ತರಗತಿಗೆ ಟಾಪರ್ ಆಗುವ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ ಆರಂಭವಾದ ದಿನದಿಂದಲೇ ಓದುತ್ತಾರೆ. ಪರೀಕ್ಷೆ ಬರುವ ದಿನಗಳವರೆಗೆ ಅವರು ಕಾಯುತ್ತಾ ಕೂರುವುದಿಲ್ಲ. ಸಮಯಕ್ಕೆ ಸರಿಯಾಗಿ ಅಧ್ಯಯನ ಪ್ರಾರಂಭಿಸುತ್ತಾರೆ.
Kannada
ತರಗತಿ ತಪ್ಪಿಸುವುದಿಲ್ಲ
ಟಾಪರ್‌ಗಳು ಎಂದಿಗೂ ತರಗತಿಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಶಿಕ್ಷಕರಿಂದ ಸಿಗುವ ಸಣ್ಣ ಸಣ್ಣ ವಿವರಗಳನ್ನು ಸಹ ಗಮನಿಸುತ್ತಾರೆ. ಬೇಸರ ಆಗುವಂತಹ ಉಪನ್ಯಾಸಗಳಿಗೂ ಹಾಜರಾಗುತ್ತಾರೆ.
Kannada
ಕಂಠಪಾಠ ಮಾಡುವುದಿಲ್ಲ
ಟಾಪರ್‌ಗಳು ಯಾವುದೇ ವಿಷಯಗಳನ್ನು ಕಂಠಪಾಠ ಮಾಡುವ ಬದಲು ಅರ್ಥಮಾಡಿಕೊಳ್ಳುತ್ತಾರೆ. ವಸ್ತುಗಳು ಹೇಗೆ ಮತ್ತು ಏಕೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿಶ್ಲೇಷಿಸುತ್ತಾರೆ. ಇದು ಪರೀಕ್ಷೆಗೆ ಅನುಕೂಲ ಆಗುತ್ತದೆ.
Kannada
ಸಕ್ರಿಯ ಅಧ್ಯಯನ
ಟಾಪರ್‌ಗಳು ಕೇವಲ ಟಿಪ್ಪಣಿಗಳನ್ನು ಓದುವುದಕ್ಕೆ ಸೀಮಿತವಾಗಿರುವುದಿಲ್ಲ. ಸಾರಾಂಶವನ್ನು ರಚನೆ, ಫ್ಲಾಶ್‌ಕಾರ್ಡ್ ತಯಾರಿಕೆ, ಬೇರೆಯವರಿಗೆ ವಿವರಣೆ ನೀಡುತ್ತಾರೆ. ಇದು ವಿಷಯ ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
Kannada
ಓದಬೇಕಾದ ವಿಷಯಕ್ಕೆ ಆದ್ಯತೆ
ಸೀಮಿತ ಸಮಯದಲ್ಲಿ ಬಹಳಷ್ಟು ಓದಬೇಕಾದಾಗ, ಟಾಪರ್‌ಗಳು ಯಾವುದರ ಮೇಲೆ ಮೊದಲು ಗಮನಹರಿಸಬೇಕೆಂದು ತಿಳಿದಿರುತ್ತಾರೆ. ಕಠಿಣ ಅಥವಾ ಹೆಚ್ಚು ಮುಖ್ಯವಾದ ವಿಷಯಗಳಿಗೆ ಆದ್ಯತೆ ನೀಡಿ ಓದುತ್ತಾರೆ.
Kannada
ಓದುವ ಸ್ಥಳ ಅಚ್ಚುಕಟ್ಟಾಗಿ ನಿರ್ವಹಣೆ
ಒಂದು ಅಚ್ಚುಕಟ್ಟಾದ ಅಧ್ಯಯನ ಸ್ಥಳವು ಕೇವಲ ನೋಡಲು ಮಾತ್ರವಲ್ಲ, ಅಧ್ಯಯನಕ್ಕೂ ಪ್ರೇರಣೆ ನೀಡುತ್ತದೆ. ಟಾಪರ್‌ಗಳು ತಮ್ಮ ಟಿಪ್ಪಣಿಗಳು, ಪುಸ್ತಕಗಳು ಮತ್ತು ನಿಯೋಜನೆಗಳನ್ನು ಅಚ್ಚುಕಟ್ಟಾಗಿ ಇಡುತ್ತಾರೆ.
Kannada
ದಿನಚರಿಯನ್ನು ಪಾಲನೆ
ಶಿಸ್ತಿನ ಜೀವನ ಮಾಡುವವರು ದಿನಚರಿ ಹೊಂದಿರುವುದು ಬಹಳ ಮುಖ್ಯ. ಟಾಪರ್‌ಗಳು ಎಂದಿಗೂ ಮನಸ್ಸಿಗೆ ಬಂದಾಗ ಓದುವುದಿಲ್ಲ. ಅವರು ಇತರೆ ಕೆಲಸಗಳಿಗೆ ಸಮಯ ಕೊಟ್ಟು, ಓದಲು ವೇಳಾಪಟ್ಟಿ ಪಾಲಿಸುತ್ತಾರೆ.
Kannada
ನಿಯಮಿತ ವಿರಾಮ
ಟಾಪರ್‌ಗಳು ನಿರಂತರವಾಗಿ ಅಧ್ಯಯನ ಮಾಡದೇ ಪೊಮೊಡೊರೊ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. 25 ನಿಮಿಷಗಳ ಅಧ್ಯಯನ, ನಂತರ 5 ನಿಮಿಷಗಳ ವಿರಾಮ. ಈ ವಿರಾಮಗಳು ಅವರಿಗೆ ಗಮನಹರಿಸಲು ಸಹಾಯ ಮಾಡುತ್ತದೆ.