India

ಕೋಲ್ಕತ್ತಾ ಅತ್ಯಾಚಾರ-ಕೊಲೆ ಆರೋಪಿಗೆ ಪಾಲಿಗ್ರಾಫ್‌ ಟೆಸ್ಟ್‌

ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಪಾಲಿಗ್ರಾಫಿ ಪರೀಕ್ಷೆ

ಕೋಲ್ಕತ್ತಾದಲ್ಲಿ ಜೂನಿಯರ್ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ (Sanjay Roy) ಸೇರಿದಂತೆ 6 ಆರೋಪಿಗಳ ಪಾಲಿಗ್ರಾಫ್ ಪರೀಕ್ಷೆ ನಡೆಯಲಿದೆ. ಇದು ಸುಳ್ಳನ್ನು ಪತ್ತೆಹಚ್ಚುವ ಯಂತ್ರ.

ಪಾಲಿಗ್ರಾಫಿ ಪರೀಕ್ಷೆ ಎಂದರೇನು

ಆರೋಪಿ ಹೇಳುತ್ತಿರುವುದು ಸತ್ಯವೋ-ಸುಳ್ಳೋ ಅನ್ನೋದನ್ನು ಕಂಡುಹಿಡಿಯಲು ಮಾಡುವ ಪರೀಕ್ಷೆ. ಇದರಲ್ಲಿ ದೇಹದಿಂದ ಯಂತ್ರಕ್ಕೆ ಸಂಪರ್ಕಿಸಲಾದ ಸೆನ್ಸಾರ್‌ಗಳಿಂದ ಬರುವ ಸಂಕೇತಗಳನ್ನು ದಾಖಲೆಯನ್ನಾಗಿ ಮಾಡಲಾಗುತ್ತದೆ.

ಪಾಲಿಗ್ರಾಫ್ ಯಂತ್ರ ಭಾರತದಲ್ಲಿ ಎಲ್ಲಿ ಸಿಗುತ್ತದೆ

ಪ್ರೆಸ್ಟೊ ಇನ್ಫೋಸೊಲ್ಯೂಷನ್ಸ್, ಮೆಡಿಕಾಮ್ ಕಂಪನಿಗಳು ಭಾರತದಲ್ಲಿ ಪಾಲಿಗ್ರಾಫ್ ಯಂತ್ರಗಳನ್ನು ತಯಾರಿಸುತ್ತವೆ. ಇವುಗಳನ್ನು ಮುಖ್ಯವಾಗಿ ಸರ್ಕಾರಿ ಸಂಸ್ಥೆಗಳಿಗೆ ಮಾತ್ರವೇ ನೀಡಲಾಗುತ್ತದೆ.

ಪಾಲಿಗ್ರಾಫಿ ಯಂತ್ರ ಮಾರಾಟ ಮಾಡುವ ಜಾಗತಿಕ ಕಂಪನಿಗಳು

ಅಮೆರಿಕದ ಲಫಯೆಟ್ ಇನ್ಸ್ಟ್ರುಮೆಂಟ್ ಕಂಪನಿಯು ವಿಶ್ವದ ಪ್ರಮುಖ ಪಾಲಿಗ್ರಾಫ್ ಯಂತ್ರ ಪೂರೈಕೆದಾರ. ಯುಎಸ್ಎ ಮೂಲದ ಸ್ಟೋಲ್ಟಿಂಗ್ ಕಂ ಮತ್ತು ಕೀಲರ್ ಪಾಲಿಗ್ರಾಫ್ ಕೂಡ ಈ ಯಂತ್ರವನ್ನು ತಯಾರಿಸುತ್ತವೆ.

ಪಾಲಿಗ್ರಾಫ್ ಯಂತ್ರವನ್ನು ಖರೀದಿಸಬಹುದೇ

ಪಾಲಿಗ್ರಾಫ್ ಯಂತ್ರಗಳನ್ನು ಸರ್ಕಾರಿ ತನಿಖಾ ಸಂಸ್ಥೆಗಳು ಖರೀದಿಸುತ್ತವೆ. ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಯು ಸಹ ಈ ಯಂತ್ರವನ್ನು ಖರೀದಿಸಬಹುದು ಆದರೆ ಇದಕ್ಕಾಗಿ ಮಾನ್ಯ ಕಾರಣವನ್ನು ನೀಡಬೇಕಾಗುತ್ತದೆ.  

ಪಾಲಿಗ್ರಾಫ್ ಯಂತ್ರಕ್ಕೆ ಪರವಾನಗಿ ಅಗತ್ಯವಿದೆಯೇ

ಕೆಲವು ದೇಶಗಳಲ್ಲಿ ಕಾನೂನು ನಿಯಮಗಳ ಪ್ರಕಾರ ಪಾಲಿಗ್ರಾಫ್ ಯಂತ್ರವನ್ನು ಖರೀದಿಸಲು ಅನುಮತಿ ಇದೆ. ಇನ್ನೂ ಕೆಲವೆಡೆ ಪಾಲಿಗ್ರಾಫ್ ಯಂತ್ರವನ್ನು ಖರೀದಿಸಲು ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ.

ಪಾಲಿಗ್ರಾಫಿ ಯಂತ್ರದ ಬೆಲೆ ಎಷ್ಟು

ಪಾಲಿಗ್ರಾಫ್ ಯಂತ್ರದ ಬೆಲೆ ಅದರ ಬ್ರ್ಯಾಂಡ್, ಗಾತ್ರ ಮತ್ತು ಮಾದರಿಯನ್ನು ಅವಲಂಬಿಸಿರುತ್ತದೆ. ಇದರ ಮೂಲ ಮಾದರಿ 2.5 ಲಕ್ಷದಿಂದ 4 ಲಕ್ಷದವರೆಗೆ ಇರುತ್ತದೆ. ಡಿಜಿಟಲ್ ಪಾಲಿಗ್ರಾಫ್ ಯಂತ್ರ 8-12 ಲಕ್ಷ ಇರುತ್ತದೆ.

Find Next One