Asianet Suvarna News Asianet Suvarna News

ಆಜ್ ಕಿ ರಾತ್ ಕಿ ಹಾಡಿಗೆ ತಮನ್ನಾಗಿಂತ ಹಾಟ್ ಆಗಿ ಹೆಜ್ಜೆ ಹಾಕಿದ ಯುವತಿ ವಿಡಿಯೋ ವೈರಲ್!

ನು ಕಾವಾಲಿ ಹಾಡಿಗಿಂತ ನಟಿ ತಮನ್ನಾ ಭಾಟಿಯಾ ಆಜ್ ಕಿ ರಾತ್ ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಸೂಪರ್ ಹಿಟ್ ಆಗಿದೆ. ಇದೀಗ ಯುವತಿಯೊಬ್ಬಳು ತಮನ್ನಾಗಿಂತ ಹಾಟ್ ಆಗಿ ಇದೇ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
 

Hot Young lady re create tamanna bhatia aaj ki raat dance video goes viral ckm
Author
First Published Aug 5, 2024, 5:58 PM IST | Last Updated Aug 5, 2024, 5:58 PM IST

ನಟಿ ತಮನ್ನಾ ಭಾಟಿಯಾ ಅಭಿನಯದ ಸ್ತ್ರೀ 2 ಚಿತ್ರ ನಿರೀಕ್ಷೆಗಳು ಹೆಟ್ಟಾಗಿದೆ. ಈ ಚಿತ್ರದ ಆಜ್ ಕಿ ರಾತ್ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಆಜ್ ಕಿ ರಾತ್ ಹಾಡಿನಲ್ಲಿ ತಮನ್ನಾ ಭಾಟಿಯಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಎಲ್ಲೆಡೆ ಆಜ್ ಕಿ ರಾತ್ ಹಾಡು ಸದ್ದು ಮಾಡುತ್ತಿದೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಸದ್ದು ಮಾಡುವ ಹಲವರು ಇದೇ ಆಜ್ ಕಿ ರಾತ್ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಈ ಪೈಕಿ ರೀಲ್ಸ್ ಮೂಲಕವೇ ಸದ್ದು ಮಾಡಿರುವ ನೇಹಾ ಚೌಹಾನ್ ಇದೇ ಹಾಡಿಗೆ ಹೆಜ್ಜೆ ಹಾಕಿ ವೈರಲ್ ಆಗಿದ್ದಾರೆ.

ತಮನ್ನಾ ಭಾಟಿಯಾಗಿಂತ ಹಾಟ್ ಆಗಿ ಕಾಣಿಸಿಕೊಂಡಿರುವ ನೆಹಾ ಚೌಹಾನ್ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಆಜ್ ಕಿ ರಾತ್ ಹಾಡಿನಲ್ಲಿ ತಮನ್ನಾ ಧರಿಸಿರುವ ರೀತಿಯ ಡ್ರೆಸ್ ಧರಿಸಿ ಸ್ಪೆಪ್ಸ್ ಹಾಕಿದ್ದಾರೆ. ಈಕೆಯ ಹಾಟ್ ಸ್ಟೆಪ್ಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತಮನ್ನಾ ಭಾಟಿಯಾ ಜೈಲರ್ ಚಿತ್ರದಲ್ಲಿ ನು ಕಾವಾಲಿ ಐಟಮ್ ಹಾಡಿನಲ್ಲಿ ಕಾಣಿಸಿಕೊಡಿದ್ದರು. ತಮನ್ನಾ ಬೋಲ್ಡ್ ಬ್ಯೂಟಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಆದರೆ ಆಜ್ ಕಿ ರಾತ್ ಹಾಡಿನಲ್ಲಿ ತಮನ್ನಾ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ನೇಹಾ ಚೌಹಾನ್ ನಟಿಗಿಂತಲೂ ಬೋಲ್ಡ್ ಆಗಿ ಹೆಜ್ಜೆ ಹಾಕಿ ಎಲ್ಲರ ಗಮನಸೆಳೆದಿದ್ದಾರೆ.

ಆಜ್ ಕಿ ರಾತ್ ಹಾಟ್ ಸೀನ್ ಶೂಟಿಂಗ್ ನಡುವೆ ತಮನ್ನಾಗೆ ಸರ್ಪ್ರೈಸ್, ವಿಡಿಯೋ ಹಂಚಿಕೊಂಡ ನಟಿ!

ಯುವತಿಯ ಆಜ್ ಕಿ ರಾತ್ ಸ್ಪೆಪ್ಸ್‌ಗೆ ಭಾರಿ ಲೈಕ್ಸ್ ಹಾಗೂ ಕಮೆಂಟ್ ವ್ಯಕ್ತವಾಗಿದೆ. ತಮನ್ನಾ ಮೀರಿಸಿದ್ದೀರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅದ್ಭುತ ಡ್ಯಾನ್ಸ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಡ್ಯಾನ್ಸ್ ಮೂಲಕ ಸಿನಿ ಕ್ಷೇತ್ರಕ್ಕೆ ಕಾಲಿಡುವ ಸಾಧ್ಯತೆ ಎಂದು ಕೆಲವರು ಭವಿಷ್ಯ ನುಡಿದಿದ್ದಾರೆ

 

 
 
 
 
 
 
 
 
 
 
 
 
 
 
 

A post shared by Neha chauhan (@vibhu.neha)

 

ತಮನ್ನಾ ಅಭಿನಯದ ಸ್ತ್ರೀ 2 ಚಿತ್ರದ ಶೂಟಿಂಗ್ ಮುಕ್ತಾಯಗೊಂಡು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದೆ. ಆಗಸ್ಟ್ 15 ರಂದು ಸ್ತ್ರೀ 2 ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರದ ಆಜ್ ಕಿ ರಾತ್ ಹಾಡು ಭಾರಿ ವೈರಲ್ ಆಗಿದೆ. ಸ್ತ್ರೀ 2 ಚಿತ್ರವನ್ನು ಅಮರ್ ಕೌಶಿ ನಿರ್ದೇಶನ ಮಾಡಿದ್ದಾರೆ. ದಿನೇಶ್ ವಿಜಾನ್ ಹಾಗೂ ಜ್ಯೋತಿ ದೇಶಪಾಂಡೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಪ್ರಮುಖವಾಗಿ ವರುಣ್ ಧವನ್, ಪಂಕಜ್ ತ್ರಿಪಾಠಿ ಸೇರಿದಂತೆ ಖ್ಯಾತ ತಾರಾಗಣ ಈ ಚಿತ್ರದಲ್ಲಿದೆ.

.'ಇವತ್ತಿನ ರಾತ್ರಿ..' ಎಂದ್ಕೊಂಡು ಮತ್ತಷ್ಟು ಹಾಟ್‌ ಆಗಿ ಬಂದ ತಮನ್ನಾ!
 

Latest Videos
Follow Us:
Download App:
  • android
  • ios