International
ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾಗಿನ್ನೂ ಸುಸ್ತಾದಂತೆ ಕಾಣಿಸುತ್ತಿಲ್ಲ. ಇದೀಗ ಪುಟಿನ್ ವಯಸ್ಸೇ ಆಗದಂತೆ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳಿಗೆ ಆದೇಶಿಸಿದ್ದಾರೆ.
ವಯಸ್ಸಾದವರು ಈಗ ಯುವಕರಾಗುತ್ತಾರೆ, ರಷ್ಯಾ ಈ ಕೆಲಸ ಮಾಡಲಿದೆ! ಹೇಗೆ ಮತ್ತು ಯಾವಾಗ ಎಂದು ತಿಳಿಯಿರಿ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ವಿಜ್ಞಾನಿಗಳಿಗೆ ಆ್ಯಂಟಿ ಏಜಿಂಗ್ ಔಷಧಿ ಕಂಡು ಹಿಡಿಯಲು ಆದೇಶಿಸಿದ್ದಾರೆ.
ವ್ಲಾಡಿಮಿರ್ ಪುಟಿನ್ ತಮ್ಮ ಸರ್ಕಾರದಲ್ಲಿ ವಯಸ್ಸಾಗುತ್ತಿರುವ ಅನೇಕ ಸಚಿವರ ವಯಸ್ಸನ್ನು ನಿಲ್ಲಿಸಬೇಕಂತೆ. ಈ ವರ್ಷದ ಜೂನ್‌ನಲ್ಲಿ ವಿಜ್ಞಾನಿಗಳಿಗೆ ಪುಟಿನ್ ಸರಕಾರ ಈ ವಿಚಿತ್ರ ಆದೇಶ ನೀಡಿದೆ.
ರಷ್ಯಾದ ಆರೋಗ್ಯ ಸಚಿವಾಲಯ ವಿಜ್ಞಾನಿಗಳಿಗೆ 2030 ರ ವೇಳೆಗೆ 175,000 ವೃದ್ಧರನ್ನು ಯುವಕರನ್ನಾಗಿ ಮಾಡುವ ಗುರಿ ನೀಡಿದೆ. ಪುಟಿನ್ ಸರ್ಕಾರದ ಈ ಆದೇಶ ವಿಜ್ಞಾನಿಗಳನ್ನೂ ಗೊಂದಲಕ್ಕೆ ತಳ್ಳಿದೆ.
ರಷ್ಯಾ-ಉಕ್ರೇನ್ ಯುದ್ಧದ ನಡುವೆ ಪುಟಿನ್ ಅವರ ವಯಸ್ಸಿನ ಬಗ್ಗೆ ಕಾಳಜಿ ಹೆಚ್ಚಾಗಿದೆ. ಏಕೆಂದರೆ ಈ ಯುದ್ಧದಲ್ಲಿ ಯುವಕರು ನಿರಂತರವಾಗಿ ಸಾಯುತ್ತಿದ್ದು, ರಷ್ಯಾದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ.
ರಷ್ಯಾದ ಫೆಡರಲ್ ಸ್ಟೇಟ್ ಸ್ಟ್ಯಾಟಿಸ್ಟಿಕ್ಸ್ ಸರ್ವಿಸ್ (ರೋಸ್‌ಸ್ಟಾಟ್) ಮಾಹಿತಿ ಪ್ರಕಾರ, ಜುಲೈ 2023 ಮತ್ತು ಜೂನ್ 2024 ರ ನಡುವಿನ ಸರಾಸರಿ ಜೀವಿತಾವಧಿ 73.24 ವರ್ಷಗಳಿಗೆ ಕುಸಿದಿದೆ.
MRC ಲ್ಯಾಬೊರೇಟರಿ ಆಫ್ ಮೆಡಿಕಲ್ ಸೈನ್ಸ್, ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು ಸಿಂಗಾಪುರದ ಡ್ಯೂಕ್-NUS ಮೆಡಿಕಲ್ ಸ್ಕೂಲ್ ಸಂಶೋಧಕರು ಈ ಔಷಧವನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಸಂಶೋಧಕರು ಪ್ರಯೋಗಾಲಯದಲ್ಲಿ ಇಲಿ ಮೇಲೆ ಪ್ರಯೋಗ ನಡೆಸಿದ್ದು ವರ್ಕ್ ಔಟ್ ಆಗಿದೆಯಂತೆ. ಈ ಔಷಧ ಪ್ರಾಣಿಗಳ ಜೀವಿತಾವಧಿಯನ್ನು ಸುಮಾರು 25% ರಷ್ಟು ಹೆಚ್ಚಿಸಿದ್ದು, ಮನುಷ್ಯರ ಮೇಲೆ ಪ್ರಯೋಗವಾಗಬೇಕಷ್ಟೇ.
ಇತ್ತೀಚೆಗೆ, ರಷ್ಯಾದ ಉಪ ಪ್ರಧಾನ ಮಂತ್ರಿ ತತ್ಯಾನಾ ಗೋಲಿಕೋವಾ ವೃದ್ಧಾಪ್ಯದಲ್ಲಿ ಕಾಯಿಲೆ ದೂರವಿಡುವ ಹೈಟೆಕ್ ತಂತ್ರಜ್ಞಾನಗಳನ್ನು ಸರ್ಕಾರ ಅನಾವರಣಗೊಳಿಸಿದ್ದು, ವಿಜ್ಞಾನಿಗಳು ಹೊಸ ಸಂಶೋಧನೆ ಕೈಗೊಳ್ಳುವಂತೆ ಸೂಚಿಸಿದೆ.
ಪುಟಿನ್ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಭಾರತೀಯ ಪುರಾತನ ಕಥೆಯಲ್ಲಿ ಯಯಾತಿ ಬಯಸಿದಂತೆ ಕೆಲಸ ಮಾಡೋ ಬಗ್ಗೆ ಗೊಂದಲ ತೋರಿದ್ದಾರೆ. ಕಡಿಮೆ ಅವಧಿಯಲ್ಲಿ ಗುರಿ ಸಾಧಿಸುವ ಬಗ್ಗೆಯೂ ಅನುಮಾನವಿದೆ.