India

ಅಮಿತ್ ಶಾ ಬಗ್ಗೆ 10 ಆಸಕ್ತಿದಾಯಕ ಸಂಗತಿಗಳು

ಭಾರತದ ಗೃಹ ಸಚಿವರ ಬಗ್ಗೆ ನಿಮಗೇ ಗೊತ್ತಿರದ ವಿಷಯಗಳು ಇವು.

ಮುಂಬೈನಲ್ಲಿ ಜನನ

ಅಮಿತ್ ಶಾ ಅಕ್ಟೋಬರ್ 22, 1964 ರಂದು ಮುಂಬೈನಲ್ಲಿ ಜನಿಸಿದರು. ಅವರು ಶ್ರೀಮಂತ ಗುಜರಾತಿ-ಹಿಂದೂ ಕುಟುಂಬದಿಂದ ಬಂದವರು. ನಂತರ ಅವರ ಕುಟುಂಬ ಗುಜರಾತ್‌ನ ಮಾನ್ಸಾದಲ್ಲಿ ನೆಲೆಸಿತು.

ಪ್ರತಿಷ್ಠಿತ ಕುಟುಂಬದ ಹಿನ್ನೆಲೆ

ನರೇಂದ್ರ ಮೋದಿ ಸಾಮಾನ್ಯ ಹಿನ್ನೆಲೆಯಿಂದ ಬಂದರೆ, ಅಮಿತ್ ಶಾ ಪ್ರಮುಖ ಕುಟುಂಬದಿಂದ ಬಂದವರು. ಅವರ ತಂದೆ ಯಶಸ್ವಿ ಪಿವಿಸಿ ಪೈಪ್ ವ್ಯಾಪಾರಿ.

ಸೋಲಿಲ್ಲದ ಸರದಾರ

ಶಾ 1970ರ ದಶಕದಲ್ಲಿ ಜನತಾ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅವರು 29 ಚುನಾವಣೆಗಳಲ್ಲಿ (ಸ್ಥಳೀಯ ಸಂಸ್ಥೆ ಚುನಾವಣೆಗಳು ಸೇರಿ) ಸ್ಪರ್ಧಿಸಿದ್ದು, ಒಂದರಲ್ಲೂ ಸೋತಿಲ್ಲ.

ರಾಜ್ಯಸಭಾ ಸಂಸದ

ಅಮಿತ್ ಶಾ 1997, 1998, 2002 ಮತ್ತು 2007 ರಲ್ಲಿ ಗುಜರಾತ್ ಶಾಸಕರಾಗಿ ಸೇವೆ ಸಲ್ಲಿಸಿದರೆ, ನಂತರ ರಾಜ್ಯಸಭಾ ಸದಸ್ಯರಾದರು. 2017ರಲ್ಲಿ ಬಿಜೆಪಿ ಅಧ್ಯಕ್ಷರಾದ ನಂತರ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾದರು.

ಜೈಲುವಾಸ

ಅಮಿತ್ ಶಾ 2010ರಲ್ಲಿ ಸೊಹ್ರಾಬುದ್ದೀನ್ ಶೇಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸಿದರು. ನಂತರ ಅವರಿಗೆ ಜಾಮೀನು ನೀಡಲಾಯಿತು.

ನರೇಂದ್ರ ಮೋದಿ ಭೇಟಿ

ಅಮಿತ್ ಶಾ ಮೊದಲು 1982 ರಲ್ಲಿ ಅಹಮದಾಬಾದಿನಲ್ಲಿ ನಡೆದ ಸಭೆಯೊಂದರಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಆ ಸಮಯದಲ್ಲಿ ಮೋದಿ ಆರ್‌ಎಸ್‌ಎಸ್ ಪ್ರಚಾರಕರಾಗಿದ್ದರು.

ಜೀವರಸಾಯನಶಾಸ್ತ್ರ ಅಧ್ಯಯನ

ಅಮಿತ್ ಶಾ ಗುಜರಾತ್‌ನ ಮೆಹ್ಸಾನಾದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಅಹಮದಾಬಾದ್‌ನ ಸಿ.ಯು. ಶಾ ವಿಜ್ಞಾನ ಕಾಲೇಜಿನಲ್ಲಿ ಜೀವರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದರು. ಅವರು ಕಾಲೇಜು ದಿನಗಳಲ್ಲಿ ಎಬಿವಿಪಿ ಸೇರಿದರು.

ಸ್ಟಾಕ್ ಬ್ರೋಕರ್ ಆಗಿದ್ದ ಶಾ

ಪೂರ್ಣಾವಧಿ ರಾಜಕಾರಣಕ್ಕೆ ಪ್ರವೇಶಿಸುವ ಮೊದಲು, ಶಾ ಅಹಮದಾಬಾದ್‌ನಲ್ಲಿ ಸ್ಟಾಕ್ ಬ್ರೋಕರ್ ಆಗಿ ಮತ್ತು ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡಿದರು.

ADCB ನೇತೃತ್ವ

1999 ರಲ್ಲಿ, ಅಮಿತ್ ಶಾ ದೇಶದ ಅತಿದೊಡ್ಡ ಸಹಕಾರಿ ಬ್ಯಾಂಕ್ ಆದ ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ (ADCB) ಅಧ್ಯಕ್ಷರಾಗಿದ್ದರು.

GCA ನೇತೃತ್ವ

 2014ರಲ್ಲಿ ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದರು. ಇದಕ್ಕೂ ಮೊದಲು, ಅವರು ಗುಜರಾತ್ ರಾಜ್ಯ ಚೆಸ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಟಾಪ್ 10 ವೀಡಿಯೊಗಳಿವು

ಹಿಜ್ಬುಲ್ಲಾಹ್ ಉಗ್ರರಿಗೆ ಬಡ್ಡಿರಹಿತ ಸಾಲ ನೀಡುವ ಬ್ಯಾಂಕ್ ಮೇಲೆ ಇಸ್ರೇಲ್ ದಾಳಿ!

ಬಡವರೇ ಹೆಚ್ಚಿರುವ ಜಗತ್ತಿನ ಐದು ರಾಷ್ಟ್ರಗಳು!

ಉಗಾಂಡದಲ್ಲಿ ಮಗಳ ಬಂಧನ, ಅಸಾಹಾಯಕರಾದ ಭಾರತೀಯ ಬಿಲಿಯನೇರ್ ಉದ್ಯಮಿ!