Travel
ತಿರುಮಲದ ತಿರುಪತಿ ಬೆಟ್ಟದ ಮೇಲೆ ನೆಲೆಯಾಗಿರುವ ತಿಮ್ಮಪ್ಪ ಅಥವಾ ಬಾಲಾಜಿಯ ಮಹಿಮೆ ನಿಮಗೆಲ್ಲರಿಗೂ ತಿಳಿದಿದೆ.
ಇಂದು ನಾವು ತಿಮ್ಮಪ್ಪನ ಐದು ರಹಸ್ಯಗಳನ್ನು ನಿಮಗೆ ಹೇಳುತ್ತೇವೆ. ಈ ರಹಸ್ಯವು ವಿಜ್ಞಾನಕ್ಕೂ ನಿಲುಕದಾಗಿದೆ.
ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ವೆಂಕಟೇಶ್ವರ ಸ್ವಾಮಿಯ ವಿಗ್ರಹದ ಮೇಲಿನ ಕೂದಲು ನಿಜವಾದದ್ದು ಎಂದು ಹೇಳಲಾಗುತ್ತದೆ.
ಅಲ್ಲಿ ಪೂಜೆ ಮಾಡುವ ಪುರೋಹಿತರುಗಳು ಹೇಳುವುದೇನೆಂದರೆ, ನೀವು ವೆಂಕಟೇಶ ದೇವರ ವಿಗ್ರಹವನ್ನು ಬಳಿ ಕಿವಿ ಇಟ್ಟು ಗಮನವಿಟ್ಟು ಕೇಳಿದರೆ, ಸಮುದ್ರದ ಅಲೆಗಳ ಶಬ್ದ ಕೇಳಿಸುತ್ತದೆ.
ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ದೀಪವು ಯಾವಾಗಲೂ ಉರಿಯುತ್ತಿರುತ್ತದೆ. ಇದರಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಳಸಲಾಗುವುದಿಲ್ಲ, ಆದರೂ ಉರಿಯುತ್ತಂತೆ.
ಗುರುವಾರದಂದು ಶ್ರೀಗಂಧವನ್ನು ಅರೆದು, ಅದನ್ನು ತಿಮ್ಮಪ್ಪ ದೇವರಿಗೆ ಹಚ್ಚಲಾಗುತ್ತದೆ ಎಂದು ಹೇಳಲಾಗುತ್ತದೆ.
ಆ ಪೇಸ್ಟ್ ಅನ್ನು ತೆಗೆದಾಗ, ಹೃದಯದ ಮೇಲೆ ಹಚ್ಚಿದ ಶ್ರೀಗಂಧದಲ್ಲಿ ಲಕ್ಷ್ಮಿ ದೇವಿಯ ಚಿತ್ರ ಗೋಚರಿಸುತ್ತದೆ ಎನ್ನಲಾಗುತ್ತೆ.
ದೇವಾಲಯದ ವಾತಾವರಣವು ಯಾವಾಗಲೂ ತಂಪಾಗಿರುತ್ತದೆ ಮತ್ತು ಇದರ ಹೊರತಾಗಿಯೂ, ತಿಮ್ಮಪ್ಪನಿಗೆ ಸಿಕ್ಕಾಪಟ್ಟೆ ಸೆಕೆಯಾಗುತ್ತಂತೆ. ತಿಮ್ಮಪ್ಪನ ದೇಹದ ಮೇಲೆ ಬೆವರಿನ ಹನಿಗಳನ್ನು ಕಾಣಬಹುದು.
ಈ ಎಲ್ಲಾ ರಹಸ್ಯಗಳು ವಿಜ್ಞಾನಿಗಳಿಗೂ ನಿಲುಕದ ಅಚ್ಚರಿಯನ್ನು ಉಂಟು ಮಾಡಿವೆ. ಅಂದ್ರೆ ಅಲ್ಲಿ ಕುಳಿತಿರುವ ತಿಮ್ಮಪ್ಪ ನಮ್ಮೆಲ್ಲರನ್ನೂ ನೋಡುತ್ತಿರುತ್ತಾನೆ.