ಸ್ಯಾಂಡಲ್’ವುಡ್ ಹಾಗೂ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡ ನಟ ಅನಿರುದ್ಧ್ ಜಟ್ಕರ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫ್ಯಾಮಿಲಿ ಜೊತೆಗಿನ ಮುದ್ದಾದ ಫೋಟೊ ಶೇರ್ ಮಾಡಿದ್ದಾರೆ.
Image credits: Instagram
ಫ್ಯಾಮಿಲಿ ಮ್ಯಾನ್ ಅನಿರುದ್ಧ್
ಡಾ. ವಿಷ್ಣುವರ್ಧನ್ ಅಳಿಯ ಆಗಿರುವ ಅನಿರುದ್ಧ್ ತಮ್ಮ ಪತ್ನಿ ಕೀರ್ತಿ ವಿಷ್ಣುವರ್ಧನ್ ಹಾಗೂ ಮಗಳು ಶ್ಲೋಕಾ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. ಫೋಟೊದಲ್ಲಿ ಮಗ ಮಿಸ್ಸಿಂಗ್.
Image credits: Instagram
ಅಭಿಮಾನಿಗಳ ಮೆಚ್ಚುಗೆ
ನಟನ ಫ್ಯಾಮಿಲಿ ಫೋಟೊ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ತುಂಬಾನೆ ಸೊಗಸಾದ ಫ್ಯಾಮಿಲಿ ಫೋಟೊ, ಯಾವಾಗ್ಲೂ ನಗು ನಗುತಾ ಹೀಗೆ ಒಂದಾಗಿ ಇರಿ ಎಂದಿದ್ದಾರೆ.
Image credits: Instagram
ಸ್ಯಾಂಡಲ್ ವುಡ್ ಜನಪ್ರಿಯ ನಟ
ಅನಿರುದ್ಧ ಅವರು ಹಲವಾರು ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ತಮ್ಮ ನಟನೆ ಹಾಗೂ ನಿರ್ದೇಶನದ ಮೂಲಕ ಗುರುತಿಸಿಕೊಂಡವರು, ಸದ್ಯ ಕಿರಿತೆರೆಯತ್ತ ಮುಖ ಮಾಡಿದ್ದಾರೆ.
Image credits: Instagram
ಸೂರ್ಯವಂಶ ಧಾರಾವಾಹಿ ನಾಯಕ
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜೊತೆಜೊತೆಯಲಿ ಧಾರಾವಾಹಿ ಮೂಲಕ ಗಮನ ಸೆಳೆದ ನಟ ಅನಿರುದ್ಧ್ , ಇದೀಗ ಉದಯ ಟಿವಿಯ ಸೂರ್ಯವಂಶ ಧಾರಾವಾಹಿಯಲ್ಲಿ ಕರ್ಣ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ.