Woman

ಡ್ರಾಯಿಂಗ್ ರೂಮಿಗೆ ಹೊಸ ಲುಕ್

ಮನೆಗೆ ವಿಶೇಷ ಲುಕ್ ನೀಡವುದೇ ಹಾಕುವ ಕರ್ಟೈನ್ಸ್. 

ತಿಳಿ ಗೋಡೆಗೆ ಗಾಢ ಪರದೆ

ಡ್ರಾಯಿಂಗ್ ರೂಮಿನ ಗೋಡೆಗಳು ತಿಳಿ ಬಣ್ಣದಲ್ಲಿದ್ದರೆ, ಮರೂನ್ ಬಣ್ಣದ ಗಾಢ ಪರದೆಗಳನ್ನು ಹಾಕಬಹುದು. ಇದರೊಂದಿಗೆ ಕಾಂಟ್ರಾಸ್ಟ್‌ನಲ್ಲಿ ಕ್ರೀಮ್ ಬಣ್ಣದ ಟಿಶ್ಯೂ ಪರದೆ ಬಳಸಿದರೆ ಲುಕ್ ಹೆಚ್ಚುತ್ತದೆ.

ನೆಟ್ ಪರದೆ

ಡ್ರಾಯಿಂಗ್ ರೂಮ್ ಸೌಂದರ್ಯ ಹೆಚ್ಚಿಸಲು ರೂಮಿನ ಬಾಗಿಲಲ್ಲಿ ನೆಟ್‌ನ ತೆಳು ಪರದೆಗಳನ್ನು ಸಹ ಹಾಕಬಹುದು. ಇದರೊಂದಿಗೆ ದಪ್ಪ ಪರದೆಗಳ ಸಂಯೋಜನೆಯನ್ನು ಹೊಂದಿಸಿ.

ಪ್ಲೇನ್ ಉದ್ದ ಪರದೆ

ಡ್ರಾಯಿಂಗ್ ರೂಮಿನಲ್ಲಿ ಈ ರೀತಿಯ ಬಾಟಲ್ ಗ್ರೀನ್ ಬಣ್ಣದ ಉದ್ದ ಪ್ಲೇನ್ ಪರದೆಯನ್ನೂ ಹಾಕಬಹುದು. ಇದು ನಿಮ್ಮ ಡ್ರಾಯಿಂಗ್ ರೂಮಿಗೆ ಸಂಪೂರ್ಣ ರಾಯಲ್ ಲುಕ್ ನೀಡುತ್ತದೆ.

ಪ್ರಿಂಟೆಡ್ ಕ್ಲೋತ್

ಪ್ಲೇನ್ ಗೋಡೆಗೆ ಹೂವಿನ ಪ್ರಿಂಟ್ ಇರೋ ಪರದೆ ಸುಂದರವಾಗಿ ಕಾಣುತ್ತದೆ. ಬಿಳಿ ಬೇಸ್‌ನಲ್ಲಿ ಹಸಿರು ಬಣ್ಣದ ಹೂವಿನ ಪ್ರಿಂಟ್ಸ್ ಇರೋ ಪರದೆಗಳು ಡ್ರಾಯಿಂಗ್ ರೂಮಿನ ಕಿಟಕಿ ಮತ್ತು ಬಾಗಿಲಿಗೆ ವಿಶೇಷ ಮೆರಗು ನೀಡುತ್ತದೆ.

ಹೊಸ ಪರದೆ

ಡ್ರಾಯಿಂಗ್ ರೂಮಿನ ಬಣ್ಣ ಬಿಳಿಯಾಗಿದ್ದರೆ ಮತ್ತು ಅದರೊಂದಿಗೆ ನೀವು ಪ್ಯಾಸ್ಟಲ್ ಬಣ್ಣದ ಪೀಠೋಪಕರಣಗಳಿದ್ದರೆ, ಪೀಚ್ ಬಣ್ಣದ ಉದ್ದ ಪರದೆಗಳು ಹೆಚ್ಚು ಲುಕ್ ನೀಡುತ್ತದೆ.

ಡಿಜಿಟಲ್ ಪ್ರಿಂಟ್

ಮನೆಗೆ ಆಧುನಿಕ ನೋಟವನ್ನು ನೀಡಲು, ಡಿಜಿಟಲ್ ಪ್ರಿಂಟ್ ಪರದೆಗಳನ್ನು ಬಾಲ್ಕನಿಯ ಬಾಗಿಲು ಮತ್ತು ಕಿಟಕಿಗೆ ಬಳಸಬಹುದು. ಇದೇ ರೀತಿಯ ವರ್ಣಚಿತ್ರಗಳನ್ನು ಗೋಡೆ ಮೇಲೆ ಹಾಕಿ.

ಶೇಡ್ ಪರದೆ

ಈ ರೀತಿಯ ಡಬಲ್ ಶೇಡ್ ಪರದೆಗಳು ಮನೆಗೆ ಆಧುನಿಕ ನೋಟವನ್ನು ನೀಡುತ್ತವೆ. ತಿಳಿ ಮತ್ತು ಗಾಢ ಕಂದು ಬಣ್ಣದ ಪ್ಲೇನ್ ಪರದೆಯನ್ನು ದೊಡ್ಡ ಕಿಟಕಿ ಅಥವಾ ಬಾಗಿಲಿನ ಮೇಲೆ ನೇತು ಹಾಕಬಹುದು.

ಹಬ್ಬದ ಶೃಂಗಾರಕ್ಕೆ ಲೈಟ್ ವೆಯ್ಟ್ ಜುಮಕಿ ಧರಿಸಿ ಕಮಾಲ್ ಮಾಡಿ

ಸೀರೆ ಫಾಲ್ಸ್ ಹಾಕೋ ಮುನ್ನ ಇರಲಿ ಗಮನ, ಇಲ್ಲಿವೆ ಸಿಂಪಲ್ ಟಿಪ್ಸ್

ಬಳೆಗಿಂತ ಖಡ್ಗ ಎಲ್ಲ ಡ್ರೆಸ್ಸಿಗೂ ಸೈ, ಇಲ್ಲಿವೆ 8 ಡಿಸೈನ್ಸ್!

ಚಳಿ ಶುರುವಾಗ್ತಿದೆ. ತ್ವಚಾ ಸೌಂದರ್ಯಕ್ಕೆ ಹೀಗ್ ಮಾಡಿ