ಕೇದಿಗೆ ಗಿಡದ ಸುಗಂಧಕ್ಕೆ ಮನಸೋಲದವರಿಲ್ಲ. ಆದರೆ ಈ ಗಿಡವನ್ನು ಬೆಳೆಸುವಾಗ ಜನರು ಸ್ವಲ್ಪ ಹೆದರುತ್ತಾರೆ. ಅದಕ್ಕೆ ಮುಖ್ಯ ಕಾರಣ ಇದರ ವಾಸನೆಗೆ ಆಕರ್ಷಿತವಾಗಿ ಬರುವ ಹಾವುಗಳು.
life Apr 01 2026
Author: Ashwini HR Image Credits:Instagram
Kannada
ಆರೋಗ್ಯಕ್ಕೆ ಒಳಿತು
ಹಾವುಗಳ ಆವಾಸಸ್ಥಾನವೆನ್ನಲಾಗುವ ಈ ಗಿಡದಲ್ಲಿ ಅಚ್ಚರಿಯ ಆರೋಗ್ಯ ಗುಣಗಳಿವೆ.
Image credits: Instagram
Kannada
ತಲೆನೋವಿಗೆ ಮುಕ್ತಿ
ಕೇದಿಗೆ ಹೂವಿನಿಂದ ತಯಾರಿಸಿದ ಎಣ್ಣೆಯನ್ನು ಹಣೆಗೆ ಹಚ್ಚುವುದರಿಂದ ತೀವ್ರವಾದ ತಲೆನೋವು ಮತ್ತು ಮೈಗ್ರೇನ್ ಕಡಿಮೆಯಾಗುತ್ತದೆ. ಇದು ಮಾನಸಿಕ ಒತ್ತಡವನ್ನು ದೂರ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ.
Image credits: Freepik
Kannada
ಸೌಂದರ್ಯ ವರ್ಧಕ
ಈ ಹೂವಿನ ಸಾರವನ್ನು ಸುಗಂಧ ದ್ರವ್ಯಗಳಲ್ಲಿ ಬಳಸುತ್ತಾರೆ. ಇದರ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗಿ, ಕೂದಲು ಘಮಘಮಿಸುತ್ತದೆ.
Image credits: Getty
Kannada
ಅಡುಗೆಯಲ್ಲಿ ಬಳಕೆ
ಬಿರಿಯಾನಿ, ಪುಲಾವ್ ಮತ್ತು ಸ್ವೀಟ್ಸ್‌ಗಳಲ್ಲಿ ಉತ್ತಮ ಸುಗಂಧಕ್ಕಾಗಿ ಬಳಸಲಾಗುತ್ತದೆ. ಇದು ಅಡುಗೆಗೆ ವಿಶೇಷ ರುಚಿ ನೀಡುತ್ತದೆ.
Image credits: Getty
Kannada
ಆರೋಗ್ಯ ವೃದ್ಧಿ
ಇದರ ಬೇರಿನ ಕಷಾಯ ಕುಡಿಯುವುದರಿಂದ ಜ್ವರ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ, ಕೀಲು ನೋವಿನಿಂದ ಬಳಲುವವರಿಗೆ ಈ ಎಣ್ಣೆಯ ಮಸಾಜ್ ತುಂಬಾ ಒಳ್ಳೆಯದು.
Image credits: stockPhoto
Kannada
ಬೆಳೆಸುವ ಮುನ್ನ ಎಚ್ಚರಿಕೆಯಿರಲಿ
ದಟ್ಟವಾಗಿ ಬೆಳೆಯುವುದರಿಂದ ಹಾವುಗಳು ಆಶ್ರಯ ಪಡೆಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಗಿಡದ ಬಳಿ ಹೋಗುವಾಗ ಎಚ್ಚರವಿರಲಿ. ಎಲೆಗಳಿಗೆ ಚೂಪಾದ ಮುಳ್ಳುಗಳಿರುತ್ತವೆ, ಕತ್ತರಿಸುವಾಗ ಜಾಗ್ರತೆ ವಹಿಸಿ.
Image credits: Instagram
Kannada
ಮನೆಯಿಂದ ದೂರವಿರಲಿ
ಮನೆಯ ಹತ್ತಿರ ಬೆಳೆಸುವ ಬದಲು ತೋಟದ ಮೂಲೆಯಲ್ಲಿ ಅಥವಾ ಮನೆಯಿಂದ 20-30 ಅಡಿ ದೂರದಲ್ಲಿ ಬೆಳೆಸುವುದು ಉತ್ತಮ.