lifestyle

ಒಡೆದ ಚರ್ಮಕ್ಕೆ 5 ಪರಿಹಾರಗಳು: ಮೃದುವಾದ, ಹೊಳೆಯುವ ಕಾಂತಿಯುತ ತ್ವಚೆ

ಒಡೆದ ಚರ್ಮದಿಂದ ಪರಿಹಾರ ಪಡೆಯುವುದು ಹೇಗೆ?

ಚಳಿಗಾಲದಲ್ಲಿ ಒಣ ಮತ್ತು ಒಡೆದ ಚರ್ಮದಿಂದ ಬಳಲುತ್ತಿದ್ದೀರಾ? ನಿಮ್ಮ ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡಲು 5 ಸುಲಭವಾದ ಮನೆಮದ್ದುಗಳನ್ನು ತಿಳಿಯಿರಿ.

ಆಲಿವ್ ಎಣ್ಣೆ ಹಚ್ಚಿ

ಚಳಿಯಲ್ಲಿ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಆಲಿವ್ ಎಣ್ಣೆ ಉತ್ತಮವಾಗಿದೆ. ನೀವು ಮಾಯಿಶ್ಚರೈಸರ್ ಹಚ್ಚುವ ಮೊದಲು ಇದನ್ನು ಚರ್ಮದ ಮೇಲೆ ಹಚ್ಚಬಹುದು.  

ಬಿಸಿ ನೀರಿನ ಸ್ನಾನದಿಂದ ದೂರವಿರಿ

ಚಳಿಗಾಲದಲ್ಲಿ ಜನರು ಹೆಚ್ಚಾಗಿ ಬಿಸಿ ನೀರಿನ ಸ್ನಾನ ಮಾಡಲು ಇಷ್ಟಪಡುತ್ತಾರೆ. ಇದು ಚರ್ಮವನ್ನು ಇನ್ನಷ್ಟು ಒಣಗಿಸಬಹುದು. ಬಿಸಿ ನೀರಿನಿಂದ ಚರ್ಮದ ತೇವಾಂಶ ಹೋಗುತ್ತದೆ, ಇದರಿಂದ ಚರ್ಮದಲ್ಲಿ ಬಿರುಕುಗಳು ಉಂಟಾಗುತ್ತವೆ.  

ನೀರು ಕುಡಿಯುವುದನ್ನು ಮರೆಯಬೇಡಿ

ಚಳಿಗಾಲದಲ್ಲಿ ನಾವು ನೀರು ಕಡಿಮೆ ಕುಡಿಯುತ್ತೇವೆ, ಆದರೆ ಇದು ಚರ್ಮಕ್ಕೆ ಒಳ್ಳೆಯದಲ್ಲ. ದಿನವಿಡೀ ಸಾಕಷ್ಟು ನೀರು ಕುಡಿಯುವುದರಿಂದ ಚರ್ಮವು ಒಳಗಿನಿಂದ ಹೈಡ್ರೇಟ್ ಆಗಿರುತ್ತದೆ ಮತ್ತು ಹೊರಗಿನ ಒಣಗುವಿಕೆ ದೂರವಾಗುತ್ತದೆ.

ಅರಿಶಿನ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ ಮಾಡಿ

ಅರಿಶಿನ ಮತ್ತು ಜೇನುತುಪ್ಪ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಒಂದು ಚಮಚ ಜೇನುತುಪ್ಪದಲ್ಲಿ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ 15-20 ನಿಮಿಷಗಳ ಕಾಲ ಹಚ್ಚಿ ನಂತರ ತೊಳೆಯಿರಿ.  

ಮಾಯಿಶ್ಚರೈಸಿಂಗ್ ಫೇಸ್ ಮಾಸ್ಕ್ ಹಚ್ಚಿ

ಒಣ & ಒಡೆದ ಚರ್ಮಕ್ಕೆ ಚಳಿಗಾಲದಲ್ಲಿ ಮಾಯಿಶ್ಚರೈಸಿಂಗ್ ಫೇಸ್ ಮಾಸ್ಕ್ ಬಳಕೆ ಪ್ರಯೋಜನಕಾರಿ. ಮನೆಯಲ್ಲೇ ನಿಮ್ಮ ಫೇಸ್ ಮಾಸ್ಕ್‌ಗಳನ್ನು ತಯಾರಿಸಬಹುದು/ಮಾರುಕಟ್ಟೆಯಿಂದ ಮಾಯಿಶ್ಚರೈಸಿಂಗ್ ಮಾಸ್ಕ್‌ಗಳನ್ನು ಖರೀದಿಸಿ.

ಈ ಕೆಟ್ಟ ಅಭ್ಯಾಸಗಳಿಂದಲೂ ಮೂರ್ಚೆ ರೋಗ ಬರಬಹುದು! ಎಪಿಲೆಪ್ಸಿಗೆ ಕಾರಣಗಳೇನು?

ಟಿಶ್ಯೂ ಸೀರೆಗಳ ಹಿಂದೆ ಬಿದ್ದ ಸೆಲೆಬ್ರಿಟಿಗಳು! ಯಾಕೆ ಇಷ್ಟಪಡ್ತಾರೆ ಗೊತ್ತಾ?

58ರ ವಯಸ್ಸಲ್ಲೂ ಶಾರುಖ್ ಯಂಗ್ ಆಗಿ ಕಾಣುವಂತೆ ಮಾಡುವ ಫಿಟ್‌ನೆಸ್ ರಹಸ್ಯ ಬಹಿರಂಗ!

ದಾಂಪತ್ಯದಲ್ಲಿ ನಾಚಿಕೆಪಡಬಾರದ 5 ವಿಷಯಗಳು