Asianet Suvarna News Asianet Suvarna News

ಕುಟುಂಬಕ್ಕಾಗಿ ಹೆಣ್ಣು ಕೆಲ್ಸ ಬಿಡೋದು ಕಾಣಲ್ವಾ? ಪರಾವಲಂಬಿ ಎಂದು ಹೆಣ್ಣುಕುಲಕ್ಕೆ ಅವಮಾನ ಮಾಡ್ಬೇಡಿ- ಕೋರ್ಟ್​ ತರಾಟೆ

 ಕುಟುಂಬಕ್ಕಾಗಿ ಮಹಿಳೆ ಉದ್ಯೋಗ ತೊರೆದು ತ್ಯಾಗ ಮಾಡಿದರೂ ಆಕೆಯನ್ನು ಪರಾವಲಂಬಿ ಎನ್ನುವ ಮೂಲಕ ನೋಯಿಸುವ ಮನಸ್ಥಿತಿಗೆ ಹೈಕೋರ್ಟ್​ ಕಿಡಿ ಕಾರಿದೆ. ಕೋರ್ಟ್​ ಹೇಳಿದ್ದೇನು? 
 

Husband calling wife parasite insult to her entire womankind Delhi High Court suc
Author
First Published Sep 25, 2024, 1:58 PM IST | Last Updated Sep 25, 2024, 1:58 PM IST

ಕುಟುಂಬ, ಸಂಸಾರ, ಗಂಡ, ಮಕ್ಕಳು... ಹೀಗೆ ಎಲ್ಲಾ ಜವಾಬ್ದಾರಿಯನ್ನು ನಿಭಾಯಿಸುವ ಸಲುವಾಗಿ ಎಷ್ಟೋ ಹೆಣ್ಣುಮಕ್ಕಳು ಕಷ್ಟಪಟ್ಟು ಪಡೆದ ನೌಕರಿಯನ್ನೂ ಬಿಡುವುದು ಇದೆ. ಓದಿ ದೊಡ್ಡ ದೊಡ್ಡ ಡಿಗ್ರಿ, ರ್ಯಾಂಕ್​ ಪಡೆದು ಉನ್ನತ ಹುದ್ದೆಯಲ್ಲಿ ಇರುವ ಹೆಣ್ಣುಮಕ್ಕಳು ಅದೆಷ್ಟೋ ಮಂದಿ ಅನಿವಾರ್ಯವಾಗಿ ಕುಟುಂಬಕ್ಕಾಗಿ ಉದ್ಯೋಗ ತೊರೆಯುವವರು ಇದ್ದಾರೆ. ಗಂಡನಿಂದ ಹೆಚ್ಚಿಗೆ ದುಡಿಯುತ್ತಿದ್ದರೂ, ಆತನಿಗಿಂತ ಒಳ್ಳೆಯ ಉದ್ಯೋಗದಲ್ಲಿದ್ದರೂ, ಆತನಿಗಿಂತಲೂ ಹೆಚ್ಚು ಕಲಿತಿದಿದ್ದರೂ ತ್ಯಾಗದ ಪ್ರಶ್ನೆ ಬಂದಾಗ ಎಲ್ಲರೂ ಬೊಟ್ಟು ಮಾಡಿ ತೋರಿಸುವುದು ಮಹಿಳೆಯರನ್ನೇ. ಪುರುಷ ಮತ್ತು ಮಹಿಳೆ ಸಮಾನ ಎಂದು ದೊಡ್ಡ ದೊಡ್ಡ ಘೋಷಣೆ ಮಾಡಿದರೂ, ಇದು ಪುರುಷ ಪ್ರಧಾನ ಸಮಾಜ ಅಲ್ಲವೇ ಅಲ್ಲ ಎಂದು ಏನೇ ಹೋರಾಟ ಮಾಡಿದರೂ ಆಗೀಗ ಅಲ್ಲೊಂದು ಇಲ್ಲೊಂದು ಪ್ರಕರಣ ಹೊರತುಪಡಿಸಿದರೆ ತ್ಯಾಗ, ಸಹನೆ, ತಾಳ್ಮೆ ಎಲ್ಲವೂ ಹೆಣ್ಣಿಗೇ ಸೀಮಿತ ಆಗಿರುವುದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಇದೇ ಸತ್ಯವನ್ನು ಈಗ ದೆಹಲಿ ಹೈಕೋರ್ಟ್​ ಮತ್ತೊಮ್ಮೆ ತಿಳಿ ಹೇಳಿದೆ.

