Woman
ಪದೆ ಪದೇ ಡ್ರೈ ಕ್ಲೀನಿಗೆ ಕೊಟ್ಟರೆ ಸೋಫಾ ಕುಶನ್ಸ್ ಸೌಂದರ್ಯ ಹದಗೆಡುತ್ತೆ. ಅದಕ್ಕೇನು ಮಾಡೇಬೇಕು?
ಸೋಫಾದ ಕುಶನ್‌ಗಳ ಒಳಗೆ ಧೂಳು, ಮಣ್ಣು ಮತ್ತು ಬ್ಯಾಕ್ಟೀರಿಯಾ ಸಂಗ್ರಹವಾಗುತ್ತವೆ. ಇವುಗಳನ್ನು ಆಗಾಗ ಸ್ವಚ್ಛಗೊಳಿಸುವುದು ಬಹಳ ಮುಖ್ಯ.
ಮೊದಲು ಕುಶನ್ ಕವರ್‌ಗಳನ್ನು ತೆಗೆಯಿರಿ. ನೀವು ಈ ಕವರ್‌ಗಳನ್ನು ಕೈಯಿಂದ ಅಥವಾ ವಾಷಿಂಗ್ ಮಷಿನ್‌ನಲ್ಲಿ ಸೌಮ್ಯವಾದ ಡಿಟರ್ಜೆಂಟ್‌ನಿಂದ ತೊಳೆಯಬಹುದು.
ನಿಮ್ಮ ಕುಶನ್‌ಗಳನ್ನು ಜೋರಾಗಿ ತಟ್ಟುವ ಮೂಲಕ ಧೂಳು ತೆಗೆಯಬಹುದು ಅಥವಾ ವ್ಯಾಕ್ಯೂಮ್ ಕ್ಲೀನರ್ ಬಳಸಿ ಒಳಗೆ ಸಂಗ್ರಹವಾಗಿರುವ ಧೂಳು ಮತ್ತು ಕೊಳಕನ್ನು ತೆಗೆಯಬಹುದು.
ಸೋಫಾದ ಕೊಳಕು ಕುಶನ್‌ಗಳನ್ನು ಬಿಸಿಲಿಗೆ ಒಡ್ಡುವುದರಿಂದ ಬ್ಯಾಕ್ಟೀರಿಯಾ ಮತ್ತು ದುರ್ವಾಸನೆ ನಿವಾರಣೆಯಾಗುತ್ತದೆ. ತಾಜತನ ಬರುತ್ತದೆ. ತಿಂಗಳಿಗೊಮ್ಮೆಯಾದರೂ ಹೀಗೆ ಮಾಡಿ.
ಬೇಕಿಂಗ್ ಸೋಡಾವನ್ನು ನೇರವಾಗಿ ಕುಶನ್‌ಗಳ ಮೇಲೆ ಚಿಮುಕಿಸಿ. ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನಂತರ ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛಗೊಳಿಸಿ. ಇದು ತೇವಾಂಶ ಮತ್ತು ದುರ್ವಾಸನೆಯನ್ನು ನಿವಾರಿಸುತ್ತದೆ.
ಒಂದು ಬಟ್ಟಲು ಬಿಸಿ ನೀರಿಗೆ ಒಂದು ಕಪ್ ಬ್ಲೀಚ್ ಬೆರೆಸಿ ಸ್ಪ್ರೇ ಬಾಟಲಿಗೆ ಹಾಕಿ. ಇನ್ನು ಕುಶನ್ ಮೇಲೆ ಸ್ಪ್ರೇ ಮಾಡಿ. 15 ನಿಮಿಷ ಬಿಟ್ಟು ಸ್ಪಂಜ್ ಅಥವಾ ಬ್ರಷ್‌ನಿಂದ ಲಘವಾಗಿ ಉಜ್ಜಿ ಸ್ವಚ್ಛಗೊಳಿಸಿ.
ಸಮ ಪ್ರಮಾಣದಲ್ಲಿ ವಿನೆಗರ್ ಮತ್ತು ನೀರನ್ನು ಬೆರೆಸಿ ಸ್ಪ್ರೇ ಬಾಟಲಿಗೆ ಹಾಕಿ. ಕುಶನ್ ಮೇಲೆ ಲಘುವಾಗಿ ಸ್ಪ್ರೇ ಮಾಡಿ ಮತ್ತು ಸ್ವಚ್ಛ ಬಟ್ಟೆಯಿಂದ ಒರೆಸಿ. ಇದು ಕುಶನ್‌ನ ಕಲೆ ಮತ್ತು ಕೊಳಕನ್ನು ನಿವಾರಿಸುತ್ತದೆ.
ನಿಮ್ಮ ಕುಶನ್‌ಗಳು ತುಂಬಾ ಕೊಳಕಾಗಿದ್ದರೆ, ನೀವು ಸ್ಟೀಮ್ ಕ್ಲೀನಿಂಗ್ ಮಾಡಬಹುದು. ಇದು ಕುಶನ್‌ಗಳನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.
ಕುಶನ್‌ಗಳ ಮೇಲೆ ಕೊಳಕು, ಬೆವರು, ಮೂತ್ರ ಅಥವಾ ಎಣ್ಣೆಯ ಕಲೆಗಳಿದ್ದರೆ, ಆ ಜಾಗದಲ್ಲಿ ಕಾರ್ನ್‌ಸ್ಟಾರ್ಚ್ ಹಾಕಿ 10-15 ನಿಮಿಷಗಳ ನಂತರ ಸ್ವಚ್ಛಗೊಳಿಸಿ. ಕಲೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.