ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ದೊಡ್ಡವರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾಸಾಯನಿಕಗಳಿಲ್ಲದೆ, ವೀಳ್ಯದೆಲೆ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಿಕೊಳ್ಳಬಹುದು.
ಒಂದು ಪಾತ್ರೆಯಲ್ಲಿ 15-20ವೀಳ್ಯದೆಲೆ ಕುದಿಸಿ. ಈ ನೀರನ್ನು ತಣ್ಣಗಾಗಿಸಿ, ಅದರಿಂದ ನಿಮ್ಮ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಬದಲಾವಣೆ ಕಾಣುವಿರಿ.
ವೀಳ್ಯದೆಲೆಗೆ ಜೀವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ತಲೆಯ ಮೇಲಿನ ಸೋಂಕಿನ ಸಮಸ್ಯೆಯನ್ನು ಪರಿಹರಿಸುತ್ತದೆ.
ವೀಳ್ಯದೆಲೆ ಮತ್ತು ತುಪ್ಪದಿಂದ ಮಾಡಿದ ಹೇರ್ ಪ್ಯಾಕ್ ಕೂದಲನ್ನು ದಟ್ಟವಾಗಿಸಲು ಸಹಾಯ ಮಾಡುತ್ತದೆ. 15-20 ವೀಳ್ಯದೆಲೆ ಅರೆದು ಅದಕ್ಕೆ ಒಂದು ಚಮಚ ತುಪ್ಪ ಸೇರಿಸಬೇಕು. ತಲೆಗೆ ಹಚ್ಚಿ, ಒಂದು ಗಂಟೆಯ ನಂತರ ಸ್ನಾನ ಮಾಡಬೇಕು.
ವೀಳ್ಯದೆಲೆ ಎಣ್ಣೆಗಾಗಿ, ಕೊಬ್ಬರಿ ಅಥವಾ ಸಾಸಿವೆ ಎಣ್ಣೆಯಲ್ಲಿ 15ವೀಳ್ಯದೆಲೆ ಕಡಿಮೆ ಉರಿಯಲ್ಲಿ ಕುದಿಸಿ. ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿದ ನಂತರ, ಈ ಎಣ್ಣೆಯನ್ನು ಫಿಲ್ಟರ್ ಮಾಡಿ, ತಲೆ ಮತ್ತು ಕೂದಲಿಗೆ ಹಚ್ಚಿ
ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 5-6 ವೀಳ್ಯದೆಲೆ ಅಗಿಯಬಹುದು ಅಥವಾ ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯಬಹುದು. ಇದು ಕೂದಲು ಉದುರುವಿಕೆಯನ್ನು ನಿಯಂತ್ರಿಸುವುದಲ್ಲದೆ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.