Kannada

ಮನೆಯಲ್ಲಿ 2.5 ಕೋಟಿ ರೂ. 'ಪವಾಡ' ಶಿವಲಿಂಗವಿರುವ ಆ ನಾಯಕ ಯಾರು?

ತಮ್ಮ ಮನೆಯಲ್ಲಿಯೇ ಎರಡೂವರೆ ಕೋಟಿ ರೂಪಾಯಿ ಮೌಲ್ಯದ 'ಪವಾಡ' ಶಿವಲಿಂಗವನ್ನು ಹೊಂದಿರುವ ಆ ಘಟಾನುಘಟಿ ನಾಯಕ ಯಾರು ಮತ್ತು ಅವರ ಮನೆಯ ವಿಶೇಷತೆಗಳೇನು? ಇಲ್ಲಿದೆ ನೋಡಿ ಸ್ವಾರಸ್ಯಕರ ಮಾಹಿತಿ.
Kannada

ಸಿಧು ಬಂಗಲೆ 5 ಸ್ಟಾರ್ ಹೋಟೆಲ್‌ನಂತಿದೆ

ಸಿಧು ಕುಟುಂಬ ತಮ್ಮ ಐಷಾರಾಮಿ ಜೀವನಶೈಲಿಗೆ ದೇಶಾದ್ಯಂತ ಹೆಸರುವಾಸಿ. ಅಮೃತಸರದಲ್ಲಿರುವ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಭವ್ಯ ಬಂಗಲೆ ಯಾವುದೇ ಫೈವ್ ಸ್ಟಾರ್ ಹೋಟೆಲ್‌ಗಿಂತ ಕಡಿಮೆಯಿಲ್ಲ.

Image credits: instagram
Kannada

ಸಿಧು ಅವರ ಬಂಗಲೆಯ ಮೌಲ್ಯ 25 ಕೋಟಿ ರೂ.

ಸಿಧು ಅವರ ಈ ಬಂಗಲೆ ಸುಮಾರು 49,500 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ. ಇದರ ಮೌಲ್ಯ ಸುಮಾರು 25 ಕೋಟಿ ಎಂದು ಹೇಳಲಾಗುತ್ತೆ. ಇದರಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್ ಮತ್ತು ಸ್ಪಾನಂತಹ ಐಷಾರಾಮಿ ಸೌಲಭ್ಯಗಳಿವೆ.

Image credits: instagram
Kannada

ಸಿಧು ಮನೆಯಲ್ಲಿದೆ ಎರಡೂವರೆ ಕೋಟಿಯ ಶಿವಲಿಂಗ

ಸಿದ್ಧು ಅವರ ಈ ಐಷಾರಾಮಿ ಬಂಗಲೆಯ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿರುವ ದೇವಸ್ಥಾನ. ಇಲ್ಲಿ ಬೃಹತ್ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇದನ್ನು ಸಿಂಗಾಪುರದಿಂದ ತರಿಸಲಾಗಿದ್ದು, ಇದರ ಬೆಲೆ ಎರಡೂವರೆ ಕೋಟಿಯಂತೆ!

Image credits: instagram
Kannada

ಮನೆಯಲ್ಲಿ ಹಲವು ದೇವರುಗಳ ಮೂರ್ತಿಗಳಿವೆ

ಈ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಸಿಧು ಬೇರೆ ಬೇರೆ ಕಡೆಗಳಿಂದ ಪಂಡಿತರನ್ನು ಕರೆಸಿದ್ದರು. ಮನೆಯಲ್ಲಿರುವ ಈ ದೇವಸ್ಥಾನದಲ್ಲಿ ಗಾಯತ್ರಿ ಮಾತೆ, ಗಣೇಶ ಹಾಗೂ ಇತರ ದೇವರುಗಳ ಬೆಲೆಬಾಳುವ ಮೂರ್ತಿಗಳೂ ಇವೆ.

Image credits: instagram
Kannada

ಮನೆಯಲ್ಲಿವೆ 600 ವರ್ಷ ಹಳೆಯ ಮರಗಳು

ಸಿಧು ತಮ್ಮ ಮನೆಯಲ್ಲಿ 100 ರಿಂದ 600 ವರ್ಷ ಹಳೆಯ ಮರಗಳನ್ನು ನೆಟ್ಟಿದ್ದಾರೆ. 8 ರಿಂದ 12 ಅಡಿ ಎತ್ತರದ ಆಲಿವ್ ಪ್ರಭೇದದ ಮರಗಳನ್ನೂ ನೆಡಲಾಗಿದೆ. ಈ ಮರಗಳನ್ನು ನೋಡಲೆಂದೇ ದೂರದೂರುಗಳಿಂದ ಜನರು ಬರುತ್ತಾರೆ.

Image credits: instagram
Kannada

ಈಗ ಸಿಧು ಮುಂದಿನ ನಡೆ ಏನು?

ನವಜೋತ್ ಕೌರ್ ಹೊಸ ಪಕ್ಷವನ್ನು ಘೋಷಿಸಿದ್ದಾರೆ. ಆದರೆ, ಪಂಜಾಬ್‌ನಲ್ಲಿ ಅವರ ಪಕ್ಷ ಎಷ್ಟು ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕು. ಈಗ ಸಿಧು ಮುಂದಿನ ನಡೆ ಏನು ಎಂಬ ಪ್ರಶ್ನೆಯೂ ಎದ್ದಿದೆ.

Image credits: INSTA/rabiasidhu

ಕರ್ನಾಟಕದ ಶ್ರೀಮಂತ ರಾಜಕಾರಣಿಗಳು ಇವರೆ… ನಂ 1 ಸ್ಥಾನದಲ್ಲಿರೋದು ಯಾರು?

ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಬಿಜೆಪಿಯ ಸುಮಲತಾ ಅಂಬರೀಶ್?

ದೆಹಲಿಯ ಅದೃಷ್ಟರೇಖೆ, ರೇಖಾ ಗುಪ್ತಾ ಅವರ ವಿದ್ಯಾಭ್ಯಾಸ, ನೆಟ್‌ವರ್ತ್‌ ಎಷ್ಟು?

ಕೇಜ್ರಿ ಸೋಲಿಗೆ 'ಸಪ್ತ' ಕಾರಣ ನೀಡಿದ ಪಿಕೆ