Kannada

ಚೈತ್ರಾ ಪಶ್ಚಾತಾಪ

ಬಿಗ್‌ಬಾಸ್‌ ಕನ್ನಡ 11 ಇನ್ನೇನು 4 ವಾರದಲ್ಲಿ ಮುಕ್ತಾಯ ಕಾಣಲಿದೆ. ಇದೇ ಸಮಯದಲ್ಲಿ ಅಚ್ಚರಿಯ ರೀತಿಯಲ್ಲಿ ಬಿಬಿಕೆ ಮನೆಗೆ ಕಾಲಿಟ್ಟ ಚೈತ್ರಾ ಕುಂದಾಪುರ ಈಗ ಪಶ್ಚಾತಾಪ ಪಡುತ್ತಿದ್ದಾರೆ.
 

Kannada

ತಪ್ಪು ಮಾಡಿದ್ರಾ ಚೈತ್ರಾ

ಅತ್ಯಂತ ಖುಷಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದ ಚೈತ್ರಾ ಈಗ ನಾನು ತಪ್ಪು ಮಾಡಿದೆ ಎಂಬ ಪಶ್ಚಾತಾಪದ ಮಾತುಗಳನ್ನು ಆಡಿದ್ದಾರೆ. 

Image credits: our own
Kannada

ಮಂಕಾದ ಚೈತ್ರಾ

ಕಳೆದ ಕೆಲವು ದಿನಗಳಿಂದ ಚೈತ್ರಾ ಅವರು ಬಿಗ್‌ಬಾಸ್‌ ಮನೆಯಲ್ಲಿ ಮಂಕಾಗಿದ್ದಾರೆ. ಮಂಗಳವಾರದ ಎಪಿಸೋಡ್‌ ನಲ್ಲಿ ಕೂಡ ಚೈತ್ರಾ ಅತ್ತುಕೊಂಡು, ದೇವಿಯ ಮೊರೆ ಹೋಗಿದ್ದರು.
 

Image credits: our own
Kannada

ಕಸಕ್ಕೆ ಹೋಲಿಸಿದ ಮನೆಮಂದಿ

ಭಾನುವಾರ ಎಪಿಸೋಡ್‌ನ ಟಾಸ್ಕ್‌ನಲ್ಲಿ ಮನೆಯಲ್ಲಿ ಇರಲು ಯೋಗ್ಯ ಅಲ್ವೇ ಅಲ್ಲ ಎಂದು ಕಸದ ಬುಟ್ಟಿಗೆ ಹಾಕುವ ಚಟುವಟಿಕೆಯಲ್ಲಿ ಎಲ್ಲರೂ ಕೂಡ ಚೈತ್ರಾ ಅವರನ್ನೇ ಟಾರ್ಗೆಟ್‌ ಮಾಡಿದ್ದರು.

Image credits: our own
Kannada

ಈ ವೇದಿಕೆ ನನಗಲ್ಲ

ಎಂತಹದ್ದೇ ಸಂದರ್ಭ ಬಂದರೂ ಕುಗ್ಗದೆ ಮಾತಿಗೆ ಮಾತು ಕೊಟ್ಟ ಮಾತನಾಡುತ್ತಿದ್ದ ಚೈತ್ರಾ ಕಳೆದವಾರದ ಕಿಚ್ಚನ ಪಂಚಾಯಿತಿ ಬಳಿಕ ನನಗೆ ಈ ವೇದಿಕೆ ಅಲ್ಲ ಅಂತ ಎಂದು ಹೇಳಿಕೆ ನೀಡಿದ್ದಾರೆ.

Image credits: our own
Kannada

ಭವ್ಯಾ ಬಳಿ ನೋವು ತೋಡಿಕೊಂಡ ಚೈತ್ರಾ

ಬಿಗ್​ಬಾಸ್​ ನನಗಲ್ಲ. ತಪ್ಪು ನಿರ್ಧಾರ ತೆಗೆದುಕೊಂಡೆ. ಶಾಲೆಗೆ ಹೋಗುವವರು ಶಾಲೆಗೆ ಹೋಗಬೇಕು. ದೇವಸ್ಥಾನಕ್ಕೆ ಹೋಗೋರು ದೇಗುಲಕ್ಕೆ ಹೋಗಬೇಕು. ಪಬ್​​ಗೆ ಹೋಗೋರು ಪಬ್​ಗೆ ಹೋಗಬೇಕು. ನನ್ನಂಥವಳು ಇಲ್ಲಿಗೆ ಬರಬಾರದಾಗಿತ್ತು.

Image credits: our own
Kannada

ಮಾತು ಅನ್ನ ಕೊಟ್ಟಿದೆ

ಮನೆಯ ಪರಿಸ್ಥಿತಿಯನ್ನು ಎದುರಿಸಬೇಕೆಂದು ತುಂಬಾ ಸಲ ಅಂದುಕೊಳ್ಳುತ್ತೇನೆ. ಆದರೆ ಸಾಧ್ಯವಾಗುತ್ತಿಲ್ಲ.  ನನ್ನ ಮಾತು ಕಿರಿಕಿರಿ ಅಂತ ಯಾರೂ ಹೇಳಿರಲಿಲ್ಲ. ಮಾತು ನನಗೆ ಅನ್ನ ಕೊಟ್ಟಿದೆ, ಬದುಕು ಕೊಟ್ಟಿಯೆಂದು ಕಣ್ಣೀರು.
 

Image credits: our own
Kannada

ಕಿಚ್ಚನ ಕ್ಲಾಸ್

ಇದಕ್ಕೆ ಭವ್ಯಾ ತಪ್ಪು ನಿರ್ಧಾರ ತೆಗೆದುಕೊಂಡಿದ್ದೇನೆ ಎನ್ನುವುದು ನಿಮ್ಮ ತಪ್ಪು ನಿರ್ಧಾರ ಎಂದಿದ್ದಾರೆ. ಇನ್ನು ಕಿಚ್ಚನ ಶನಿವಾರದ ಪಂಚಾಯಿತಿಯಲ್ಲಿ ಕೂಡ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದರು.

Image credits: our own

ಸಿಂಪಲ್ ಸೀರೆ, ಹಣೆಯಲ್ಲಿ ಕುಂಕುಮ; ಚೈತ್ರಾ ಕುಂದಾಪುರ ನಿಜಕ್ಕೂ ಮೇಕಪ್ ಹಾಕಲ್ವಾ?

ಪುಟ್ಟ ಸಿಯಾ ಜೊತೆ ಅದ್ಧೂರಿಯಾಗಿ ಕ್ರಿಸ್ಮಸ್ ಹಬ್ಬ ಆಚರಿಸಿದ ನಟಿ ಕಾವ್ಯಾ ಗೌಡ

ಥೈಲ್ಯಾಂಡಲ್ಲಿ ಜಾಲಿ ಮೂಡಲ್ಲಿ ನಿವೇದಿತಾ ಗೌಡ… ಗ್ಲಾಮರಸ್ ಲುಕ್ ವೈರಲ್

ಫಸ್ಟ್‌ ಸಿನಿಮಾದಲ್ಲಿ ಯಶ್‌ ಜೊತೆ ನಟಿಸಿದ ಐಶ್ವರ್ಯ; ರಮ್ಯಾ -ರಾಧಿಕಾ ಕೂಡ ಇದ್ದಾರೆ