Sandalwood
ಚಂದನವನದ ನಟ ಭಯಂಕರ ಡಾಲಿ ಧನಂಜಯ್ ಸದ್ಯ ಮದುವೆಯ ಸಡಗರದಲ್ಲಿದ್ದು, ಆಮಂತ್ರಣ ಪತ್ರಿಕೆಗಳನ್ನು ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಫೆಬ್ರುವರಿ ತಿಂಗಳಲ್ಲಿ ಡಾಲಿ ಮದುವೆ ನಡೆಯಲಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಧನಂಜಯ್ ಅಮಂತ್ರಣ ಪತ್ರಿಕೆ ನೀಡುತ್ತಿರುವ ಫೋಟೊ ವೈರಲ್ ಆಗುತ್ತಿದ್ದು, ಇದರ ಜೊತೆಗೆ ದೇವರು ಕೊಟ್ಟ ತಂಗಿ ಎಂದು ಕೂಡ ಬರೆದಿದೆ. ಹಾಗಿದ್ರೆ ಯಾರು ಆಕೆ?
ಇವರು ಬೇರಾರು ಅಲ್ಲ, ನಟಿ ತನುಜಾ ವೆಂಕಟೇಶ್. ಇವರು ಕೋಟಿ ಸಿನಿಮಾದಲ್ಲಿ ಡಾಲಿ ಧನಂಜಯ್ ತಂಗಿ ಪಾತ್ರದಲ್ಲಿ ನಟಿಸಿದ್ದರು. ನಿಜ ಜೀವನದಲ್ಲೂ ತಂಗಿಯೇ ಆಗಿದ್ದಾರೆ.
ಕೋಟಿ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿರುವ ತನುಜಾ, ಈ ಚಿತ್ರದಲ್ಲಿ ತಾರಾ ಮಗಳು ಮಹತಿಯಾಗಿ ಹಾಗೂ ಧನಂಜಯ್ ತಂಗಿಯಾಗಿ ಅದ್ಭುತವಾಗಿ ನಟಿಸಿದ್ದಾರೆ.
ತನುಜಾ ವೆಂಕಟೇಶ್ ರಂಗಭೂಮಿ ಕಲಾವಿದೆಯಾಗಿದ್ದು, ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೋಟಿ ಇವರ ಮೊದಲ ಸಿನಿಮಾ ಆಗಿದೆ.
ಕೋಟಿ ಸಿನಿಮಾದಲ್ಲಿ ಮಾತ್ರವಲ್ಲ, ಸಿನಿಮಾದಿಂದ ಹೊರಗೂ ಕೂಡ ಡಾಲಿ ತನುಜಾ ಅವರಿಗೆ ಅಣ್ಣನೇ ಆಗಿದ್ದು, ರಕ್ಷಾ ಬಂಧನದಂದು ರಾಖಿ ಕಟ್ಟಿ ಸಂಭ್ರಮಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ತನುಜಾ ಹೆಚ್ಚಾಗಿ ತಮ್ಮ ಫೋಟೊ, ನಾಟಕದ ಫೋಟೊಗಳು ಹಾಗೂ ತಮ್ಮ ಜೀವನದ ಒಂದಷ್ಟು ಅಮೂಲ್ಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಕೋಟಿ ಸಿನಿಮಾದಲ್ಲಿ ನಟಿಸೋದಕ್ಕೂ ಮುನ್ನ ತನುಜಾ ತೆಲುಗು ಕಿರುಚಿತ್ರವೊಂದರಲ್ಲಿ 2021ರಲ್ಲಿ ನಟಿಸಿದ್ದರು. ಸುಮಂತ್ ರೆಡ್ಡಿ ನಿರ್ದೇಶನದ ಚಿರುನುವ್ವು ಎನ್ನುವ ಕಿರುಚಿತ್ರ ಇದಾಗಿತ್ತು.
ತನುಜಾ ವೆಂಕಟೇಶ್ ಅದ್ಭುತ ಗಾಯಕಿ ಕೂಡ ಹೌದು, ತಮ್ಮ ಹಾಡುಗಳ ತುಣುಕುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೋಟಿ ಸಿನಿಮಾ ಬಳಿಕ ತನುಜಾ, ಬೇರೆ ಯಾವ ಸಿನಿಮಾಗಳನ್ನು ಒಪ್ಪಿಕೊಂಡಂತೆ ಇಲ್ಲ. ಆದರೆ ನಟಿ ಅದ್ಭುತ ನಟನೆ ನೋಡಿ ಜನ ಆದಷ್ಟು ಬೇಗ ಹೊಸ ಸಿನಿಮಾದಲ್ಲಿ ನಟಿಸುವಂತಾಗಲಿ ಎಂದು ಹಾರೈಸಿದ್ದಾರೆ.