ನಾವು ಕುಡಿದು ಬಿಸಾಡುವ ಕಾಫಿ ಪುಡಿ ಗಿಡಗಳಿಗೆ ಅದ್ಭುತ ಗೊಬ್ಬರವಾಗಬಲ್ಲದು. ಇದನ್ನು ಸರಿಯಾಗಿ ಬಳಸುವ ವಿಧಾನ ಇಲ್ಲಿದೆ.
life Mar 26 2026
Author: Ashwini HR Image Credits:Pixabay
Kannada
ಯಾವ ಗಿಡಗಳಿಗೆ ಹಾಕಬೇಕು?
ಮನಿ ಪ್ಲಾಂಟ್, ಸ್ನೇಕ್ ಪ್ಲಾಂಟ್, ಗುಲಾಬಿ, ಮಲ್ಲಿಗೆ, ದಾಸವಾಳ, ಟೊಮೆಟೊ, ಕ್ಯಾರೆಟ್, ಬೀಟ್ರೂಟ್, ಪಾಲಕ್‌ಗೆ ಇದು ತುಂಬಾ ಒಳ್ಳೆಯದು.
Image credits: chat GPT
Kannada
ಯಾವ ಗಿಡಗಳಿಗೆ ಹಾಕಬಾರದು?
ಲ್ಯಾವೆಂಡರ್ ಮತ್ತು ರೋಸ್ಮರಿಯಂತಹ ಗಿಡಗಳಿಗೆ ಇದನ್ನು ಹಾಕಬೇಡಿ.
Image credits: pinterest
Kannada
ಒಣಗಿಸಿ ಬಳಸಿ
ಬಳಸಿದ ಕಾಫಿ ಪುಡಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ನಂತರ ಗಿಡದ ಬುಡದ ಮಣ್ಣಿನಲ್ಲಿ ಲಘುವಾಗಿ ಬೆರೆಸಿ. (ಹಸಿ ಪುಡಿ ಹಾಕಿದರೆ ಬೂಸ್ಟ್ ಬರುವ ಸಾಧ್ಯತೆ ಇರುತ್ತದೆ).
Image credits: Getty
Kannada
ಲಿಕ್ವಿಡ್ ಗೊಬ್ಬರ
ಬಳಸಿದ ಕಾಫಿ ಪುಡಿಯನ್ನು ಒಂದು ಮಗ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಗ್ಗೆ ನೀರನ್ನು ಸೋಸಿಕೊಂಡು, ಅದಕ್ಕೆ ಇನ್ನೂ ಸ್ವಲ್ಪ ನೀರು ಬೆರೆಸಿ (ಅದು ತಿಳಿ ಟೀ ಬಣ್ಣಕ್ಕೆ ಬರಬೇಕು) ಗಿಡಗಳಿಗೆ ಹಾಕಿ.
Image credits: Getty
Kannada
ನೀರಿನ ಪ್ರಮಾಣ
ಒಂದು ಚಮಚ ಕಾಫಿ ಪುಡಿ ಇದ್ದರೆ ಅದಕ್ಕೆ ಸುಮಾರು ಅರ್ಧದಿಂದ ಒಂದು ಲೀಟರ್ ನೀರು ಸಾಕು.
Image credits: Pinteresr
Kannada
ಬಳಸಿದ ಪುಡಿಯೇ ಲೇಸು
ತಾಜಾ ಕಾಫಿ ಪುಡಿಗಿಂತ, ಒಮ್ಮೆ ಕಾಫಿ ಮಾಡಿದ ನಂತರ ಉಳಿಯುವ ಪುಡಿ ಗಿಡಗಳಿಗೆ ಹೆಚ್ಚು ಸುರಕ್ಷಿತ.
Image credits: Getty
Kannada
ಕೀಟ ನಿರೋಧಕ
ಗಿಡದ ಸುತ್ತ ಕಾಫಿ ಪುಡಿ ಉದುರಿಸುವುದರಿಂದ ಬಸವನ ಹುಳುಗಳು ಮತ್ತು ಇತರ ಕೀಟಗಳು ಹತ್ತಿರ ಸುಳಿಯುವುದಿಲ್ಲ.
Image credits: our own
Kannada
ಅತಿಯಾಗದಿರಲಿ
ಅತಿ ಹೆಚ್ಚು ಕಾಫಿ ಪುಡಿ ಬಳಸಿದರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಬಹುದು. ಮಣ್ಣಿನ ಪ್ರಮಾಣಕ್ಕೆ ತಕ್ಕಂತೆ ಸ್ವಲ್ಪ ಮಾತ್ರ ಬಳಸಿ.
Image credits: our own
Kannada
ದೂರವಿರಲಿ
ಪುಡಿಯನ್ನು ನೇರವಾಗಿ ಗಿಡದ ಕಾಂಡಕ್ಕೆ ಅಥವಾ ಎಲೆಗಳ ಮೇಲೆ ಹಾಕಬೇಡಿ. ಸ್ವಲ್ಪ ದೂರದಲ್ಲಿ ಮಣ್ಣಿನ ಮೇಲೆ ಹರಡಿ.
Image credits: pexels
Kannada
ವೇಗವಾಗಿ ಬೆಳೆಯುತ್ತೆ
ನೀವು ಗಿಡಗಳಿಗೆ ಅಕ್ಕಿ ತೊಳೆದ ನೀರನ್ನು (Rice Water) ಹಾಕುವ ಅಭ್ಯಾಸ ಹೊಂದಿದ್ದರೆ, ಅದಕ್ಕೆ ಸ್ವಲ್ಪ ಈ ಕಾಫಿ ಪುಡಿ ಬೆರೆಸಿ ಹಾಕಿದರೆ ಗಿಡಗಳು ಇನ್ನೂ ವೇಗವಾಗಿ ಮತ್ತು ಹಸಿರಾಗಿ ಬೆಳೆಯುತ್ತವೆ.
Image credits: unsplash
Kannada
ಹೀಗಿರಲಿ ಅಳತೆ
ನೀವು ಅಕ್ಕಿ ತೊಳೆದ ನೀರು ಬಳಸುತ್ತಿದ್ದರೆ, ಒಂದು ಲೀಟರ್ ಅಕ್ಕಿ ನೀರಿಗೆ ಒಂದು ಚಮಚ ಕಾಫಿ ಪುಡಿ ಬೆರೆಸುವುದು ಸೂಕ್ತ ಅಳತೆ.