ನಿಮ್ಮ ಅಡುಗೆ ಮನೆಯಲ್ಲಿರುವ ಈರುಳ್ಳಿ ಬೇಗನೆ ಕೊಳೆಯಬಾರದು ಎಂದರೆ ಈ ಸರಳ ಬದಲಾವಣೆ ಮಾಡಿಕೊಳ್ಳಿ.
life Apr 01 2026
Author: Ashwini HR Image Credits:Getty
Kannada
ಗಾಳಿಯಾಡುವ ಬುಟ್ಟಿ ಬಳಸಿ
ಈರುಳ್ಳಿಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಇಡಬೇಡಿ. ಬದಲಿಗೆ ಗಾಳಿಯಾಡುವ ಬುಟ್ಟಿ ಅಥವಾ ನೆಟ್ ಬ್ಯಾಗ್‌ನಲ್ಲಿ ಇಡಿ. ಗಾಳಿ ಸಿಗದಿದ್ದರೆ ಈರುಳ್ಳಿ ಬೇಗ ಕೊಳೆಯುತ್ತದೆ.
Image credits: Asianet News
Kannada
ತೇವಾಂಶ ಮತ್ತು ಬೆಳಕಿನಿಂದ ದೂರವಿಡಿ
ಈರುಳ್ಳಿಯನ್ನು ನೀರಿರುವ ಜಾಗದಲ್ಲಿ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ಇಡಬೇಡಿ. ತಂಪಾದ, ಒಣಗಿದ ಮತ್ತು ಕತ್ತಲಿರುವ ಜಾಗದಲ್ಲಿ ಇಟ್ಟರೆ ಈರುಳ್ಳಿ ಹೆಚ್ಚು ದಿನ ಬಾಳಿಕೆ ಬರುತ್ತದೆ.
Image credits: Getty
Kannada
ಇವುಗಳ ಜೊತೆ ಸೇರಿಸಬೇಡಿ
ಈರುಳ್ಳಿಯನ್ನು ಬೇರೆ ಹಣ್ಣು ಅಥವಾ ತರಕಾರಿಗಳ ಜೊತೆ ಸೇರಿಸಿ ಇಡಬೇಡಿ. ಇದರಿಂದ ಇತರ ತರಕಾರಿಗಳೂ ಬೇಗನೆ ಹಾಳಾಗುವ ಸಾಧ್ಯತೆ ಇರುತ್ತದೆ.
Image credits: Freepik
Kannada
ಫ್ರಿಜ್‌ನಲ್ಲಿ ಇಡಬೇಡಿ
ಇಡೀ ಈರುಳ್ಳಿಯನ್ನು ಫ್ರಿಜ್‌ನಲ್ಲಿ ಇಟ್ಟರೆ ಅದರಲ್ಲಿರುವ ತೇವಾಂಶದಿಂದಾಗಿ ಈರುಳ್ಳಿ ಮೆತ್ತಗಾಗಿ ಬೂಸ್ಟ್ ಹಿಡಿಯುತ್ತದೆ. ಒಂದು ವೇಳೆ ಈರುಳ್ಳಿ ಕತ್ತರಿಸಿದ್ದರೆ ಮಾತ್ರ ಡಬ್ಬದಲ್ಲಿ ಹಾಕಿ ಫ್ರಿಜ್‌ನಲ್ಲಿಡಬಹುದು.
Image credits: Freepik
Kannada
ಬಳಸುವ ಮುನ್ನ ಸಿಪ್ಪೆ ಸುಲಿಯಬೇಡಿ
ಈರುಳ್ಳಿಯ ಮೇಲಿರುವ ಒಣಗಿದ ಸಿಪ್ಪೆಯೇ ಅದಕ್ಕೆ ನೈಸರ್ಗಿಕ ರಕ್ಷಣೆ. ಆದ್ದರಿಂದ ಮೊದಲೇ ಸಿಪ್ಪೆ ಸುಲಿದು ಅಥವಾ ತೊಳೆದು ಇಡಬೇಡಿ. ಬಳಸುವಾಗ ಮಾತ್ರ ಸಿಪ್ಪೆ ತೆಗೆಯಿರಿ.