Travel
ಪ್ರತಿದಿನ ನಾವು ಸೋಶಿಯಲ್ ಮೀಡಿಯಾ, ನ್ಯೂಸ್, ಪೇಪರ್ ನೋಡಿದ್ರೆ ಡಿವೋರ್ಸ್ ಪ್ರಕರಣಗಳೇ ಹೆಚ್ಚಾಗಿ ಕಾಣಿಸುತ್ತೆ. ಹಾಗಂತ ಭಾರತದಲ್ಲಿ ಅತಿ ಹೆಚ್ಚು ವಿಚ್ಛೇದನ ಪಡಿತಾರೆ ಅಂದುಕೊಂಡ್ರಾ? ಖಂಡಿತ ಇಲ್ಲ.
ಭಾರತದಲ್ಲಿ ವಿಚ್ಛೇದನ ಪ್ರಮಾಣ ವಿಶ್ವದಲ್ಲಿಯೇ ತುಂಬಾನೆ ಕಡಿಮೆ. ಭಾರತದಲ್ಲಿ ವಿಚ್ಛೇದನ ಪ್ರಮಾಣ 1% ಇದ್ದರೆ, ಸಾಕ್ಷರತಾ ಪ್ರಮಾಣ 74 % ಇದೆ.
ಯುನೈಟೈಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ವಿಚ್ಛೇದನ ಪ್ರಮಾಣ 45% ಇದ್ದರೆ, ಸಾಕ್ಷರತಾ ಪ್ರಮಾಣ 99 % ದಷ್ಟಿದೆ.
ರಷ್ಯಾದಲ್ಲಿ ವಿಚ್ಛೇದನ ಪ್ರಮಾಣ 73% ಇದ್ದರೆ, ಸಾಕ್ಷರತಾ ಪ್ರಮಾಣ : 99% ದಷ್ಟಿದೆ. ಇಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತೆ.
ಹೆಚ್ಚು ಜನಸಂಖ್ಯೆಯುಳ್ಳ ಚೀನಾದಲ್ಲಿ ವಿಚ್ಛೇದನ ಪ್ರಮಾಣ 44% ದಷ್ಟಿದ್ದರೆ , ಸಾಕ್ಷರತಾ ಪ್ರಮಾಣ 97% ದಷ್ಟಿದೆ.
ಯುನೈಟೆಡ್ ಕಿಂಗ್ ಡಂನಲ್ಲಿ ವಿಚ್ಛೇದನ ಪ್ರಮಾಣ 41 % ಹಾಗೂ, ಸಾಕ್ಷರತಾ ಪ್ರಮಾಣ 99% ಇದೆ. ಇಲ್ಲಿ ವಿದ್ಯಾಭ್ಯಾಸವನ್ನು ಉಚಿತವಾಗಿ ಸಹ ನೀಡಲಾಗುತ್ತೆ.
ಆಸ್ಟ್ರೇಲಿಯಾದಲ್ಲಿ ವಿಚ್ಛೇದನ ಪ್ರಮಾಣ 43% , ಸಾಕ್ಷರತಾ ಪ್ರಮಾಣ 99% ದಷ್ಟಿದೆ.
ಪ್ಯಾರೀಸ್ ನಂತಹ ಪ್ರೇಮ ನಗರಿಯನ್ನು ಹೊಂದಿರುವ ಫ್ರಾನ್ಸ್ ನಲ್ಲಿ ವಿಚ್ಛೇದನ ಪ್ರಮಾಣ 51% ದಷ್ಟಿದ್ದರೆ , ಸಾಕ್ಷರತಾ ಪ್ರಮಾಣ 99% ದಷ್ಟಿದೆ.