ಹೆಂಡತಿಯನ್ನು ಪರಾವಲಂಬಿ ಎನ್ನುವ ಗಂಡನೊಬ್ಬನನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ನ್ಯಾಯಮೂರ್ತಿಗಳು, ಹೆಣ್ಣನ್ನು "ಪರಾವಲಂಬಿ" ಎಂದು ಉಲ್ಲೇಖಿಸುವುದು ಅವಳಿಗೆ ಮಾತ್ರವಲ್ಲದೆ ಎಲ್ಲಾ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಒತ್ತಿಹೇಳಿದ್ದಾರೆ. ವಿಚ್ಛೇದನದ ಬಳಿಕ ಜೀವನಾಂಶ ಕೊಡುವ ವಿಚಾರದಲ್ಲಿ ಕೌಟುಂಬಿಕ ಕೋರ್ಟ್​ ಆದೇಶವನ್ನು ಪ್ರಶ್ನಿಸಿ ಗಂಡನೊಬ್ಬ ಹೈಕೋರ್ಟ್​  ಮೆಟ್ಟಿಲೇರಿದ್ದ. ತನ್ನ ಪತ್ನಿಗೆ ಗಳಿಸುವ ಸಾಮರ್ಥ್ಯವಿದೆ. ಆದರೂ ಹೀಗೆ ಪರಾವಲಂಬಿಯಾಗುವುದು ಸರಿಯಲ್ಲ. ಜೀವನಾಂಶ ಕೊಡುವಂತೆ ಕೋರ್ಟ್​ ಆದೇಶಿಸಿರುವ ಸರಿಯಲ್ಲ ಎನ್ನುವುದು ಅವನ ವಾದ. 

ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ? ಕಾರ್ಯನಿರ್ವಹಿಸುತ್ತಲೇ ಎಚ್​ಡಿಎಫ್​ಸಿ ಬ್ಯಾಂಕ್​ ಮಹಿಳಾ ಉದ್ಯೋಗಿ ಸಾವು!

ಈತ ಬೇರೊಬ್ಬ ಮಹಿಳೆಯ ಜೊತೆ ವಾಸ ಮಾಡುವ ಸಂಬಂಧ ಪತ್ನಿ ಮತ್ತು ಮಕ್ಕಳನ್ನು ತೊರೆಯಲು ನಿರ್ಧರಿಸಿರುವುದಾಗಿ ಪತ್ನಿ ಪರ ವಕೀಲರು ವಾದಿಸಿದ್ದರು. ಕೌಟುಂಬಿಕ ಕೋರ್ಟ್​ ಪತಿಯ ಆದಾಯಗಳನ್ನು ಗಣನೆಗೆ ತೆಗೆದುಕೊಂಡು  ತಿಂಗಳಿಗೆ 30 ಸಾವಿರ ರೂಪಾಯಿ  ಜೀವನಾಂಶವನ್ನು ನೀಡುವಂತೆ ಆದೇಶಿಸಿತ್ತು.  ಇದರ ಜೊತೆಗೆ ಹೆಚ್ಚುವರಿಯಾಗಿ ಎಂಟು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನಿರ್ದೇಶಿಸಿತ್ತು. ಇದರ ವಿಚಾರಣೆಯನ್ನು ಕೈಗೆತ್ತಿಗೊಂಡ  ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ , ಭಾರತೀಯ ಹೆಣ್ಣುಮಕ್ಕಳು ಕುಟುಂಬಕ್ಕಾಗಿ ತ್ಯಾಗ ಮಾಡುವುದನ್ನು ನೀವು ನೋಡಿಲ್ಲವೆ? ಹೆಣ್ಣನ್ನು ಪರಾವಲಂಬಿ ಎಂದು ಕರೆದು ಇಡೀ ಹೆಣ್ಣುಕುಲಕ್ಕೆ ಅವಮಾನ ಮಾಡಬೇಡಿ ಎಂದು ಹೇಳುವ ಮೂಲಕ ಕೌಟುಂಬಿಕ ಕೋರ್ಟ್​ ಆದೇಶವನ್ನು ಎತ್ತಿ ಹಿಡಿದಿರು. 


ಹೆಂಡತಿಗೆ ಜೀವನೋಪಾಯದ  ಸಾಮರ್ಥ್ಯ ಇದ್ದರೂ, ಪತಿಯಾದವ ಜೀವನಾಂಶವನ್ನು ಒದಗಿಸುವ ಕರ್ತವ್ಯದಿಂದ ವಿಮುಖನಾಗುವಂತಿಲ್ಲ. ಗಂಡನಾದವ ಸಾಕಷ್ಟು ಗಳಿಸುತ್ತಿದ್ದರೂ ಆಕೆಗೆ ಜೀವನಾಂಶ ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಭಾರತೀಯ ಹೆಣ್ಣುಮಕ್ಕಳ ಬಗ್ಗೆ ಅವಮಾನ ಮಾಡುವುದು ಸಲ್ಲ. ಅವರ ತ್ಯಾಗವನ್ನು ಒಮ್ಮೆ ಗಮನಿಸಿ, ಅವರನ್ನು ಪರಾವಲಂಬಿ ಎನ್ನುವ ಶಬ್ದದಿಂದ ಅವಹೇಳನ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. 

ಗಂಡಂದಿರನ್ನು ಹೀಗಾ ಮೂದಲಿಸೋದು ಫ್ಲಿಪ್‌ಕಾರ್ಟ್? ಹಕ್ಕಿಗಾಗಿ ಪುರುಷರಿಂದ ಪ್ರತಿಭಟನೆ!

Latest Videos
Follow Us:
Download App:
  • android
  • ios