relationship
ಪ್ರತಿಯೊಬ್ಬರಿಗೂ ಮದುವೆ ಬಗ್ಗೆ ತಮ್ಮದೇ ಯೋಚನೆ ಇರುತ್ತೆ. ಬದಲಾಗುತ್ತಿರುವ ಕಾಲದಲ್ಲಿ, ಜನ ಏಕಾಂಗಿಯಾಗಿರಲು ಇಷ್ಟ ಪಡುತ್ತಿದ್ದಾರೆ. ಯುವಕರು ಯಾವುದೇ ಜವಾಬ್ದಾರಿಯಿಲ್ಲದೆ ಸ್ವಾತಂತ್ರ್ಯವಾಗಿ ಬದುಕಲು ಇಷ್ಟಪಡುತ್ತಾರೆ.
2020 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಶೇಕಡಾ 42 ರಷ್ಟು ಯುವಕರಿಗೆ ಮದುವೆಯಾಗೋದಕ್ಕೆ ಇಷ್ಟ ಇಲ್ಲ. ಅವರು ಯಾರ ಮೇಲೂ ಡಿಪೆಂಡ್ ಆಗದೇ ತಮ್ಮ ಜೀವನ ಸಾಗಿಸಲು ಇಷ್ಟ ಪಡ್ತಾರೆ.
ವಿವಾಹಿತ ಪುರುಷರು ಮತ್ತು ಸಿಂಗಲ್ ಹುಡುಗರ ವಯಸ್ಸಿನ ಬಗ್ಗೆ ಇತ್ತೀಚಿಗೆ ಅಧ್ಯಯನ ನಡೆದಿದ್ದು, ಇದನ್ನ ನೋಡಿದ್ರೆ ನೀವು ಮುಂದೆ ಮದುವೆಯಾಗೋದು ಸರೀನಾ ಅಥವಾ ಸಿಂಗಲ್ ಆಗಿ ಉಳಿಯೋದು ಬೆಸ್ಟ್ ಅಂತ ತಿಳಿಯಬಹುದು.
ಜಾಮಾ ನೆಟ್ವರ್ಕ್ ಓಪನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಿವಾಹಿತ ಪುರುಷರು ಸಿಂಗಲ್ ಹುಡುಗರಿಗಿಂತ ಹೆಚ್ಚು ವರ್ಷ ಬದುಕುತ್ತಾರೆ. ವಿವಾಹಿತ ಪುರುಷರಲ್ಲಿ ಸಾವು ಶೇಕಡಾ 15 ರಷ್ಟು ಕಡಿಮೆ ಎಂದು ವರದಿ ಹೇಳುತ್ತದೆ.
ವಿವಾಹಿತ ಪುರುಷರಿಗೆ ಹೋಲಿಕೆ ಮಾಡಿದರೆ, ವಿಚ್ಛೇದಿತ ಮತ್ತು ಅವಿವಾಹಿತ ಹುಡುಗರಲ್ಲಿ ಜೀವಿತಾವಧಿ ಕಡಿಮೆ ಎಂದು ಅಧ್ಯಯನದಲ್ಲಿ ಬಹಿರಂಗವಾಗಿದೆ.
ಏಷ್ಯಾದಲ್ಲಿ, 50 ರಿಂದ 60 ವರ್ಷದೊಳಗಿನ 6,23,000 ಜನರ ಆರೋಗ್ಯದ ಬಗ್ಗೆ ಅಧ್ಯಯನ ಮಾಡಲಾಗಿದೆ. ಜಪಾನಿನ ಸಂಶೋಧಕರು ಈ ಸಂಶೋಧನೆಯನ್ನು 15 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿದರು.
ಅವಿವಾಹಿತರಿಗೆ ಹೋಲಿಕೆ ಮಾಡಿದರೆ ವಿವಾಹಿತ ದಂಪತಿಗಳು ಅಪಘಾತಗಳು, ಗಾಯಗಳು ಅಥವಾ ಹೃದ್ರೋಗದಿಂದ ಸಾಯುವ ಸಾಧ್ಯತೆ ಶೇಕಡಾ 20 ರಷ್ಟು ಕಡಿಮೆ ಇರುತ್ತದೆ.
ವಿವಾಹಿತರು ತಮ್ಮ ಜೀವನದಲ್ಲಿ ಕಡಿಮೆ ಅಪಾಯವನ್ನು ತೆಗೆದುಕೊಳ್ಳುತ್ತಾರೆ. ಈ ಕಾರಣದಿಂದಾಗಿ, ಆಲ್ಕೋಹಾಲ್, ಡ್ರಗ್ಸ್, ಅಪಘಾತಗಳಿಂದ ಸಾಯುವ ಅಪಾಯ ಕಡಿಮೆ. ಇದಲ್ಲದೆ, ಮದುವೆ ಕೂಡ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ವಿವಾಹಿತ ಪುರುಷರು ಆರೋಗ್ಯ ಚಿಕಿತ್ಸೆ ಪಡೆಯಲು ರಜೆಗಳನ್ನು ಸಹ ತೆಗೆದುಕೊಳ್ಳುತ್ತಾರೆ. ಪುರುಷರು ತಮ್ಮ ಹೆಂಡತಿ ಮತ್ತು ಮಕ್ಕಳ ಸಲುವಾಗಿ ತಮ್ಮನ್ನು ತಾವು ನೋಡಿಕೊಳ್ಳುತ್ತಾರೆ.
ಅವಿವಾಹಿತರು ಆರ್ಥಿಕ ಹೊರೆಯನ್ನು ಹೊಂದಿದ್ದಾರೆ ಮತ್ತು ಆರ್ಥಿಕವಾಗಿ ಸ್ಥಿರವಾಗಿರುವುದಿಲ್ಲ. ಹಾಗಾಗಿ ಅವರಿಗೆ ತಮ್ಮ ಬಗ್ಗೆ ಅಥವಾ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಾಧ್ಯವಾಗೋದಿಲ್ಲ.
ಹೆಂಡತಿ ಅಥವಾ ಮಕ್ಕಳನ್ನು ಇಲ್ಲದಿರುವ ಕಾರಣ, ಅವರು ಜೀವನದಲ್ಲಿ ಮುಂದೆ ಸಾಗಲು ಮತ್ತು ಕುಟುಂಬದ ಸಲುವಾಗಿ ಜೀವಿಸಲು ಪ್ರೇರಣೆಯನ್ನು ಪಡೆಯುವುದಿಲ್ಲ. ಅಜಾಗರೂಕತೆಯಿಂದಾಗಿ ಅವಿವಾಹಿತರ ಜೀವಿತಾವಧಿ ಕಡಿಮೆ ಇರುತ್ತೆ.