ಕನ್ನಡ ಕಿರುತೆರೆಯಲ್ಲಿ ನಾಗಿಣಿ ಸೀರಿಯಲ್ ನಲ್ಲಿ ಅಮೃತಾ ಪಾತ್ರದ ಮೂಲಕ ವೀಕ್ಷಕರ ನೆಚ್ಚಿನ ನಟಿಯಾಗಿ ರೂಪುಗೊಂಡವರು ದೀಪಿಕಾ ದಾಸ್.
Image credits: Instagram
ಬಿಗ್ ಬಾಸ್ ಸೀಸನ್ 7
ಬಿಗ್ ಬಾಸ್ ಸೀಸನ್ 7ರಲ್ಲಿ ತಮ್ಮ ಕಠಿಣ ಆಟಗಳಿಂದ ಇತರ ಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತಾ ಬಾಸ್ ಲೇಡಿಯಂತೆ ಮೆರೆದವರು ದೀಪಿಕಾ ದಾಸ್.
Image credits: Instagram
ದಿಢೀರ್ ಮದುವೆ ಮೂಲಕ ಶಾಕ್
ಮಾರ್ಚ್ ತಿಂಗಳ ಆರಂಭದಲ್ಲಿ ದೀಪಿಕಾ ದಾಸ್ ಗೋವಾದಲ್ಲಿ ಸದ್ದಿಲ್ಲದೇ ಮದುವೆಯಾಗಿತ್ತು, ತಮ್ಮ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಶಾಕ್ ನೀಡಿದ್ದರು.
Image credits: Instagram
ಬೆಂಗಳೂರಲ್ಲಿ ರಿಸೆಪ್ಶನ್
ಮದುವೆಯಾಗಿ ಹಲವು ದಿನಗಳ ಬಳಿಕ ಬೆಂಗಳೂರಲ್ಲಿ ರಿಸೆಪ್ಶನ್ ನೀಡಿದ್ದು, ಸೆಲೆಬ್ರಿಟಿಗಳು, ಸ್ನೇಹಿತರು ಆಗಮಿಸಿ ಮದುವೆಯ ಸಂಭ್ರಮವನ್ನು ಹೆಚ್ಚಿಸಿದ್ದರು.
Image credits: Instagram
ವಿದೇಶ ಟೂರ್
ಇತ್ತೀಚೆಗಂತೂ ನಟಿ ಪೂರ್ತಿಯಾಗಿ ವಿದೇಶ ವಾಸಿಯಾಗಿದ್ದಾರೆ. ಹೆಚ್ಚಾಗಿ ಲಂಡನ್, ಯುಕೆ, ದುಬೈ ಎಂದು ವಿದೇಶಗಳಲ್ಲಿನ ಫೋಟೊಗಳನ್ನೇ ಶೇರ್ ಮಾಡುತ್ತಿರುತ್ತಾರೆ.
Image credits: Instagram
ಮಂಗಳೂರಲ್ಲಿ ದೀಪಿಕಾ
ಎರಡು ದಿನಗಳಲ್ಲಿ ಹಿಂದೆ ದೀಪಿಕಾ ದಾಸ್ ಮಂಗಳೂರಿಗೆ ಆಗಮಿಸಿದ್ದರು. ಅಲ್ಲಿನ ಕದ್ರಿ ದೇಗುಲಕ್ಕೆ ಭೇಟಿ ನೀಡಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
Image credits: Instagram
ವಿದೇಶದಲ್ಲಿ ಕ್ರಿಸ್ಮಸ್ ಸೆಲೆಬ್ರೇಶನ್
ಇದೀಗ ವಿದೇಶದಲ್ಲಿ ಕ್ರಿಸ್ಮಸ್ ಸೆಲೆಬ್ರೇಟ್ ಮಾಡುವ ಹಲವಾರು ಫೋಟೊ ವಿಡಿಯೋಗಳನ್ನು ದೀಪಿಕಾ ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
Image credits: Instagram
ಮೈಕೊರೆಯುವ ಚಳಿಯಲ್ಲಿ ದೀಪಿಕಾ
ದೀಪಿಕಾ ದಾಸ್ ವಿದೇಶಿ ನೆಲದ ಮೈಕೊರೆಯುವ ಚಳಿಯಲ್ಲಿ ಸ್ನೋ ಫಾಲ್ ನಲ್ಲಿ ಆಟವಾಡುತ್ತಾ, ಗೇಮ್ಸ್ ಆಡುತ್ತಾ, ಅಲ್ಲಿನ ಬೀದಿಗಳಲ್ಲಿ ಜಗಮಗಿಸುವ ವಿದ್ಯುತ್ ಅಲಂಕಾರ ಮುಂದೆ ಪೋಸ್ ನೀಡಿದ್ದಾರೆ