Kannada

ಈ ಕೆಳಗಿನ ತಪ್ಪು ಮಾಡಬಾರ್ದು

ಮಿಕ್ಸರ್ ಗ್ರೈಂಡರ್  ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಇದು ಅಪಾಯಕಾರಿ ಬಾಂಬ್‌ನಂತೆ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಪಘಾತಗಳನ್ನು ತಡೆಯಲು ನೀವು ಈ ಕೆಳಗಿನ ತಪ್ಪುಗಳನ್ನು ಮಾಡಬಾರದು.   

Kannada

1. ಜಾರ್ ಓವರ್‌ಲೋಡ್ ಮಾಡುವುದು

ಮಿಕ್ಸರ್ ಜಾರ್ ಒಳಗೆ ಅತಿಯಾಗಿ ಸಾಮಗ್ರಿಗಳನ್ನು ತುಂಬಬೇಡಿ. ಇದರಿಂದ ಮೋಟಾರ್ ಮೇಲೆ ತೀವ್ರ ಒತ್ತಡ ಬಿದ್ದು, ಅದು ಸ್ಫೋಟಗೊಳ್ಳಬಹುದು. ಯಾವಾಗಲೂ ಜಾರ್ ಅನ್ನು ಅರ್ಧದಷ್ಟು ಮಾತ್ರ ತುಂಬುವುದು ಸುರಕ್ಷಿತ.    

Image credits: GEMINI
Kannada

2. ದೀರ್ಘಕಾಲದವರೆಗೆ ಚಾಲನೆ

ಮಿಕ್ಸರ್ ಮೋಟಾರ್ ಅನ್ನು ಸತತವಾಗಿ 3 ರಿಂದ 5 ನಿಮಿಷಗಳ ಕಾಲ ಓಡಿಸಬೇಡಿ. ಇದು ಮೋಟಾರ್ ಬಿಸಿಯಾಗಲು ಕಾರಣವಾಗುತ್ತದೆ. ಪ್ರತಿ 30 ಸೆಕೆಂಡಿಗೊಮ್ಮೆ ವಿರಾಮ ನೀಡುವ '30 ಸೆಕೆಂಡ್ ರೂಲ್' ಪಾಲಿಸಿ. 

Image credits: Amazon\Flipkart website
Kannada

3. ಏರ್ ವೆಂಟ್ ಬ್ಲಾಕ್ ಆಗುವುದು

ಮಿಕ್ಸರ್‌ನ ಕೆಳಭಾಗದಲ್ಲಿ ಬಿಸಿ ಗಾಳಿ ಹೊರಹೋಗಲು ವೆಂಟ್‌ಗಳನ್ನು ನೀಡಲಾಗಿರುತ್ತದೆ. ಈ ವೆಂಟ್‌ಗಳು ಧೂಳಿನಿಂದ ಮುಚ್ಚಿಹೋದರೆ, ಓವರ್‌ಹೀಟಿಂಗ್ ಆಗಿ ಮಿಕ್ಸರ್ ಸ್ಫೋಟಗೊಳ್ಳುವ ಅಪಾಯವಿರುತ್ತದೆ. 

Image credits: Amazon\Flipkart website
Kannada

4. ಜಾರ್ ಸೋರಿಕೆ (Leakage)

ಮಿಕ್ಸರ್ ಜಾರ್‌ನಿಂದ ನೀರು ಅಥವಾ ಜ್ಯೂಸ್ ಸೋರಿಕೆಯಾಗುತ್ತಿದ್ದರೆ, ಅದು ಮೋಟಾರ್ ಒಳಗೆ ಹೋಗಿ ಶಾರ್ಟ್ ಸರ್ಕ್ಯೂಟ್ ಅಥವಾ ಬೆಂಕಿ ಅವಘಡಕ್ಕೆ ಕಾರಣವಾಗಬಹುದು. ಸೋರಿಕೆ ಕಂಡುಬಂದ ತಕ್ಷಣ ಅದನ್ನು ಸರಿಪಡಿಸಿ. 

Image credits: Amazon\Flipkart website
Kannada

5. ತಪ್ಪು ಸಾಕೆಟ್ ಬಳಕೆ

ಹೈ ಪವರ್ ಮಿಕ್ಸರ್‌ಗಳನ್ನು ಕಳಪೆ ಗುಣಮಟ್ಟದ ಎಕ್ಸ್‌ಟೆನ್ಶನ್ ಬೋರ್ಡ್‌ಗಳಲ್ಲಿ ಬಳಸಬೇಡಿ. ಯಾವಾಗಲೂ ಸುರಕ್ಷಿತ ಮತ್ತು ಸರಿಯಾದ ವಾಲ್ ಸಾಕೆಟ್‌ಗಳನ್ನೇ ಬಳಸಿ. 

Image credits: Amazon Website
Kannada

6. ಬ್ಲೇಡ್‌ಗಳು ಜಾಮ್ ಆಗುವುದು

ಜಾರ್‌ನ ಬ್ಲೇಡ್‌ಗಳು ಸರಿಯಾಗಿ ತಿರುಗದಿದ್ದರೆ ಮೋಟಾರ್ ಮೇಲೆ ಒತ್ತಡ ಬೀಳುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಬ್ಲೇಡ್‌ಗಳನ್ನು ಸ್ವಚ್ಛಗೊಳಿಸಿ ಮತ್ತು ಅವು ಸುಲಲಿತವಾಗಿ ತಿರುಗುತ್ತಿವೆಯೇ ಎಂದು ಪರೀಕ್ಷಿಸಿ. 

Image credits: Amazon Website
Kannada

7. ಧೂಳು ಮತ್ತು ಕೊಳೆ

ಮಿಕ್ಸರ್ ಬಳಸುವಾಗ ಮೋಟಾರ್ ಮೇಲೆ ಧೂಳು ಮತ್ತು ಜಿಡ್ಡು ಸಂಗ್ರಹವಾಗುತ್ತದೆ. ಇದು ಸ್ಪಾರ್ಕಿಂಗ್ ಮತ್ತು ಓವರ್‌ಹೀಟಿಂಗ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ  ಮಿಕ್ಸರ್ ಮೋಟಾರ್ ಭಾಗ ಸ್ವಚ್ಛವಾಗಿಡಿ.  

Image credits: Gemini

Heart Health: ಹೃದಯದ ಆರೋಗ್ಯ ಚೆನ್ನಾಗಿರಲು ತಿನ್ನಬೇಕಾದ 8 ಹಣ್ಣುಗಳಿವು!

Indoor Plants: ಅಡುಗೆ ಮನೆಯೊಳಗಡೆ ಬೆಳೆಯಬಹುದಾದ 7 ಗಿಡಗಳಿವು!

2 ವಾರ ಗ್ರೀನ್ ಟೀ ಕುಡಿಯಿರಿ; ದೇಹದಲ್ಲಿ ಸಖತ್‌ ಬದಲಾವಣೆ ಆಗುತ್ತೆ! ಏನದು?

ಕೇವಲ 1 ಗ್ರಾಂನಲ್ಲಿ ಚಿನ್ನದ ಓಲೆ; ಇಲ್ಲಿದೆ ಬೆಸ್ಟ್ ಡಿಸೈನ್ಸ್