನಾಗಿದ್ದಾರೆ. ಈತನ ವಿಡಿಯೋಗಳು ವೈರಲ್ ಆಗಿದೆ.

ಪ್ರತಿಭಟನೆ ನಡುವೆ ನಿಂತು ಶೇಕ್ ಹಸೀನಾ ಹಾಗೂ ಅವಾವಿ ಲೀಗ್ ವಿರುದ್ದ ಘೋಷಣೆ ಕೂಗುತ್ತಿರುವ ಈತ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದ್ದಾನೆ. ಢಾಕಾದ ಬೀದಿಯಲ್ಲಿ ಪ್ರತಿಭಟನಾಕಾರರು ಕಿಕ್ಕಿರಿದು ತುಂಬಿದ್ದಾರೆ. ಇದರ ನಡುವೆ ಯುವಕರ ಗುಂಪಿನ ಹೆಗಲಮೇಲೆರಿದ ಈ ಯುವಕ ಶೇಕ್ ಹಸೀನಾ ವಿರುದ್ಧ ಘೋಷಣೆ ಕೂಗಿದ್ದಾನೆ. ಜೊತೆಗೆ ಅವಾಮಿ ಲೀಗ್ ಪಕ್ಷದ ವಿರುದ್ಧವೂ ಘೋಷಣೆ ಕೂಗಿದ್ದರೆ. ಈ ಬಾರಿ ಪ್ರತಿಭ
ನೆಯಲ್ಲಿ ಸಾವಿರಾರು ಮಂದಿ ಸೇರಿದ್ದಾರೆ. ಇದರ ನಡುವೆ ಕೊಹ್ಲಿ ರೀತಿ ಕಾಣುವ ಈ ಯುವಕನೇ ಹೈಲೈಟ್ ಆಗಿದ್ದಾನೆ.

ಆಜ್ ಕಿ ರಾತ್ ಕಿ ಹಾಡಿಗೆ ತಮನ್ನಾಗಿಂತ ಹಾಟ್ ಆಗಿ ಹೆಜ್ಜೆ ಹಾಕಿದ ಯುವತಿ ವಿಡಿಯೋ ವೈರಲ್!

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಬಗೆ ಬಗೆಯ ಕಮೆಂಟ್‌ಗಳು ವ್ಯಕ್ತವಾಗಿದೆ. ಇಷ್ಟು ಬ್ಯೂಸಿ ಶೆಡ್ಯೂಲ್ ನಡುವೆಯೂ ವಿರಾಟ್ ಕೊಹ್ಲಿ ಬಾಂಗ್ಲಾದೇಶ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಲೆಜೆಂಡ್ ಎಂದು ಕಮೆಂಟ್ ಮಾಡಿದ್ದಾರೆ. ಚಿತ್ತೋಗ್ರಾಮ್ ಗೆಲುವಿನ ಸಂಭ್ರಮಾಚರಣೆಯಲ್ಲಿ ವಿರಾಟ್ ಕೊಹ್ಲಿ ಪಾಲ್ಗೊಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.  ಢಾಕಾದಲ್ಲೂ ಕೊಹ್ಲಿ ಸೇರಿದಂತೆ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

 

 

ಬಾಂಗ್ಲಾದೇಶ ಪ್ರತಿಭಟನೆಯಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಪ್ರತಿಭಟನೆ ಕಿಚ್ಚಿಗೆ ಶೇಕ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪರಾರಿಯಾಗಿದ್ದಾರೆ.  ಬಾಂಗ್ಲಾದೇಶದಲ್ಲಿ ಇದೀಗ ಹಂಗಾಮಿ ಸರ್ಕಾರ ರಚನೆಗೊಂಡಿದೆ. ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಮೊಹಮ್ಮದ್ ಯೊನಸ್ ಹಂಗಾಮಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಹಲವು ಭಾಗದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಅವಾಮಿ ಲೀಗ್ ಪಕ್ಷದ ಹಲವು ನಾಯಕರರ ಮನೆಗಳ ಮೇಲೆ ದಾಳಿಯಾಗಿದೆ. ಅವಾಮಿ ಲೀಗ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ.

ಈ ಪ್ರತಿಭಟನೆಗಳಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗಿದೆ. ಹಿಂದೂ ದೇವಸ್ಥಾನಗಳು ಧ್ವಂಸಗೊಂಡಿದೆ. ಭೀಕರ ಘಟನೆಗಳು ಬಾಂಗ್ಲಾದೇಶದಲ್ಲಿ ವರದಿಯಾಗಿದೆ. ಸೇನೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದೆ.  

ವಯನಾಡಿನಲ್ಲಿ 6 ದಿನಗಳ ಬಳಿಕ ಮಾಲೀಕನ ಪತ್ತೆ ಹಚ್ಚಿದ ನಾಯಿ, ಹೃದಯಸ್ಪರ್ಶಿ ವಿಡಿಯೋ!

 

Latest Videos
Follow Us:
Download App:
  • android
  • ios