ಬಾಲ್ಕನಿಯಲ್ಲಿ ಗಿಡಗಳನ್ನು ಬೆಳೆಸುವುದರಿಂದ ಹಲವು ಪ್ರಯೋಜನಗಳಿವೆ. ಬಿಸಿಲಿನ ತಾಪವನ್ನು ತಡೆದು ಬಾಲ್ಕನಿಯನ್ನು ಸುಂದರಗೊಳಿಸಲು ಈ ಬಳ್ಳಿ ಗಿಡಗಳನ್ನು ಬೆಳೆಸಿ.
ಬಿಳಿ ಹೂವುಗಳಿಂದ ಕಂಗೊಳಿಸುವ ಸುಂದರ ಗಿಡವೇ ಸ್ಟಾರ್ ಜಾಸ್ಮಿನ್. ಇದಕ್ಕೆ ಕನಿಷ್ಠ 6 ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಬೇಕು.
ಬಹಳ ಬೇಗನೆ ಬೆಳೆಯುವ ಗಿಡವೇ ಮನಿ ಪ್ಲಾಂಟ್. ಇದರ ನಿರ್ವಹಣೆಯೂ ಸುಲಭ. ನೇರ ಸೂರ್ಯನ ಬೆಳಕು ಬೀಳದ ಜಾಗದಲ್ಲಿ ಬೆಳೆಸಬಹುದು.
ಸುಂದರವಾದ ಹೂವುಗಳನ್ನು ಬಿಡುವ ಗಿಡವೇ ಕಾಗದದ ಹೂವಿನ ಗಿಡ. ಸೂರ್ಯನ ಬೆಳಕು ಚೆನ್ನಾಗಿ ಬೀಳುವ ಜಾಗದಲ್ಲಿ ಬೆಳೆಸಬೇಕು. ಬಾಲ್ಕನಿಯಲ್ಲಿ ಬೆಳೆಸಲು ಸೂಕ್ತವಾದ ಗಿಡ.
ಬಾಲ್ಕನಿಯಲ್ಲಿ ಸುಲಭವಾಗಿ ಬೆಳೆಸಬಹುದಾದ ಗಿಡವೇ ಪ್ಯಾಶನ್ ಫ್ಲವರ್. ಬಿಸಿಲಿನ ತಾಪವನ್ನು ತಡೆದು ಬಾಲ್ಕನಿಯನ್ನು ತಂಪಾಗಿರಿಸುತ್ತದೆ.
ನೇರ ಸೂರ್ಯನ ಬೆಳಕು ಬೀಳದಂತೆ ಬೆಳೆಸಬಹುದು. ಬಾಲ್ಕನಿಯನ್ನು ಸುಂದರಗೊಳಿಸುವುದರ ಜೊತೆಗೆ ಸುವಾಸನೆಯನ್ನೂ ಹರಡುತ್ತದೆ.
ಸುಂದರವಾದ ಹೂವುಗಳನ್ನು ಬಿಡುವ ಈ ಗಿಡವನ್ನು ಬೆಳೆಸುವುದು ಸುಲಭ. ಬಾಲ್ಕನಿಯಲ್ಲಿ ಬೆಳೆಸಿದರೆ ಬಿಸಿಲಿನಿಂದ ರಕ್ಷಣೆ ಪಡೆಯಬಹುದು.
ಸುಲಭವಾಗಿ ಬೆಳೆಸಬಹುದಾದ ಗಿಡವೇ ಕ್ಲೆಮ್ಯಾಟಿಸ್ ಅಥವಾ ಲೆದರ್ ಫ್ಲವರ್. ಸುಂದರ ಹೂವುಗಳಿರುವ ಈ ಗಿಡವನ್ನು ಬಾಲ್ಕನಿಯಲ್ಲಿ ಬೆಳೆಸುವುದು ಸೂಕ್ತ.
ಪದೇ ಪದೇ ಹಸಿವು ಆಗ್ತಿದ್ಯಾ? ಈ ಕಾರಣವೂ ಇರಬಹುದು
ಜ್ವರ ಬಂದಾಗ ಏನು ಮಾಡಬೇಕು? ಮನೆಯಲ್ಲಿ ಔಷಧಿ ತಯಾರಿಸೋದೇಗೆ?
ಮನೆಯಲ್ಲಿ ಕಣಜ ಹುಳುಗಳ ಕಾಟ ತಪ್ಪಿಸಲು ಸಲಹೆಗಳು
ಮಳೆಗಾಲದಲ್ಲಿ ನಾಯಿ ಸಾಕುವಾಗ ಗಮನಿಸಬೇಕಾದ 7 ಅಂಶಗಳು