Travel
ಭಾರತದ ಒಂದು ಸಾವಿರ ರೂಪಾಯಿಗಳ ಮೌಲ್ಯವು ಸುಮಾರು 2 ಲಕ್ಷ ರೂಪಾಯಿಗಳಾಗುವ ದೇಶವೂ ಜಗತ್ತಿನಲ್ಲಿದೆ ಅನ್ನೋದು ನಿಮಗೆ ಗೊತ್ತಾ?
ಹೊಸದಾಗಿ ಮದುವೆಯಾದ ದಂಪತಿಗಳಿಗೆ ಈ ದೇಶವು ಅತ್ಯುತ್ತಮ ಹನಿಮೂನ್ ತಾಣವಾಗಿದೆ. ಭಾರತದಿಂದಲೂ ಹೆಚ್ಚಾಗಿ ಜನರು ಈ ದೇಶಕ್ಕೆ ಹೋಗ್ತಾರೆ.
ಹೌದು, ನಾವು ಇಂಡೋನೇಷ್ಯಾ ಬಗ್ಗೆ ಮಾತನಾಡುತ್ತಿದ್ದೇವೆ. ಹನಿಮೂನ್ ಕಪಲ್ಸ್ ಗಳಿಗೆ ಇಂಡೋನೇಷ್ಯಾದ ಬಾಲಿ ಅತ್ಯುತ್ತಮ ತಾಣವಾಗಿದೆ.
ಇಂದು ಭಾರತದಲ್ಲಿ ಒಂದು ರೂಪಾಯಿ ಬೆಲೆ ಇಂಡೋನೇಷ್ಯಾದಲ್ಲಿ 189 ರೂಪಾಯಿಗೆ ಸಮನಾಗಿದೆ. ಅಂದ್ರೆ 100 ಭಾರತೀಯ ರೂಪಾಯಿಗಳ ಬೆಲೆ ಇಂಡೋನೇಷ್ಯಾದಲ್ಲಿ ಸುಮಾರು 18,900 ರೂ. ಆಗಿದೆ.
ಅದಷ್ಟೇ ಅಲ್ಲ, ನಾವು 1000 ಭಾರತೀಯ ರೂಪಾಯಿಗಳ ಬಗ್ಗೆ ಹೇಳೋದಾದ್ರೆ, ಇಂಡೋನೇಷ್ಯಾದಲ್ಲಿ ಅದರ ಮೌಲ್ಯ 1,88,984 ಆಗಿರುತ್ತದೆ ಅಂದ್ರೆ ನೀವು ನಂಬಲೇಬೇಕು.
ಇಂಡೋನೇಷ್ಯಾದ ಕರೆನ್ಸಿಯನ್ನು ಇಂಡೋನೇಷಿಯನ್ ರುಪಿಯಾ ಎಂದು ಕರೆಯಲಾಗುತ್ತದೆ. ಈ ಹಣದ ಮೌಲ್ಯದ ಮುಂದೆ ಭಾರತೀಯ ಹಣದ ಮೌಲ್ಯ ತುಂಬಾನೆ ಹೆಚ್ಚಾಗಿರುತ್ತೆ.
ಇಂಡೋನೇಷ್ಯಾದ ಬಾಲಿಯಲ್ಲಿ ಅನೇಕ ಐಷಾರಾಮಿ ರೆಸಾರ್ಟ್ ಗಳು ಮತ್ತು ಹೋಟೆಲ್ ಗಳು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.
ಪ್ರತಿ ವರ್ಷ ಭಾರತದಿಂದ ಸಾವಿರಾರು ಜನರು ಹನಿಮೂನ್ ಮತ್ತು ರಜಾದಿನಗಳಿಗಾಗಿ ಬಾಲಿಗೆ ಹೋಗುತ್ತಾರೆ. ನೀವು ಕೂಡ ಈ ದೇಶಕ್ಕೆ ಟ್ರಿಪ್ ಹೋಗಿ ರಿಚ್ ನೆಸ್ ಫೀಲ್ ಮಾಡಬಹುದು.