ಬುದ್ಧಿವಂತರು ಯಾವುದೇ ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಹಂಬಲ ಹೊಂದಿರುತ್ತಾರೆ. ಪ್ರತಿಯೊಂದು ವಿಷಯದ ಬಗ್ಗೆಯೂ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಳ್ಳುತ್ತಾರೆ.
ಬುದ್ಧಿವಂತರ ಮತ್ತೊಂದು ಲಕ್ಷಣವೆಂದರೆ ಕಲಿಯುವ ಹಂಬಲ. ಇವರು ಖಾಲಿ ಕುಳಿತಿರುವುದನ್ನು ಇಷ್ಟಪಡುವುದಿಲ್ಲ. ಯಾವುದನ್ನಾದರೂ ಕಲಿಯಬೇಕೆಂಬ ಉತ್ಸಾಹ ಹೊಂದಿರುತ್ತಾರೆ.
ಬುದ್ಧಿವಂತರ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಪ್ರಶ್ನಿಸುವುದು. ತಿಳಿದುಕೊಳ್ಳಬೇಕೆಂಬ ಹಂಬಲ ಇವರಲ್ಲಿ ಹೆಚ್ಚಾಗಿರುತ್ತದೆ. ಆದ್ದರಿಂದ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.
ಬುದ್ಧಿವಂತರು ವಿಷಯಗಳನ್ನು ನಿಭಾಯಿಸುವಲ್ಲಿ ನಿಪುಣರಾಗಿರುತ್ತಾರೆ. ಎಷ್ಟೇ ಗೊಂದಲದ ಪರಿಸ್ಥಿತಿ ಎದುರಾದರೂ ಶಾಂತವಾಗಿ ಎದುರಿಸುತ್ತಾರೆ.
ತಪ್ಪನ್ನು ಒಪ್ಪಿಕೊಳ್ಳುವುದು ಸುಲಭದ ಮಾತಲ್ಲ. ನಮ್ಮಲ್ಲಿ ಹಲವರು ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಬುದ್ಧಿವಂತರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ.
ಬುದ್ಧಿವಂತರು ಇತರರೊಂದಿಗೆ ವಾದ ಮಾಡುವುದಿಲ್ಲ. ಅನಗತ್ಯ ವಿಷಯಗಳಲ್ಲಿ ವಾದಿಸಲು ಆಸಕ್ತಿ ತೋರಿಸುವುದಿಲ್ಲ.
ಮನೆಯಲ್ಲೇ ಹಾಲಿನ ಶುದ್ಧತೆ ಪರೀಕ್ಷಿಸಲು ಸುಲಭ ವಿಧಾನಗಳು
ದಟ್ಟವಾದ ಕೂದಲು ಪಡೆಯಲು ಇಲ್ಲಿದೆ ನೈಸರ್ಗಿಕ ವಿಧಾನಗಳು!
ಕಡಿಮೆ ಬೆಲೆಯಲ್ಲಿ ರಾಣಿ ಲುಕ್ ನೀಡುವ ಸುಂದರವಾದ ಬೈತಲೆ ಡಿಸೈನ್ಸ್
ಬಾಳೆಹಣ್ಣಿನ ಪೋರಿ, ರುಚಿ ಹೆಚ್ಚಿಸುವ ಸೀಕ್ರೆಟ್ ಟಿಪ್ಸ್