ಋತುಚಕ್ರದ ಮೊದಲು ಬಿಳಿ ಸ್ರಾವ ಮತ್ತು ನಂತರ ಕಂದು ಸ್ರಾವ ಏಕೆ?
Kannada
ಋತುಚಕ್ರದ ಮುನ್ಸೂಚನೆಗಳು
ಪೀರೆಡ್ಸ್‌ಗೂ ಮೊದಲು ಪ್ರತಿಯೊಬ್ಬರಿಗೂ ಕೆಲ ಸೂಚನೆಗಳು ಸಿಗುತ್ತವೆ. ಕೆಲವರಿಗೆ ಸ್ತನದಲ್ಲಿ ನೋವು ಕಾಣಿಸಿಕೊಂಡರೆ, ಇನ್ನು ಕೆಲವರಿಗೆ ಬಿಸಿ ಅನಿಸಬಹುದು. ಆದರೆ ಎಲ್ಲರಲ್ಲೂ ಸಾಮಾನ್ಯವಾಗಿ ಕಂಡುಬರುವುದು ಬಿಳಿ ಸ್ರಾವ.
Kannada
ಬಿಳಿ ಸ್ರಾವ ಎಂದರೇನು?
ಋತುಚಕ್ರದ ಮೊದಲು ಹುಡುಗಿಯರಿಗೆ ಬಿಳಿ ಸ್ರಾವ ಆಗುವುದು ಸಹಜ. ಇದನ್ನು ಲ್ಯುಕೋರಿಯಾ (Leukorrhea) ಎಂದು ಕರೆಯಲಾಗುತ್ತದೆ. ಈ ಸ್ರಾವವು ಈಸ್ಟ್ರೋಜನ್ ಹಾರ್ಮೋನ್ ಹೆಚ್ಚಳದಿಂದ ಉಂಟಾಗುತ್ತದೆ.
Kannada
ಋತುಚಕ್ರದ ಸೂಚನೆ
ಇದು ಋತುಚಕ್ರ ಪ್ರಾರಂಭವಾಗುವ ಸೂಚನೆಯಾಗಿದೆ. ನಿಮಗೆ ಬಿಳಿ ಸ್ರಾವ ಆಗುತ್ತಿದ್ದರೆ, ಎರಡು ಅಥವಾ ಮೂರು ದಿನಗಳಲ್ಲಿ ಋತುಚಕ್ರ ಪ್ರಾರಂಭವಾಗಬಹುದು ಎಂದು ಅರ್ಥ.
Kannada
ಋತುಚಕ್ರದ ನಂತರ ಕಂದು ಸ್ರಾವ
ಋತುಚಕ್ರದ ನಂತರ ಹುಡುಗಿಯರಿಗೆ ಹೆಚ್ಚಾಗಿ ಕಂದು ಸ್ರಾವ ಆಗುವುದು ಸಹಜ. ಈ ಬಣ್ಣವು ಹಳೆಯ ರಕ್ತವು ನಿಧಾನವಾಗಿ ದೇಹದಿಂದ ಹೊರಹೋಗುತ್ತಿದೆ ಎಂಬುದರ ಸೂಚನೆಯಾಗಿದೆ.
Kannada
ಕಂದು ಬಣ್ಣ ಕೂಡ ಋತುಚಕ್ರದ ರಕ್ತ
ಋತುಚಕ್ರದ ಕೊನೆಯ ದಿನಗಳಲ್ಲಿ ರಕ್ತದ ಹರಿವು ನಿಧಾನವಾಗುತ್ತದೆ, ಇದರಿಂದಾಗಿ ರಕ್ತವು ಆಕ್ಸಿಡೀಕರಣಗೊಂಡು ಕಂದು ಬಣ್ಣಕ್ಕೆ ತಿರುಗುತ್ತದೆ. ಇದು ಯೋನಿಯ ಶುಚಿಗೊಳಿಸುವ ಪ್ರಕ್ರಿಯೆಯ ಒಂದು ಭಾಗ.
Kannada
ಯಾವಾಗ ಚಿಂತಿಸಬೇಕು?
ಬಿಳಿ ಸ್ರಾವದಿಂದ ದುರ್ವಾಸನೆ ಬರುತ್ತಿದ್ದರೆ, ತುರಿಕೆ ಉಂಟಾಗುತ್ತಿದ್ದರೆ, ಅದೇ ರೀತಿ ಕಂದು ಸ್ರಾವವು ದೀರ್ಘಕಾಲದವರೆಗೆ ಇದ್ದರೆ ಅಥವಾ ದುರ್ವಾಸನೆ ಬರುತ್ತಿದ್ದರೆ, ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಬೇಕು.