ಪ್ರೀತಿಯಿಂದ ಸಾಕಿದ್ದ ನಾಯಿ, ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ ದಂಪತಿಗಳು ದುಃಖಿತರಾಗಿದ್ದಾರೆ. ಅದನ್ನ ಪತ್ತೆ ಹಚ್ಚಲು ಎಷ್ಟೇ ಖರ್ಚು ಮಾಡಲು ಸಿದ್ಧರಾಗಿದ್ದಾರೆ.
5 ಸಾವಿರಕ್ಕೂ ಹೆಚ್ಚು ಪೋಸ್ಟರ್‌ಗಳು, 200+ ಸಿಸಿಟಿವಿಗಳು
ಆಗ್ರಾದಲ್ಲಿ 5 ಸಾವಿರಕ್ಕೂ ಹೆಚ್ಚು ಪೋಸ್ಟರ್‌ಗಳನ್ನು ಅಂಟಿಸಿ, 200 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮತ್ತು ₹50,000 ಬಹುಮಾನವನ್ನು ಘೋಷಿಸಿದ್ದಾರೆ.
ಯುರೋಪ್‌ಗೂ ತಮ್ಮ ನಾಯಿಗಳನ್ನು ಕರೆದೊಯ್ದ ದಂಪತಿ
ದೀಪಾಯನ್ ಮತ್ತು ಕಸ್ತೂರಿಗೆ ಅವರ ನಾಯಿಗಳು ಕೇವಲ ಸಾಕುಪ್ರಾಣಿಗಳಲ್ಲ,ಅವರ ಕುಟುಂಬ ಸದಸ್ಯರಿದ್ದಂತೆ ಯುರೋಪ್ ಪ್ರವಾಸದಿಂದ ಸಣ್ಣ-ಪುಟ್ಟ ಸಂತೋಷದಲ್ಲೂ ಅವರ ಜೊತೆ ನಾಯಿಗಳು ವೂಫ್ ಮತ್ತು ಗ್ರೇಹೌಂಡ್ ಜೊತೆ ಇರುತ್ತವೆ.
ಗ್ರೇಹೌಂಡ್ ನಾಪತ್ತೆ
ಗ್ರೇಹೌಂಡ್ ಕಳೆದುಹೋಗಿ ಅವರ ಕುಟುಂಬ ದುಃಖಿತವಾಗಿದೆ.. ದಂಪತಿ ನ. 1 ರಂದು ಆಗ್ರಾ ಪ್ರವಾಸ ಆರಂಭಿಸಿದ್ದರು,ನವೆಂಬರ್ 3 ರಂದು ಅವರ ಹೋಟೆಲ್‌ನಿಂದ ಅವರ ಹೆಣ್ಣು ನಾಯಿ ಕಳೆದುಹೋಯಿತು. ಅಂದಿನಿಂದ ಹುಡುಕಾಟ ಮುಂದುವರೆದಿದೆ.
7 ದಿನಗಳಿಂದ ಕಾಡುಮೇಡುಗಳಲ್ಲಿ ಅಲೆಯುತ್ತಿರುವ ದಂಪತಿ
ದಂಪತಿ ಕಳೆದ 7 ದಿನಗಳಿಂದ ಆಗ್ರಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮ ನಾಯಿಯನ್ನು ಹುಡುಕುತ್ತಿದ್ದಾರೆ. ಪೊಲೀಸರ ಸಹಕಾರವನ್ನೂ ಪಡೆಯುತ್ತಿದ್ದಾರೆ. ಆದರೂ ಪತ್ತೆಯಾಗಿಲ್ಲ.