ತೀವ್ರವಾದ ತುರಿಕೆ, ಸಣ್ಣ ಕೆಂಪು ದದ್ದು, ತುರಿಕೆ ಕಂಡುಬಂದರೆ ನಿಮ್ಮ ಹಾಸಿಗೆಯಲ್ಲಿ ತಿಗಣೆಯಿದೆ ಎಂದರ್ಥ. ಅವುಗಳನ್ನು ತೊಡೆದುಹಾಕುವುದು ಸ್ವಲ್ಪ ಕಷ್ಟವಾದರೂ ಕೆಲವು ವಿಧಾನ ಅನುಸರಿಸಿದರೆ ಅವು ಖಂಡಿತವಾಗಿ ಸಾಯುತ್ತವೆ.
women Nov 04 2025
Author: Ashwini HR Image Credits:Getty
Kannada
ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕಾರಕ
ತಿಗಣೆ ಓಡಿಸಲು ಜನರು ರಾಸಾಯನಿಕಗಳನ್ನು ಬಳಸುತ್ತಾರೆ. ಆದರೆ ಇವು ಹೆಚ್ಚು ವರ್ಕ್‌ಔಟ್ ಆಗಲ್ಲ. ಕೀಟಗಳು ಕೆಲವೇ ದಿನಗಳಲ್ಲಿ ಮತ್ತೆ ಮರಳುತ್ತವೆ. ಇದರಲ್ಲಿರುವ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕಾರಕ.
Image credits: Getty
Kannada
ಬೇವು ಮತ್ತು ಪುದೀನಾ ಎಲೆ
ಆದರೆ ಬೇವು ಮತ್ತು ಪುದೀನಾ ಎಲೆಗಳ ವಾಸನೆಯು ತಿಗಣೆ ನಿರೋಧಕವಾಗಿದ್ದು, ಇವುಗಳನ್ನು ಹಾಸಿಗೆಯ ಕೆಳಗೆ ಮತ್ತು ಹಾಸಿಗೆಯ ಅಂಚುಗಳಲ್ಲಿ ಇಡುವುದರಿಂದ ತಿಗಣೆಯನ್ನ ದೂರ ಓಡಿಸುತ್ತವೆ.
Image credits: Getty
Kannada
ಸೂರ್ಯನ ಬೆಳಕಿಗೆ
ಸಂಪೂರ್ಣವಾಗಿ ತೊಡೆದುಹಾಕಲು ಹಾಸಿಗೆ, ದಿಂಬುಗಳನ್ನ ಬಿಸಿ ನೀರಿನಲ್ಲಿ ತೊಳೆಯಿರಿ. ಆಗ ಮೊಟ್ಟೆಗಳು ಮತ್ತು ಲಾರ್ವಾಗಳು ಸಾಯುತ್ತವೆ. ಸೂರ್ಯನ ಬೆಳಕಿಗೆ ಒಡ್ಡುವುದರಿಂದ ಅದೆಂಥದ್ದೇ ಕೀಟವಾದ್ರೂ ಕೊಲ್ಲಬಹುದು.
Image credits: Getty
Kannada
ನಿಯಮಿತವಾಗಿ ಸ್ವಚ್ಛಗೊಳಿಸಿ
ತಿಗಣೆಯು ತಂಪು ಮತ್ತು ಕೊಳಕು ಪ್ರದೇಶಗಳಲ್ಲಿ ಬೆಳೆಯುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಮನೆಯನ್ನು ಸ್ವಚ್ಛವಾಗಿಡಿ. ಪೀಠೋಪಕರಣಗಳು, ಹಾಸಿಗೆಗಳು ಮತ್ತು ಸೋಫಾಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.