Travel
ಯಾವುದೇ ಸಾಮಾನ್ಯ ವ್ಯಕ್ತಿಯು ಕೈಲಾಸ ಪರ್ವತವನ್ನು ಏರಲು ಸಾಧ್ಯವಿಲ್ಲ ಎಂದು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಿದೆ. ಇಲ್ಲಿವರೆಗೂ ಈ ಪರ್ವತ ಏರಿದವರೂ ಇಲ್ಲ. ಇದಕ್ಕೆ ಕಾರಣ ಏನು?
ಕೈಲಾಸ ಪರ್ವತದ ಎತ್ತರವು 6600 ಮೀಟರ್ ಗಳಿಗಿಂತ ಹೆಚ್ಚು, ಇದು ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಗಿಂತ ಸುಮಾರು 2200 ಮೀಟರ್ ಕಡಿಮೆ.
ಕೈಲಾಸ ಪರ್ವತ ಮತ್ತು ಕೈಲಾಸ ಪ್ರದೇಶದ ಬಗ್ಗೆ ವಿಶ್ವದಾದ್ಯಂತದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಇದನ್ನು ಸಂಶೋಧಿಸಿದ ಹರ್ಟ್ಲೀಸ್, ಕೈಲಾಸ ಪರ್ವತವನ್ನು ಏರುವುದು ಅಸಾಧ್ಯ ಎಂದಿದ್ದಾರೆ.
ಕೈಲಾಸ ಪರ್ವತವನ್ನು ಏರಲು ಸಾಧ್ಯವಾಗದಿರುವುದಕ್ಕೆ ಕಾರಣವೆಂದರೆ ಶಿವನು ಕೈಲಾಸದಲ್ಲಿ ವಾಸಿಸೋದರಿಂದ, ಆ ಜಾಗಕ್ಕೆ ಸುಲಭವಾಗಿ ತಲುಪೋದಕ್ಕೆ ಸಾಧ್ಯವಿಲ್ಲ.
ಈ ಪರ್ವತದ ಸುತ್ತಲೂ ಅಲೌಕಿಕ ಶಕ್ತಿಯ ಹರಿವು ಇದೆ, ಅದನ್ನು ಯಾವುದೇ ಸಾಮಾನ್ಯ ಮನುಷ್ಯನಿಂದ ತಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಯಾರೂ ಹತ್ತಿಲ್ಲ.
ಒಬ್ಬ ಪರ್ವತಾರೋಹಿಯು ತನ್ನ ಪುಸ್ತಕದಲ್ಲಿ ಕೈಲಾಸ ಪರ್ವತವನ್ನು ಏರಲು ಪ್ರಯತ್ನಿಸಿದ್ದೆ, ಆದರೆ ಈ ಪರ್ವತದಲ್ಲಿ ಉಳಿಯುವುದು ಅಸಾಧ್ಯ ಎಂದು ಬರೆದಿದ್ದಾನೆ
ಕೈಲಾಸ ಪರ್ವತವನ್ನು ಏರಿದ ಪರ್ವತಾರೋಹಿಯ ದೇಹದ ಕೂದಲು ಮತ್ತು ಉಗುರುಗಳು ವೇಗವಾಗಿ ಬೆಳೆಯುತ್ತಂತೆ. ಇದಲ್ಲದೆ, ಕೈಲಾಸ ಪರ್ವತವು ತುಂಬಾ ವಿಕಿರಣಶೀಲವಾದ ಪ್ರದೇಶ ಎನ್ನಲಾಗುತ್ತೆ.
11 ನೇ ಶತಮಾನದಲ್ಲಿ, ಟಿಬೆಟಿಯನ್ ಬೌದ್ಧ ಯೋಗಿ ಮಿಲಾರೆಪ ಕೈಲಾಸ ಪರ್ವತವನ್ನು ಏರುವಲ್ಲಿ ಯಶಸ್ವಿಯಾದರು ಎಂದು ಬೌದ್ಧ ಧರ್ಮದ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ.
ಕೈಲಾಸವನ್ನು ಏರಿದ ನಂತರ ಜೀವಂತವಾಗಿ ಮರಳಿದ ವಿಶ್ವದ ಏಕೈಕ ವ್ಯಕ್ತಿ ಎಂದು ಯೋಗಿ ಮಿಲಾರೆಪ ಅವರನ್ನು ಪರಿಗಣಿಸಲಾಯಿತು. ಅದಾದ ಬಳಿಕ ಯಾರೂ ಸಹ ಆ ಪರ್ವತವನ್ನು ಏರಿದ ಮಾಹಿತಿ ಇಲ್ಲ.