relationship
ನಿಮ್ಮನ್ನು ನೀವು ಪ್ರೀತಿಸುವುದು ಕೆಟ್ಟದ್ದಲ್ಲ. ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಮತ್ತು ನಿಮ್ಮ ಬಗ್ಗೆ ಯೋಚಿಸುವುದು ಇಡೀ ಮನೆಯ ಬಗ್ಗೆ ಯೋಚಿಸುವಷ್ಟೇ ಮುಖ್ಯ.
ಪ್ರತಿದಿನ ಸ್ವಲ್ಪ ವ್ಯಾಯಾಮ ಮಾಡುವುದರಿಂದ ಮೂಡ್ ಫ್ರೆಶ್ ಆಗಿರುತ್ತೆ. ಮನಸ್ಸು ಕೂಡ ಖುಷಿಯಿಂದ ಇರೋದಕ್ಕೆ ಸಾಧ್ಯ ಆಗುತ್ತೆ ಅಷ್ಟೇ ಅಲ್ಲ ಇವತ್ತು ನಾವು ಏನೋ ಮಾಡಿದ್ದೀವಿ ಅನ್ನೋ ಖುಷಿ ಇರುತ್ತೆ.
ನೀವು ನಿಮ್ಮ ಜೀವನದ ಬಹುಭಾಗವನ್ನು ಓಡುತ್ತಾ ಕಳೆದಿದ್ದೀರಿ ಮತ್ತು ಮುಂದಿನ ವರ್ಷ ನಿಮ್ಮ ಕೆಲಸದ ಜೊತೆಗೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೊದು ಸಹ ಮುಖ್ಯ.
ಉತ್ತಮ ಮತ್ತು ಪೂರ್ಣ ನಿದ್ರೆ ದೇಹವನ್ನು ವಿಶ್ರಾಂತಿಗೊಳಿಸುತ್ತದೆ ಮತ್ತು ಜೀವಕ್ಕೆ ಶಕ್ತಿ ಕೊಡುತ್ತೆ. ಹಾಗಾಗಿ ಚೆನ್ನಾಗಿ ನಿದ್ರೆ ಮಾಡೋದನ್ನ ಅಭ್ಯಾಸ ಮಾಡಿ. ಇದರಿಂದ ನೀವು ಆರೋಗ್ಯವಾಗಿರ್ತೀರಿ.
ಮುಂಬರುವ ವರ್ಷದಲ್ಲಿ, ನಿಮ್ಮ ವೃತ್ತಿಜೀವನದ ಮೇಲೆ ಸ್ವಲ್ಪ ಹೆಚ್ಚು ಗಮನ ಹರಿಸಲು ಮತ್ತು ಸೀರಿಯಸ್ ಆಗಿರಲು ಏನೇನು ಮಾಡಬೇಕು ಅದನ್ನು ಈ ವರ್ಷದ ಅಂತ್ಯದಿಂದಲೇ ಆರಂಭಿಸಿ.
ನಕಾರಾತ್ಮಕತೆಯಿಂದ ದೂರವಿರುವ ಜನರು ತಮ್ಮನ್ನು ಇತರರಿಗಿಂತ ಹೆಚ್ಚು ಸಂತೋಷ ಮತ್ತು ಆರಾಮವಾಗಿಡಲು ಸಾಧ್ಯವಾಗುತ್ತದೆ. ಹಾಗಾಗಿ ಯಾವಾಗಲೂ ಪಾಸಿಟಿವ್ ಆಗಿರಿ.
ಕುಟುಂಬದ ಜೊತೆ, ಫ್ರೆಂಡ್ಸ್ ಜೊತೆಗಿನ ಪ್ರವಾಸಗಳ ಹೊರತಾಗಿ, ಈ ವರ್ಷ ಸೋಲೋ ಪ್ರವಾಸಕ್ಕೆ ಹೋಗುವ ಪ್ಲ್ಯಾನ್ ಮಾಡಿ, ಹಾಗೂ ಅದನ್ನ ಸಾಧಿಸಿ ತೋರಿಸಿ.
ಪ್ರತಿಯೊಂದು ಸಣ್ಣ ಸಂತೋಷಕ್ಕೂ ತುಂಬಾನೆ ಸಂತೋಷವಾಗಿ ಮತ್ತು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಮೂಲಕ ಅನುಭವಿಸಿ. ಆವಾಗ ನೀವು ಇಲ್ಲಿಯವರೆಗೆ ಜೀವನದಲ್ಲಿ ಏನು ಸಾಧಿಸಿದ್ದೀರಿ ಅನ್ನೋದು ನಿಮಗೆ ತಿಳಿಸುತ್ತದೆ.
ಧ್ಯಾನ ಮಾಡೋದ್ರಿಂದ ಮನಸ್ಸು ಶಾಂತವಾಗಿರುತ್ತೆ. ಆದ್ದರಿಂದ ಮುಂದಿನ ವರ್ಷ ನಿಮ್ಮ ಮನಸ್ಸು ಶಾಂತವಾಗಿರಬೇಕು. ನೀವು ನೆಮ್ಮದಿಯಾಗಿರಬೇಕು ಅಂದ್ರೆ, ಧ್ಯಾನದ ಮೊರೆ ಹೋಗಿ.