India
ಇಸ್ರೇಲ್ ಇನ್ನು ಹೆಚ್ಚು ದಿನ ಉಳಿಯದು ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾಖಮೇನಿ ಬಹಿರಂಗ ಘೋಷಣೆ ಮಾಡಿದ್ದಾರೆ ಇತ್ತ ಇಸ್ರೇಲ್ ಸಹ ಇರಾನ್ ಈ 8 ನಗರ ಮೇಲೆ ಗುರಿಯಿಟ್ಟು ಕುಳಿತಿದೆ.
ಇರಾನ್ ದಾಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಇಸ್ರೇಲ್ ಇನ್ನೂ ನಿರ್ಧರಿಸಿಲ್ಲ.ಇದರಿಂದ ಇಸ್ರೇಲ್ ತನ್ನ ಮೇಲೆ ನಡೆದ ದಾಳಿಯನ್ನು ಮರೆತಿಲ್ಲ ಎಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಶುಕ್ರವಾರ ಹೇಳಿದ್ದಾರೆ.
ಒಂದು ವೇಳೇ ಇಸ್ರೇಲ್ ಇರಾನ್‌ನ ಪರಮಾಣು ಕೇಂದ್ರ,ತೈಲ ನಿಕ್ಷೇಪಗಳ ಮೇಲೆ ದಾಳಿ ನಡೆಸಬಹುದು ಎಂದು ಕೆಲವು ತಜ್ಞರು ಭಾವಿಸುತ್ತಾರೆ, ಇದು ಅದಕ್ಕೆ ದೊಡ್ಡ ಹಿನ್ನಡೆಯಾಗಬಹುದು. ಇದು ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ.
ಇಸ್ರೇಲ್ ಇರಾನ್‌ನ ಪರಮಾಣು-ತೈಲ ಕೇಂದ್ರಗಳ ಮೇಲೆ ದಾಳಿ ಮಾಡಬಾರದು ಎಂದು ಬಿಡೆನ್ ಸಲಹೆ ನೀಡಿದ್ದಾರೆ. ನಾನು ನೆತನ್ಯಾಹು ಸ್ಥಾನದಲ್ಲಿದ್ದರೆ ಬೇರೆ ಆಯ್ಕೆ ಬಗ್ಗೆ ಯೋಚಿಸುತ್ತಿದ್ದೆ ಎಂದಿದ್ದಾರೆ.
ಇಸ್ರೇಲ್ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡುವುದಿಲ್ಲವೆಂಬ ಅಮೆರಿಕಕ್ಕೆ ಯಾವುದೇ ಗ್ಯಾರಂಟಿ ನೀಡಿಲ್ಲ. ಇದು ಪ್ರಪಂಚದಾದ್ಯಂತ, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಹೆಚ್ಚಿನ ಉದ್ವಿಗ್ನತೆಯನ್ನು ಸೃಷ್ಟಿಸಿದೆ.
ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಗಳ ವಾರ್ಷಿಕೋತ್ಸವವು ಪೂರ್ಣಗೊಳ್ಳುತ್ತದೆ ಇಂತಹ ಪರಿಸ್ಥಿತಿಯಲ್ಲಿ ಇಸ್ರೇಲ್ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದು ಹೇಳುವುದು ಕಷ್ಟ ಸಿಎನ್‌ಎನ್ ವರದಿ ಮಾಡಿದೆ.
ಹಲವಾರು ಅಮೆರಿಕದ ಅಧಿಕಾರಿಗಳು ಇರಾನ್ ಮೇಲೆ ದಾಳಿ ಮಾಡಲು ಇಸ್ರೇಲ್‌ಗೆ ಬೆಂಬಲ ನೀಡಿದ್ದಾರೆ ಎಂದು ಹಲವು ವರದಿಗಳು ಹೇಳುತ್ತವೆ, ಆದರೆ ಇದು ಮಧ್ಯಪ್ರಾಚ್ಯದಲ್ಲಿ ದೊಡ್ಡ ಯುದ್ಧಕ್ಕೆ ಕಾರಣವಾಗಬಹುದು.
ವರದಿಗಳ ಪ್ರಕಾರ, ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದರೆ 8 ನಗರಗಳು ಗುರಿಯಾಗಬಹುದು. ಇವುಗಳಲ್ಲಿ. ಟೆಹ್ರಾನ್, ತಬ್ರಿಜ್, ಬಖ್ತಾರನ್,. ಖೊರ್ರಂಬಾದ್, ಶಿರಾಜ್, . ಶಹರೌದ್, . ಇಸ್ಫಹಾನ್, . ಹೊರ್ಮೊಜ್ಗನ್ ಸೇರಿವೆ.
ಇಸ್ರೇಲಿ ರಕ್ಷಣಾ ಪಡೆ (IDF) ದಕ್ಷಿಣ ಲೆಬನಾನ್ ನಂತರ ಈಗ ಉತ್ತರ ಲೆಬನಾನ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. 4 ದಿನಗಳಲ್ಲಿ 250 ಹಿಜ್ಬುಲ್ಲಾ ಉಗ್ರರನ್ನು ಹತ್ಯೆ ಮಾಡಲಾಗಿದೆ ಐಡಿಎಫ್ ತಿಳಿಸಿದೆ
ಇಸ್ರೇಲ್ ದಾಳಿಯ ಭೀತಿಯಿಂದ ಲೆಬನಾನ್‌ನಿಂದ 3 ಲಕ್ಷ ಜನರು ಸಿರಿಯಾಕ್ಕೆ ವಲಸೆ ಹೋಗಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಲೆಬನಾನ್ ಸರ್ಕಾರದ ಪ್ರಕಾರ, ಇಲ್ಲಿಯವರೆಗೆ 1.2 ಮಿಲಿಯನ್ ಜನರು ದೇಶವನ್ನು ತೊರೆದಿದ್ದಾರೆ.