ಮನೆಯಲ್ಲಿ ಬೆಳಿಗ್ಗೆ-ಸಂಜೆ ಅಥವಾ ಯಾರಾದರೂ ಅತಿಥಿಗಳು ಬಂದಾಗ, ಚಹಾ ತಯಾರಿಸಲಾಗುತ್ತದೆ. ಆದರೆ ಚಹಾವನ್ನು ಸೋಸಿದ ನಂತರ ಟೀ ಪುಡಿಯನ್ನು ಎಸೆಯಲಾಗುತ್ತದೆ, ಆದರೆ ಈ ಟೀ ಪುಡಿ ತುಂಬಾ ಪರಿಣಾಮಕಾರಿಯಾಗಿದೆ.
ಗೊಬ್ಬರವಾಗಿ ಬಳಸಿ
ಟೀ ಪುಡಿಯನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ, ನಂತರ ಸ್ವಲ್ಪ ಪ್ರಮಾಣದಲ್ಲಿ ಸಸ್ಯಗಳ ಮಣ್ಣಿನಲ್ಲಿ ಬೆರೆಸಿ ಅಥವಾ ನೇರವಾಗಿ ಬೇರುಗಳಿಗೆ ಹಾಕಿ. ಮನಿ ಪ್ಲಾಂಟ್, ಗುಲಾಬಿ ಮತ್ತು ಇತರ ಸಸ್ಯಗಳಿಗೆ ಇದು ಉತ್ತಮ ಗೊಬ್ಬರ.
ಶುಚಿಗೊಳಿಸುವಿಕೆಯಲ್ಲಿ ಬಳಸಿ
ಉಳಿದ ಟೀ ಪುಡಿಯನ್ನು ತೊಳೆದು ಮತ್ತೆ ಕುದಿಸಿ. ಈ ನೀರನ್ನು ಸ್ಪ್ರೇ ಬಾಟಲಿಗೆ ಹಾಕಿ ಮತ್ತು ಇದರಿಂದ ಕನ್ನಡಿಗಳು ಮತ್ತು ಗಾಜಿನ ಪಾತ್ರೆಗಳನ್ನು ಸ್ವಚ್ಛಗೊಳಿಸಿ. ನೆಲವನ್ನೂ ಒರೆಸಬಹುದು..
ಕೂದಲಿಗೆ ಬಳಸಿ
ಉಳಿದ ಟೀ ಪುಡಿ ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದರಿಂದ ಕೂದಲು ಆರೋಗ್ಯಕರ ಮತ್ತು ಹೊಳೆಯುವಂತೆ ಆಗುತ್ತದೆ. ನೀವು ಇದನ್ನು ಮೆಹಂದಿಗೆ ಬೆರೆಸಿ ಹಚ್ಚಬಹುದು ಅಥವಾ ಟೀ ಪುಡಿ ಕುದಿಸಿ ನೀರಿನಿಂದ ಕೂದಲನ್ನು ತೊಳೆಯಬಹುದು.
ಕೀಟ, ಜಿರಳೆ ಓಡಿಸಿ
ಜಿರಳೆಗಳು ಮತ್ತು ಕೀಟಗಳನ್ನು ಓಡಿಸಲು ಉಳಿದ ಟೀ ಪುಡಿಯನ್ನು ಮತ್ತೆ ಕುದಿಸಿ ಸೋಸಿ. ಈ ನೀರಿನಿಂದ ಆ ಜಾಗವನ್ನು ಒರೆಸಿ. ಆಗ ಕೀಟಗಳು ಬರುವುದಿಲ್ಲ.
ಚಾಪಿಂಗ್ ಬೋರ್ಡ್ ಸ್ವಚ್ಛಗೊಳಿಸಿ
ತರಕಾರಿ ಕತ್ತಿರಿಸುವ ಹಲಗೆಯನ್ನು ಸ್ವಚ್ಛಗೊಳಿಸಲು ಒಂದು ಚಮಚ ಡಿಶ್ ವಾಶ್ ಮತ್ತು ನಿಂಬೆ ರಸವನ್ನು ಬೆರೆಸಿ. ನಂತರ ಚಾಪಿಂಗ್ ಬೋರ್ಡ್ ಮೇಲೆ ಉಳಿದ ಟೀ ಪುಡಿಯನ್ನು ಹಾಕಿ ಮತ್ತು ಡಿಶ್ ವಾಶ್ ದ್ರವದಿಂದ ಸ್ವಚ್ಛಗೊಳಿಸಿ.
ಕಾಲುಗಳ ದುರ್ವಾಸನೆ ನಿವಾರಿಸಿ
ಶೂಗಳನ್ನು ಧರಿಸುವುದರಿಂದ ಕಾಲುಗಳಲ್ಲಿ ದುರ್ವಾಸನೆ ಬರುತ್ತದೆ. ಟೀ ಪುಡಿಯನ್ನು ನೀರಿನಲ್ಲಿ ಕುದಿಸಿ ಸೋಸಿ, ಬೆಚ್ಚಗಿನ ನೀರಿನಲ್ಲಿ ಬೆರೆಸಿ. 10-15 ನಿಮಿಷ ಕಾಲುಗಳನ್ನು ಇಡಿ. ಇದರಿಂದ ಕಾಲುಗಳ ದುರ್ವಾಸನೆ ಹೋಗುತ್ತದೆ.