ಪಾಕ್‌ನಲ್ಲಿ ಲಷ್ಕರ್ ಉಗ್ರ ನೇಮಕಗಾರನ ನಿಗೂಢ ಹತ್ಯೆ: 1.5 ವರ್ಷದಲ್ಲಿ 19ನೇ ಉಗ್ರಗಾಮಿ ಸಾವು
ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆಯ ಪ್ರಮುಖ ನಾಯಕರ ಪೈಕಿ ಒಬ್ಬನಾಗಿದ್ದ ಅಕ್ರಂ ಖಾನ್ ಅಲಿಯಾಸ್ ಅಕ್ರಂ ಘಾಜಿ ಅನಾಮಿಕ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.
ಇಸ್ಲಾಮಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆಯ ಪ್ರಮುಖ ನಾಯಕರ ಪೈಕಿ ಒಬ್ಬನಾಗಿದ್ದ ಅಕ್ರಂ ಖಾನ್ ಅಲಿಯಾಸ್ ಅಕ್ರಂ ಘಾಜಿ ಅನಾಮಿಕ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.
ನೆರೆಯ ಆಫ್ಘಾನಿಸ್ತಾನಕ್ಕೆ ಹೊಂದಿಕೊಂಡಿರುವ ಬಜೆರ್‌ನಲ್ಲಿ ಗುಂಪೊಂದು ಗುರುವಾರ ನಡೆಸಿದ ಗುಂಡಿನ ದಾಳಿಯಲ್ಲಿ ಅಕ್ರಂ ಖಾನ್ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.
ನಿಗೂಢ ಹತ್ಯೆ:
ಕಳೆದ ಒಂದೂವರೆ ವರ್ಷದಲ್ಲಿ ಭಾರತ ವಿರೋಧಿ ಕೃತ್ಯ ನಡೆಸುತ್ತಿದ್ದ, ಭಯೋತ್ಪಾದನಾ ಕೃತ್ಯ ನಡೆಸುತಿದ್ದ 18 ಉಗ್ರರು ಪಾಕಿಸ್ತಾನ, ಕೆನಡಾ ಸೇರಿ ಹಲವು ದೇಶಗಳಲ್ಲಿ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಗಾಜಾ ಶಿಬಿರ: 50 ಸಾವಿರ ನಿರಾಶ್ರಿತರಿಗೆ ಬರೀ 4 ಟಾಯ್ಲೆಟ್, 4 ತಾಸಷ್ಟೇ ನೀರು!
ಯಾರು ಈ ಅಕ್ರಂ?
ಈತ ಲಷ್ಕರ್ ಸಂಘಟನೆ ಪ್ರಮುಖ ನಾಯಕರ ಪೈಕಿ ಒಬ್ಬನಾಗಿದ್ದು, 2018-2020 ಅವಧಿಯಲ್ಲಿ ಸಂಘಟನೆಗೆ ಹೊಸ ಉಗ್ರರ ನೇಮಕಾತಿ ಮಾಡುವ ಕೆಲಸ ಮಾಡುತ್ತಿದ್ದ. ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಭಾಷಣಗಳ ಮೂಲಕ ಭಯೋತ್ಪಾದಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ.