ಮುಖದ ಮೇಲಿನ ಸುಕ್ಕು, ಮೊಡವೆ ಹೋಗಲಾಡಿಸಲು ಓಟ್ಸ್ ಫೇಸ್ ಪ್ಯಾಕ್ ಬಳಸುವುದು ಉತ್ತಮ. ಓಟ್ಸ್‌ನಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮುಖದ ಸುಕ್ಕು ತಡೆಯಲು, ಕಾಲಜನ್ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತವೆ.
Image credits: Getty
Kannada
ಓಟ್ಸ್-ಮೊಸರು
ಎರಡು ಚಮಚ ಓಟ್ಸ್, ಒಂದು ಚಮಚ ಮೊಸರು ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷಗಳ ನಂತರ ತೊಳೆಯಿರಿ
Image credits: Getty
Kannada
ಓಟ್ಸ್-ಆಲಿವ್ ಎಣ್ಣೆ
ಎರಡು ಚಮಚ ಓಟ್ಸ್‌ನಲ್ಲಿ ಒಂದು ಚಮಚ ಚಮಚ ಜೇನುತುಪ್ಪ ಮತ್ತು ಆಲಿವ್ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. 20 ನಿಮಿಷಗಳ ನಂತರ ತೊಳೆಯಿರಿ.
Image credits: Getty
Kannada
ಓಟ್ಸ್-ಅರಿಶಿನ
ಎರಡು ಚಮಚ ಓಟ್ಸ್‌ನಲ್ಲಿ ಅರ್ಧ ಚಮಚ ಅರಿಶಿನ ಮತ್ತು ಸ್ವಲ್ಪ ನೀರು ಸೇರಿಸಿ ಮಿಶ್ರಣವನ್ನು ತಯಾರಿಸಿ. ಈ ಮಿಶ್ರಣ ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ.
Image credits: Getty
Kannada
ಓಟ್ಸ್-ಪಪ್ಪಾಯಿ
ಹಣ್ಣಾದ ಪಪ್ಪಾಯಿ ತಿರುಳಿಗೆ 2 ಚಮಚ ಓಟ್ಸ್, 1 ಚಮಚ ಬಾದಾಮಿ ಎಣ್ಣೆ ಸೇರಿಸಿ ಮಿಶ್ರಣವನ್ನು ತಯಾರಿಸಿ. ಈ ಮಿಶ್ರಣ ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ.
Image credits: freepik
Kannada
ಓಟ್ಸ್-ಅಲೋವೆರಾ ಜೆಲ್
ಒಂದು ಚಮಚ ಅಲೋವೆರಾ ಜೆಲ್ ಮತ್ತು ಎರಡು ಚಮಚ ಓಟ್ಸ್ ಅನ್ನು ಒಟ್ಟಿಗೆ ಸೇರಿಸಿ ಮಿಶ್ರಣ ತಯಾರಿಸಿ. ಈ ಮಿಶ್ರಣ ಮುಖಕ್ಕೆ ಹಚ್ಚಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಈ ಲೇಖನ ಕೇವಲ ಸಾಮಾನ್ಯ ಮಾಹಿತಿಗಾಗಿ ಮಾತ್ರ. ಏಷ್ಯಾನೆಟ್ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ, ತಜ್ಞರು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.