ಬ್ರೇಕಪ್ ನಂತರ ಜೀವನದಲ್ಲಿ ಮುಂದುವರೆಯುವುದು ಕಷ್ಟವಾಗುತ್ತದೆ. ಆದರೆ ಇತರರ ಕೆಲ ಅನುಭವ ಹಾಗೂ ಸಲಹೆಗಳು ನೀವು ಜೀವನದಲ್ಲಿ ಮುಂದುವರಿಯಲು ಸಹಾಯ ಮಾಡುತ್ತವೆ
Kannada
'ಸೈಯಾ ಜೀ ಸೆ ಆಜ್ ಬ್ರೇಕಪ್ ಕರ್ ಲಿಯಾ'
ಬ್ರೇಕಪ್ ನಂತರ ಯಾರೂ ಈ ಹಾಡನ್ನು ಹಾಡುವುದಿಲ್ಲ. ನೋವಿನ ತೀವ್ರತೆ ಹೆಚ್ಚಾಗಿರುತ್ತದೆ. ಇಲ್ಲಿ ನಾವು ಕೆಲವರ ಬ್ರೇಕಪ್ ಹಾಗೂ ಅದರಿಂದ ಅವರು ಹೊರಬಂದ ರೀತಿಯನ್ನು ತಿಳಿಸುತ್ತಿದ್ದೇವೆ.
Kannada
ನಿಮ್ಮನ್ನು ಬ್ಯುಸಿಯಾಗಿರಿಸಿ
10 ವರ್ಷ ನಂತರ ಬ್ರೇಕಪ್ ಆಗಿತ್ತು, ಬ್ರೇಕಪ್ ನಂತರ ನನ್ನ ನಾನು ಬ್ಯುಸಿಯಾಗಿರಿಸಿಕೊಂಡೆ ದಿನ ಜಿಮ್‌ಗೆ ಹೋಗಲು ಶುರು ಮಾಡಿದೆ. ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದೆ. ನನ್ನನ್ನು ಮತ್ತೆ ಕಂಡುಕೊಳ್ಳಲು ಪ್ರಯತ್ನಿಸಿದೆ.
Kannada
ಸಂಪರ್ಕ ಕಡಿತಗೊಳಿಸಿ ನಿರೀಕ್ಷೆ ಬಿಡಿ
ಫೋನ್ ನಂಬರ್ ಬ್ಲಾಕ್ ಮಾಡಿದೆ, ಸೋಶಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡಿದೆ. ಅವರು ಮತ್ತೆ ಬರುತ್ತಾರೆ ಎಂಬ ನಿರೀಕ್ಷೆ ಬಿಡಲು ಸಹಾಯ ಆಯ್ತು, ಅವರು ಮಾಡಿದ ಕೆಟ್ಟ ಘಟನೆಗಳನ್ನು ಮಾತ್ರ ನೆನಪಿಸಿಕೊಳ್ಳಲು ಪ್ರಯತ್ನಿಸಿದೆ.
Kannada
ಫಿಟ್‌ನೆಸ್, ಸ್ನೇಹದಲ್ಲಿ ಶಕ್ತಿ ಕಂಡೆ
ವ್ಯಾಯಾಮ ಮಾಡುವುದು ಮತ್ತು ಉತ್ತಮ ಫಿಟ್‌ನೆಸ್ ಮಾನಸಿಕವಾಗಿ ಬಲಶಾಲಿಯಾಗಲು ಸಹಾಯ ಮಾಡುತ್ತದೆ. ಇದರೊಂದಿಗೆ, ಸಂಬಂಧದ ಸಮಯದಲ್ಲಿ ದೂರಾಗಿದ್ದ ಹಳೆಯ ಸ್ನೇಹಿತೆ/ಸ್ನೇಹಿತರ ಜೊತೆ ಸ್ನೇಹ ಬೆಳೆಸಿದೆ.
Kannada
ಹೊಸ ಅನುಭವಕ್ಕೆ ಸಿದ್ಧರಾಗುವುದು
'ಬ್ರೇಕಪ್ ನಂತರ ಹೊಸ ವ್ಯಕ್ತಿಯ ಜೊತೆ ಸಮಯ ಕಳೆದಿದ್ದೇನೆ. ಇದು ನಿಜವಾಗಿಯೂ ಪವಾಡದಂತೆ ಕೆಲಸ ಮಾಡುತ್ತದೆ. 'ಮುಂದುವರಿಯಲು ಒಂದು ಮಾರ್ಗವೆಂದರೆ ನಿಮ್ಮನ್ನು ಹೊಸ ಅನುಭವಗಳಿಗೆ ಸಿದ್ಧಪಡಿಸಿಕೊಳ್ಳುವುದು.
Kannada
ಗತವನ್ನು ಮರೆತುಬಿಡಿ
ಹಳೆಯ ಪ್ರೀತಿಯನ್ನು ನೆನಪಿಟ್ಟುಕೊಳ್ಳುವುದು ಯಾವಾಗಲೂ ಬೇಸರದಿಂದ ಕೂಡಿರುತ್ತದೆ. ಹಾಗಾಗಿ ಹಳೆಯ ಘಟನೆಗಳ ಮರೆತು ಹೊಸ ಚಟುವಟಿಕೆಗಳ ಮೇಲೆ ಗಮನಹರಿಸಿ ಬದುಕಿನ ಪ್ರಯಾಣ ಮುಂದುವರೆಸಿದೆ.
Kannada
ಭಾವನೆಗಳನ್ನು ಹೊರಹಾಕಿ
ಬ್ರೇಕಪ್ ನಂತರ ಒಂದು ರಾತ್ರಿ ನಾನು ಸ್ಕಾಚ್ ಕುಡಿದು ಬಿಂದಾಸ್ ಹಾಡುಗಳನ್ನು ಕೇಳಿದೆ. ಕೋಪದಲ್ಲಿ ಕಪಾಟಿನ ಬಾಗಿಲು ಬಡಿದೆ. ಮರುದಿನ ಬೆಳಿಗ್ಗೆ ಕೈ ನೋಯುತ್ತಿತ್ತು, ಆದರೆ ಹೃದಯ ಹಗುರವಾಗಿತ್ತು.
Kannada
ಗತದ ಅನುಭವ ಮರೆಯದಿರಿ
ಸ್ನೇಹಿತರೊಂದಿಗೆ ಕುಳಿತು, ಹಳೆಯ ಒಳ್ಳೆಯ ಕ್ಷಣಗಳನ್ನು ನೆನಪಿಸಿಕೊಳ್ಳಿ. ಇದು ಕೇವಲ ನಷ್ಟವಲ್ಲ, ಜೀವನದ ಅನುಭವ
Kannada
ನಿಮ್ಮ ನೋವಿಗೆ ಸಮಯ ನೀಡಿ
ನಿಮ್ಮ ನೋವನ್ನು ಅನುಭವಿಸಿ, ಆದರೆ ಅದೇ ನಿಮ್ಮನ್ನು ಆವರಿಸಲು ಬಿಡಬೇಡಿ. ಅಳುವುದು, ಕೋಪಗೊಳ್ಳುವುದು, ದುಃಖಿತರಾಗುವುದು ಎಲ್ಲವೂ ಸರಿ, ಆದರೆ ಅದನ್ನು ಹೆಚ್ಚು ಕಾಲ ಎಳೆಯಬೇಡಿ.