Small Screen
ಹೆಣ್ಣಿಗೆ ಏನ್ ಮುಚ್ಕೋಬೇಕು, ಏನು ತೋರಿಸಬೇಕು ಅಂತ ಗೊತ್ತಿರಬೇಕು!
ಬಿಗ್ ಬಾಸ್ ಮನೆಯಲ್ಲಿ ಹಣೆಯಲ್ಲಿ ದೊಡ್ಡ ಕುಂಕುಮ ಇಟ್ಟು, ಸೀರೆ ಧರಿಸಿ ಚೈತ್ರಾ ಅನೇಕರ ಮನಸ್ಸು ಕದ್ದಿದ್ದಾರೆ. ದೊಡ್ಮನೆಯಿಂದ ಹೊರಗಡೆ ಬಂದ್ಮೇಲೆ ಸೀರೆ ಧರಿಸಿ, ವಿವಿಧ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ತಿದ್ದಾರೆ
ಈಗ ಅವರು ಯಾಕೆ ವೆಸ್ಟರ್ನ್ ಡ್ರೆಸ್ ಹಾಕೋದಿಲ್ಲ ಎಂದು ಕೂಡ ಕಾರಣ ನೀಡಿದ್ದಾರೆ. ಅನಿಕೇತನ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
“ಯಾರಿಗೋ ಚೆನ್ನಾಗಿ ಕಾಣಬೇಕು ಎನ್ನುವ ಕಾರಣಕ್ಕೆ ನಾನು ಬಟ್ಟೆ ಹಾಕೋದಿಲ್ಲ. ಕಾಲೇಜು ಟೈಮ್‌ನಿಂದಲೂ ನಾನು ಸೀರೆ ಉಡುತ್ತಿದ್ದೆ. ಎಲ್ಲದಕ್ಕೂ ಸೀರೆ ಸೆಟ್ ಆಗುತ್ತದೆʼ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
“ನಾನು ಎಲ್ಲರ ಮುಂದೆ ಕೂತಾಗ ಅಯ್ಯೋ ಅದು ಕಾಣ್ತಿದೆ, ಇದು ಕಾಣ್ತಿದೆ, ಅವರು ಏನು ಅಂದುಕೊಳ್ತಾರೋ ಏನೋ ಅಂತ ಫೀಲ್ ಮಾಡೋಕೆ ಇಷ್ಟ ಇಲ್ಲ” ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
“ಭಾಷಣಗಳು ಮಾಡುವ ಸಮಯದಲ್ಲಿ ನಾನು ತಾಯಿ ಸೀರೆ ಉಟ್ಕೋತಿದ್ದೆ. ಆಮೇಲೆ ಸೀರೆ ಗಿಫ್ಟ್ ಆಗಿ ಸಿಗ್ತು” ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
“ಹೆಣ್ಣು ಮಕ್ಕಳು ಯಾವ ಬಟ್ಟೆ ಹಾಕಿದರೂ ಕಂಫರ್ಟ್ ಆಗಿರಬೇಕು. ಯಾವುದನ್ನು ಮುಚ್ಚಿಕೊಳ್ಳಬೇಕು ಎನ್ನೋದು ಗೊತ್ತಿರಬೇಕು” ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
“ಎಲ್ಲಿ ಮುಚ್ಕೋಬೇಕು, ಯಾವುದನ್ನು ತೋರಿಸಬೇಕು, ತೋರಿಸಬಾರದು ಎನ್ನೋದು ಗೊತ್ತಿರಬೇಕು. ವೆಸ್ಟರ್ನ್ ಡ್ರೆಸ್ ನನಗೆ ಕಂಫರ್ಟ್ ಇಲ್ಲ. ನಾನು ಮುಂದೆಯೂ ಹಾಕೋದಿಲ್ಲ” ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
“ಮಾಡರ್ನ್ ಡ್ರೆಸ್ ವಿರೋಧಿಸಲ್ಲ. ಜಗತ್ತಿಗೆ ಬಟ್ಟೆ ಹಾಕಿಕೊಳ್ಳೋದನ್ನು ಹೇಳಿಕೊಟ್ಟಿದ್ದೇ ಭಾರತ. ಬ್ರಿಟಿಷರು ಬರೋ ಮುನ್ನವೇ ಬೇಲೂರು ಹಳೇಬೀಡಿನಲ್ಲಿ ಶಾರ್ಟ್ಸ್ ಹಾಕಿಕೊಳ್ಳುತ್ತಿದ್ದರು” ಎಂದು ಚೈತ್ರಾ ಹೇಳಿದ್ದಾರೆ